ಗಿಲ್ಲಿ ಕಾವ್ಯ ಸ್ನೇಹಕ್ಕೂ ಅಗ್ನಿಪರೀಕ್ಷೆ.. ಇಕ್ಕಟ್ಟಿಗೆ ಸಿಲುಕಿದ ಸ್ಪರ್ಧಿಗಳು..!

ಗಿಲ್ಲಿ ಕಾವ್ಯ ಜೋಡಿ ಬಿಗ್‌ಬಾಸ್‌ ಶುರುವಾದಾಗಿನಿಂದಲೂ ಸುದ್ದಿಯಾಗಿರುವಂತದ್ದು. ತಮ್ಮ ಬಗ್ಗೆ ಏನೇನೋ ರೂಮರ್‌ಗಳು ಬಂದ್ರೂ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತಮ್ಮ ಫ್ರೆಂಡ್‌ಶಿಪ್‌ ಮುಂದುವರಿಸಿದ್ದ ಈ ಜೋಡಿ ಈಗ ನಿಜವಾಗಿಯೂ ಇಕ್ಕಟ್ಟಿನಲ್ಲಿದೆ.

author-image
Ganesh Kerekuli
Kavya Shaiva
Advertisment

ಗಿಲ್ಲಿ ಕಾವ್ಯ ಜೋಡಿ ಬಿಗ್‌ಬಾಸ್‌ ಶುರುವಾದಾಗಿನಿಂದಲೂ ಸುದ್ದಿಯಾಗಿರುವಂತದ್ದು. ತಮ್ಮ ಬಗ್ಗೆ ಏನೇನೋ ರೂಮರ್‌ಗಳು ಬಂದ್ರೂ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತಮ್ಮ ಫ್ರೆಂಡ್‌ಶಿಪ್‌ ಮುಂದುವರಿಸಿದ್ದ ಈ ಜೋಡಿ ಈಗ ನಿಜವಾಗಿಯೂ ಇಕ್ಕಟ್ಟಿನಲ್ಲಿದೆ. 

ಬಿಗ್‌ಬಾಸ್‌ನಲ್ಲಿ ಈ ವಾರ ಟಾಸ್ಕ್‌ಗಳಿಲ್ಲ. ಹೀಗಾಗಿ ತಮ್ಮನ್ನು ತಾವು ನಾಮಿನೇಷನ್‌ನಿಂದ ಉಳಿಸಿಕೊಳ್ಳೋಕೆ ಸ್ಪರ್ಧಿಗಳು ಹೆಣಗಾಡುತ್ತಿದ್ದಾರೆ. ಇದೇ ಈಗ ಗಿಲ್ಲಿ ಕಾವ್ಯ ಸ್ನೇಹಕ್ಕೂ ಅಗ್ನಿಪರೀಕ್ಷೆಯಂತಾಗಿದೆ. ನಿನ್ನೆಯ ಎಪಿಸೋಡ್‌ನಲ್ಲಿ ಧನುಷ್‌ ತನ್ನ ಮನೆಯಿಂದ ಬಂದ ಪತ್ರದ ಬದಲಾಗಿ ಅಭಿಷೇಕ್‌ ಪತ್ರವನ್ನು ಆಯ್ಕೆ ಮಾಡಿ ಅವರನ್ನು ನಾಮಿನೇಷನ್‌ನಿಂದ ಉಳಿಸಿಕೊಂಡಿದ್ದರು. ಅದೇ ಪರಿಸ್ಥಿತಿ ಈಗ ಗಿಲ್ಲಿ ಕಾವ್ಯ ಮಧ್ಯ ಬಂದಿದೆ.

ಇಬ್ಬರನ್ನೂ ಕರೆದಿರುವ ಬಿಗ್‌ಬಾಸ್‌ ಗಿಲ್ಲಿಯ ಎದುರು ಕಾವ್ಯ ಮನೆಯಿಂದ ಬಂದ ಪತ್ರವನ್ನೂ ಕಾವ್ಯಳ ಎದುರು ಗಿಲ್ಲಿ ಮನೆಯಿಂದ ಬಂದ ಪತ್ರವನ್ನೂ ಇಟ್ಟಿದ್ದಾರೆ. ಅಷ್ಟೇ ಅಲ್ಲದೆ ಪತ್ರವನ್ನು ಎತ್ತಿಕೊಂಡು ಹೋಗಬಹುದು ಅಥವಾ ಅಲ್ಲೇ ಬಿಟ್ಟೂ ಹೋಗಬಹುದು ಅನ್ನೋ ಅಪ್ಶನ್‌ ಬೇರೆ ಕೊಟ್ಟಿದ್ದಾರೆ. 

ಪತ್ರ ಎತ್ತಿಕೊಂಡು ಹೋದರೆ ಯಾರ ಪತ್ರ ತೆಗೆದುಕೊಂಡು ಹೋಗಿದ್ದಾರೋ ಅವರು ಸೇಫ್‌ ಆಗುತ್ತಾರೆ. ಯಾರ ಪತ್ರ ಉಳಿಯುತ್ತದೆಯೋ ಅವರು ನಾಮಿನೇಟ್‌ ಆಗಿಯೇ ಉಳಿಯುತ್ತಾರೆ. ಗಿಲ್ಲಿಗೆ ಕಾವ್ಯ ತನ್ನ ಮೇಲೆ ಇಟ್ಟಿರೋ ನಂಬಿಕೆಯನ್ನು ಉಳಿಸಿಕೊಳ್ಳಬೇಕೆಂಬ ತವಕವಾದರೆ, ಕಾವ್ಯ ತಾನೇನು ಮಾಡಲಿ ಅನ್ನೋ ಕನ್‌ಫ್ಯೂಶನ್‌ನಲ್ಲಿದ್ದಾರೆ. ಗಿಲ್ಲಿ ಕಾವ್ಯಳ ಮೇಲಿಟ್ಟಿರೋ ನಂಬಿಕೆ ಕಾವ್ಯ ಗಿಲ್ಲಿ ಮೇಲೆ ಇಟ್ಟಿರೋ ಸ್ನೇಹ ಉಳಿಯುತ್ತಾ? ನೋಡಿ ಬಿಗ್‌ಬಾಸ್‌ನಲ್ಲಿ.

ಇದನ್ನೂ ಓದಿ: BBK12 ಸೂರಜ್‌ ಮಳ್ಳನಾ? ಕ್ಲಾರಿಟಿ ಕೊಟ್ರಾ ರಿಷಾ ಗೌಡ..? VIDEO

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bigg Boss Kannada 12 BBK12 Bigg boss
Advertisment