/newsfirstlive-kannada/media/media_files/2025/10/09/bigg-boss-12-2025-10-09-09-09-55.jpg)
ಬಿಗ್‌ಬಾಸ್ ಸೀಸನ್ 12ನಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಇರೋದು ಪಕ್ಕಾ ಅನ್ನೋ ಸುಳಿವು ಮೊದ್ಲೆ ಸಿಕ್ಕಿತ್ತು. ಆದ್ರೆ, ಇಷ್ಟು ಬೇಗನೇ ಸಿಗುತ್ತೆ ಅಂತಾ ಯಾರಿಗೂ ಗೊತ್ತಿರಲಿಲ್ಲ. ನಿಮಗೆಲ್ಲಾ ಗೊತ್ತಿರೋ ಹಾಗೇ, ಈ ವಾರ ಮಿಡ್ ಸೀಸನ್ ಫಿನಾಲೆ ಇದೆ. ಕನಿಷ್ಟ ಅಂದ್ರೂ 6 ಸ್ಪರ್ಧಿಗಳು ಎಲಿಮನೇಟ್ ಆಗುವ ಸಾಧ್ಯತೆ ಇದೆ ಅಂತಾ ಹೇಳಲಾಗ್ತಿದೆ. ಆದ್ರೆ, ಅದಕ್ಕೂ ಮುನ್ನವೇ ಬಿಗ್‌ಬಾಸ್ ಇನ್ನೊಂದು ಶಾಕ್ ಕೊಡಲು ಸಜ್ಜಾಗಿದ್ದಾರೆ ಅಂತಾ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಪದ್ಮಾವತಿ ಧಾರಾವಾಹಿ ಖ್ಯಾತಿಯ ದೀಪ್ತಿ ಮನ್ನೆಗೆ ಕಂಕಣಭಾಗ್ಯ : ಹುಡುಗ ಯಾರು ಗೊತ್ತಾ?
ಸದ್ಯ ಧ್ರುವಂತ್, ಅಭಿಷೇಕ್, ಅಶ್ವಿನಿ, ಎಸ್.ಎನ್, ಧನುಷ್, ಜಾನ್ವಿ, ಮಂಜು ಭಾಷಿಣಿ, ರಾಶಿಕಾ, ರಕ್ಷಿತಾ, ಗಿಲ್ಲಿ ನಟ, ಸತೀಶ್ ಕಡಬಮ್, ಚಂದ್ರಪ್ರಭ, ಮಲ್ಲಮ್ಮ, ಕಾವ್ಯ, ನಾಮೀನೇಟ್ ಆಗಿದ್ದಾರೆ. ಶಾಕಿಂಗ್ ವಿಚಾರ ಅಂದ್ರೆ, ಇವರ ಯಾರಾದ್ರೂ ಕೂಡ ಮಿಡ್ ನೈಟ್ ಎಲಿಮನೇಷನ್‌ನಿಂದ ಮನೆಗೆ ಹೋಗಬಹುದು.
ಹೌದು, ಈ ವಾರ ಪಕ್ಕಾ ಮಿಡ್‌ನೈಟ್ ಎಲಿಮನೇಷನ್ ಇರೋದು ಪಕ್ಕಾ ಆಗಿದೆ. ಹೀಗಾಗಿ, ಬಿಗ್‌ಬಾಸ್ ವೀಕ್ಷಕರಿಗೆ ಈ ವಾರ ಸರ್‌ಪ್ರೈಸ್ ನೀಡೋಕೆ ಬಿಗ್‌ಬಾಸ್ ರೆಡಿಯಾಗಿದ್ದಾರೆ. ಸದ್ಯ ಕುತೂಹಲ ಕೆರಳಿಸಿರೋ ಪ್ರಶ್ನೆ ಏನಂದ್ರೆ, ಮಿಡ್ ನೈಟ್ ಎಲಿಮನೇಷನ್‌ನಲ್ಲಿ ಹೊರಹೋಗೋದು ಯಾರು ಅನ್ನೋದು..? ಇದಕ್ಕೆ ಉತ್ತರ ಬಹುಶಃ ನಾಳೆಯ ಎಪಿಸೋಡ್‌ನಲ್ಲಿ ಸಿಗಬಹುದು.
ಇದನ್ನೂ ಓದಿ:ಹಲ್ಲು ಉಜ್ಜದಿದ್ದರೆ ಎಷ್ಟೊಂದು ಕಾಯಿಲೆ ಬರುತ್ತೆ..? ಬ್ರಷ್ ಹೇಗಿರಬೇಕು? ಎಷ್ಟು ಬಾರಿ ತಿಕ್ಕಬೇಕು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ