/newsfirstlive-kannada/media/media_files/2025/08/04/ananta_subbarao-2025-08-04-23-05-40.jpg)
ಬೆಂಗಳೂರು: ನಾಳೆ ಸಾರಿಗೆ ಮುಷ್ಕರ ನಡೆಯುವುದರಿಂದ ಎಲ್ಲ ಸಾರಿಗೆ ನೌಕರರು ಶಾಂತಿಯುತವಾಗಿ ಪಾಲ್ಗೊಳ್ಳಬೇಕು. ಬೆಳಗ್ಗೆ 6 ಗಂಟೆಯಿಂದ ಮುಷ್ಕರ ಆರಂಭವಾಗುತ್ತಿದ್ದು ನೌಕರರು ಬಸ್ ಡಿಪೋ ಕಡೆ ಹೋಗಬೇಡಿ. ರ್ಯಾಲಿ, ಪ್ರತಿಭಟನೆ ಬಗ್ಗೆ ಸಭೆಯಲ್ಲಿ ನಿರ್ಧಾರ ಮಾಡಿ ತಿಳಿಸುತ್ತೇವೆ ಎಂದು ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅನಂತ ಸುಬ್ಬರಾವ್ ಅವರು ಹೇಳಿದ್ದಾರೆ.
ಹಿಂದಿನ ವೇತನ ಒಪ್ಪಂದ ಶೇಕಡಾ 15 ರಷ್ಟು ಅದರ ಕಡೆಯಿಂದ ಬರಬೇಕಾದ 38 ತಿಂಗಳ ಬಾಕಿ ವೇತನ ಕೊಡಬೇಕು. 2024ರ ಜನವರಿಯಿಂದ ಹೊಸ ವೇತನ ಆಯೋಗ ಪರಿಷ್ಕರಣೆ ಮಾಡಬೇಕು. ನಮಗೆ ಸರ್ಕಾರಕ್ಕೆ ಕಗ್ಗಂಟು ಏನು ಎಂದರೆ, ಬಾಕಿ ಹಣ ಕೊಡಬೇಕಾಗಿಲ್ಲ ಎಂದು ಸಿಎಂ ಹೇಳುತ್ತಿದ್ದಾರೆ. ಇನ್ನೊಂದು 2023ರ ಫೆಬ್ರುವರಿಯಲ್ಲಿ ಕೊಟ್ಟಿದ್ದರಿಂದ ಮುಂದಿನ ವೇತನ ಆಯೋಗದ ಪರಿಷ್ಕರಣೆಗೆ 4 ವರ್ಷ ಕಾಯಬೇಕು ಎನ್ನುತ್ತಿದ್ದಾರೆ ಎಂದು ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅನಂತ ಸುಬ್ಬರಾವ್ ಅವರು ಹೇಳಿದ್ದಾರೆ.
ಇದನ್ನೂ ಓದಿ:ನಾಳೆ ಸಾರಿಗೆ ಮುಷ್ಕರ ಮಾಡಲಿಲ್ಲ ಅಂದ್ರೆ 21 ದಿನ ಮಾಡಂಗಿಲ್ಲ; ಹೈಕೋರ್ಟ್ ವಕೀಲ ನಟರಾಜ್
2014ರಲ್ಲಿ ಬೇಡಿಕೆಗಳನ್ನು ಕೊಟ್ಟಿದ್ದೇವೆ. 16 ತಿಂಗಳು ಮಾತುಕತೆಯಲ್ಲಿ ನಡೆದಿದ್ದು ಆ ಮಾತು ಯಾವಾಗಲು ಬಂದಿಲ್ಲ. ಸರ್ಕಾರಕ್ಕೆ ಪ್ರಯಾಣ ದರ ಹೆಚ್ಚು ಮಾಡಬೇಕು ಎಂದು ಹೇಳಿಕೊಟ್ಟಿದ್ದೇವು. ಅವರು ಕೊಟ್ಟರೇ ನಿಮ್ಮ ವೇತನ ಒಪ್ಪಂದ ಮಾಡುತ್ತೇವೆ ಎಂದು ಹೇಳಿದ್ದರು. ನಮ್ಮ ಬೇಡಿಕೆಗಳು 12 ಇದ್ದರೂ ಸರ್ಕಾರ ಮೊದಲು 38 ತಿಂಗಳ ವೇತನ 1800 ಕೋಟಿ ರೂಪಾಯಿಗಳು ಕೊಡಬೇಕು. 2024ರ ವೇತನ ಪರಿಷ್ಕರಣೆ ಮಾಡಬೇಕು. ಆದರೆ ಇದನ್ನು ಸರ್ಕಾರ ಮಾಡುತ್ತಿಲ್ಲ ಎಂದು ಹೇಳಿದ್ದಾರೆ.
ಕಾನೂನು ಪ್ರಕಾರ ನೋಟಿಸ್ ಕೊಟ್ಟು ಮುಷ್ಕರಕ್ಕೂ ಮೊದಲೇ ಕರೆಯಿರಿ ಎಂದು ಹೇಳಿದ್ದೇವು. ಆದರೆ ಇವರು ಮುಷ್ಕರ ಹಿಂದಿನ ದಿನ ಕರೆದಿದ್ದಾರೆ. ಇವತ್ತು ಎರಡು ಗಂಟೆ ನಡೆದ ಸಭೆಯಲ್ಲಿ ಅವರ ನಿರ್ಧಾರ ಏನಿತ್ತು ಎಂದರೆ 14 ತಿಂಗಳ ಬಾಕಿ ಹಣ ಕೊಡುತ್ತೇವೆ. ಇನ್ನು 2024ರ ಜನವರಿಯಿಂದ ವೇತನ ಒಪ್ಪಂದ ಏನಿದೆ ಅದನ್ನು ಸೆಷನ್ ಆದ ಮೇಲೆ ಮಾತಾಡೋಣ ಎಂದಿದ್ದರು. ಇದಕ್ಕೆ ನಮಗೆ ಒಪ್ಪಿಗೆ ಆಗಲಿಲ್ಲ. ಹಾಗಾಗಿ ನಾಳೆ 6 ಗಂಟೆಯಿಂದಲೇ ಮುಷ್ಕರ ನಡೆಯುತ್ತದೆ ಎಂದು ಅನಂತ ಸುಬ್ಬರಾವ್ ಅವರು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ