/newsfirstlive-kannada/media/media_files/2025/08/05/shravani-subramanya-2025-08-05-09-15-36.jpg)
ಸೀರಿಯಲ್ ಪ್ರಿಯರಿಗೆ ಭರ್ಜರಿ ಮನರಂಜನೆ ನೀಡ್ತಿದೆ ಶ್ರಾವಣಿ ಸುಬ್ರಮಣ್ಯ. ಟಿಆರ್​ಪಿ ಲಿಸ್ಟ್​ನಲ್ಲೂ ಉತ್ತಮ ಸ್ಥಾನ ಕಾಯ್ದುಕೊಂಡು ಬಂದಿದೆ. ಈಗ ಶ್ರಾವಣಿ ಸುಬ್ರಮಣ್ಯ ಸೀರಿಯಲ್​ ಹೊಸ ಟ್ವಿಸ್ಟ್​ ಎದುರಾಗಿದೆ.
ಇದನ್ನೂ ಓದಿ:ಬೆಳಗ್ಗೆ 6 ಗಂಟೆಯಿಂದ ಮುಷ್ಕರ.. ಬಸ್ ಡಿಪೋ ಕಡೆಗೆ ಹೋಗಬೇಡಿ, ಮನೆಯಲ್ಲಿ ಇರಿ; ಅನಂತ
/filters:format(webp)/newsfirstlive-kannada/media/media_files/2025/08/05/shravani-subramanya1-2025-08-05-09-31-42.jpg)
ಮದನ್​ ಮೋಸದ ಪ್ರೀತಿಯ ಬಲೆಯಲ್ಲಿ ಮುಗ್ಧ ಹುಡುಗಿ ಸಾವಿತ್ರ ಬಿದ್ದಿದ್ದಾಳೆ. ಮದನ್​ನನ್ನು ಸಂಪೂರ್ಣವಾಗಿ ನಂಬಿ ಆತನೇ ನನ್ನ ಗಂಡ ಅಂತ ಅಂದುಕೊಂಡಿದ್ದಾಳೆ. ಜೊತೆಗೆ ಮದನ್​ ತಾಯಿ ವಿಜಯಾಂಬಿಕಾಳನ್ನು ಅತ್ತೆ ಅಂತ ಮನಸ್ಸಲ್ಲಿ ಇಟ್ಟುಕೊಂಡು ಸೇವೆ ಮಾಡೋದಕ್ಕೆ ಮುಂದಾಗಿದ್ದಾಳೆ ಸಾವಿತ್ರಿ. ಇದಿಷ್ಟು ತೆರೆಮೇಲಿನ ಸ್ಟೋರಿ.
/newsfirstlive-kannada/media/post_attachments/wp-content/uploads/2024/10/kannada-serial1.jpg)
ಆದ್ರೆ, ತೆರೆಹಿಂದಿನ ಇಂಟ್ರಸ್ಟಿಂಗ್​ ಸ್ಟೋರಿಯೊಂದು ಸಿಕ್ಕಿದೆ. ನನ್ನ ಪ್ರೀತಿಯನ್ನು ಒಪ್ಪಿಕೊಳ್ಳದಿದ್ದರೇ ನಾನು ಜೀವ ಬಿಡುತ್ತೇನೆ ಅಂತ ಮದನ್​ ಸಾವಿತ್ರಿಗೆ ಬ್ಲಾಕ್​ಮೇಲ್ ಮಾಡಿದ್ದಾನೆ. ಇದೇ ಸೀನ್​ನ ಸಣ್ಣದೊಂದು ಕ್ಲಿಪ್​ ಅನ್ನು ಸಾವಿತ್ರಿ ಪಾತ್ರಧಾರಿ ನಟಿ ರಕ್ಷಿತಾ ಭಾಸ್ಕರ್​ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
/filters:format(webp)/newsfirstlive-kannada/media/media_files/2025/08/05/shravani-subramanya2-2025-08-05-09-34-25.jpg)
ಇದೇ ವಿಡಿಯೋದಲ್ಲಿ ಮದನ್​​ ಹಾಗೂ ಸಾವಿತ್ರಿ ಹೇಗೆ ಸೀನ್​ನಲ್ಲಿ ನಟಿಸಿದ್ದಾರೆ ಎಂದು ಗೊತ್ತಾಗಲಿದೆ. ಇದೇ ವಿಡಿಯೋದಲ್ಲಿ ಮದನ್​ ಪಾತ್ರಧಾರಿ ನನಗೆ ಯಾರೂ ಬೈಬೇಡಿ, ನನ್ನ ನಟನೆ ನೋಡಿ ಎಲ್ಲರೂ ಬೈರ್ತಾರೆ ಎಂದಿದ್ದಾರೆ. ಸದ್ಯ ಇದೇ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು, ಕಾಮೆಂಟ್ಸ್​ ಮಾಡುವ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us