/newsfirstlive-kannada/media/media_files/2025/08/06/amruthadhaare-2025-08-06-11-36-01.jpg)
ಅಮೃತಾಧಾರೆ ಸೀರಿಯಲ್ನಲ್ಲಿ ಮಹಾ ಟ್ವಿಸ್ಟ್ವೊಂದು ಎದುರಾಗಿದೆ. ಕೊನೆಗೂ ಭೂಮಿಕಾ ಮುಂದೆ ಕಪಟ ನಾಟಕ ಸೂತ್ರಧಾರಿ ಶಕುಂತಲಾಳ ಮುಖವಾಡ ಕಳಚಿ ಬಿದ್ದಿದೆ.
ಇದನ್ನೂ ಓದಿ:ಧರ್ಮಸ್ಥಳ ಕೇಸ್ಗೆ ಅತಿದೊಡ್ಡ ಟ್ವಿಸ್ಟ್.. ನಿನ್ನೆ ಸಿಕ್ಕಿದ್ದು ಒಂದಲ್ಲ.. ಬರೋಬ್ಬರಿ 3 ಅಸ್ಥಿಪಂಜರ..!
ಮನೆಯಲ್ಲೇ ಇದ್ದುಕೊಂಡು ಮಗುವಿಗೆ ಏನಾದ್ರೂ ಅನಾಹುತ ಮಾಡುತ್ತಾಳೆ ಅನ್ನೋ ಸತ್ಯವನ್ನು ಗೌತಮ್ ತಾಯಿ ಭೂಮಿಕಾಗೆ ಹೇಳಿದ್ದಾರೆ. ಮಾತು ಬರುತ್ತಿದ್ದರು, ಒಳ್ಳೆಯ ಸಮಯ ನೋಡಿಕೊಂಡು ಮಾತಾಡೋಣ ಅಂತ ಸುಮ್ಮನಿಗೂ ಗೌತಮ್ ತಾಯಿ ಭಾಗ್ಯ ಅಸಲಿ ಸತ್ಯ ಏನು ಎಂದು ಹೇಳಿಬಿಟ್ಟಿದ್ದಾಳೆ.
ಇದೇ ವಿಚಾರ ಕೇಳಿದ ಭೂಮಿಕ ಫುಲ್ ಶಾಕ್ ಆಗಿದ್ದಾರೆ. ಅದೇ ಸಿಟ್ಟಿನಲ್ಲಿ ನೇರವಾಗಿ ಶಕುಂತಲಾಳ ಬಳಿಗೆ ಹೋಗಿ ನೀವು ಅಮೃತದ ಲೇಬಲ್ ಹಾಕಿರೋ ವಿಷ ಅಂತ ಭೂಮಿಕಾ ಕೆಂಡ ಕಾರಿದ್ದಾಳೆ. ಆಗ ಶಾಕುಂತಲ ನಿನಗೆ ಏನ್ ಗೊತ್ತಾಗಿದೇಯೋ ಅದೇ ಸತ್ಯ, ನೀನು ಯದ್ಧವನ್ನು ಡಿಕ್ಲೈರ್ ಮಾಡಿದ್ದೀಯಾ, ನಾನು ಅದನ್ನ ನೆಕ್ಸ್ಟ್ ಲೆವೆಲ್ಗೆ ತೆಗೆದುಕೊಂಡು ಹೋಗ್ತೀನಿ ಎಂದಿದ್ದಾರೆ. ಆಗ ಅದಕ್ಕೆ ಈ ಭೂಮಿಕಾ ಬಿಡೋದಿಲ್ಲ. ಆಟ ಈಗ ಶುರು ಅಂತ ಭೂಮಿಕಾ ಶಾಕುಂತಲಗೆ ಸವಾಲ್ ಹಾಕಿದ್ದಾಳೆ.
ಇನ್ನೂ, ಇದೇ ಪ್ರೋಮೋ ನೋಡಿದ ವೀಕ್ಷಕರು, ಇಷ್ಟು ದಿನ ಒಂದ್ ಲೆಕ್ಕ, ಆದ್ರೆ ಇನ್ನೂ ಮುಂದೆ ಬೇರೆನೇ ಲೆಕ್ಕ, ಅಸಲಿ ಆಟ ಇನ್ನು ಮೇಲೆ ಶುರು, ಸೂಪರ್ ಭೂಮಿಕಾ ಟೀಚರ್, ಭೂಮಿಕ ಸವಾಲ್ ತುಂಬಾ ಇಷ್ಟ ಆಯಿತು ಅಂತೆಲ್ಲಾ ಕಾಮೆಂಟ್ಸ್ ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ