Advertisment

ಮನೆಯಿಂದ ಆಚೆ ಹೋಗಲು ಯಾರೆಲ್ಲ ನಾಮಿನೇಟ್​..? ಯಾರಿಗೆ ಗೇಟ್​ಪಾಸ್​..?

ಬಿಗ್​ಬಾಸ್​​ನಿಂದ ಈ ಹೊರ ಕಳುಹಿಸಲು ಸ್ಪರ್ಧಿಗಳ ನಾಮಿನೇಷನ್ ನಿನ್ನೆ ನಡೆಯಿತು. ಅಶ್ವಿನಿ ಗೌಡ, ಜಾಹ್ನವಿ, ಗಿಲ್ಲಿ, ರಾಶಿಕಾ ಶೆಟ್ಟಿ, ಧ್ರುವಂತ್, ರಕ್ಷಿತಾ ಶೆಟ್ಟಿ ಹಾಗೂ ಸ್ಪಂದನಾ ನಾಮಿನೇಟ್ ಆಗಿದ್ದಾರೆ. 7 ಸ್ಪರ್ಧಿಗಳು ಮನೆಯಿಂದ ಆಚೆ ಹೋಗಲು ಆಯ್ಕೆ ಆಗಿದ್ದು, ಯಾರು ಔಟ್ ಆಗುತ್ತಾರೆ ಕುತೂಹಲ ಇದೆ.

author-image
Ganesh Kerekuli
Bigg Boss (15)
Advertisment

ಬಿಗ್​ಬಾಸ್​ ಮನೆಯಿಂದ ಈ ಹೊರ ಕಳುಹಿಸಲು ಸ್ಪರ್ಧಿಗಳ ನಾಮಿನೇಷನ್ ಪ್ರಕ್ರಿಯೆ ನಿನ್ನೆ ನಡೆಯಿತು. ಅಶ್ವಿನಿ ಗೌಡ, ಜಾಹ್ನವಿ, ಗಿಲ್ಲಿ, ರಾಶಿಕಾ ಶೆಟ್ಟಿ, ಧ್ರುವಂತ್, ರಕ್ಷಿತಾ ಶೆಟ್ಟಿ ಹಾಗೂ ಸ್ಪಂದನಾ ನಾಮಿನೇಟ್ ಆಗಿದ್ದಾರೆ. ಒಟ್ಟು 7 ಸ್ಪರ್ಧಿಗಳು ಮನೆಯಿಂದ ಆಚೆ ಹೋಗಲು ಆಯ್ಕೆ ಆಗಿದ್ದು, ಯಾರು ಔಟ್ ಆಗುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ.

Advertisment

ಯಾರೆಲ್ಲ ಸೇಫ್..? 

ವೈಲ್ಡ್​ ಕಾರ್ಡ್​ ಮೂಲಕ ಎಂಟ್ರಿ ಕೊಟ್ಟಿರುವ  ಮೂವರು ಸದಸ್ಯರಾದ  ಮ್ಯೂಟಂಟ್ ರಘು, ರಿಷಾ ಗೌಡ ಹಾಗೂ ಸೂರಜ್ ಸಿಂಗ್ ಮುಂದಿನ ವಾರಕ್ಕೆ ಇಮ್ಯುನಿಟಿ ಪಡೆದಿದ್ದಾರೆ. ವೈಲ್ಡ್ ಕಾರ್ಡ್​ ಸ್ಪರ್ಧಿಗಳ ಹೃದಯ ಗೆದ್ದಿರುವ ಕಾಕ್ರೋಚ್ ಸುಧಿ, ಅಭಿಷೇಕ್ ಹಾಗೂ ಮಲ್ಲಮ್ಮ ಕೂಡ ನಾಮಿನೇಷನ್​​ನಿಂದ ಪಾರಾಗಿದ್ದಾರೆ. ಇನ್ನು, ಕಾವ್ಯ ಶೈವ, ಚಂದ್ರಪ್ರಭ, ಧನುಷ್ ಹಾಗೈ ಮಾಳು ಅವರ ಹೆಸರನ್ನು ನಾಮಿನೇಷನ್​ ವೇಳೆ ಯಾರೂ ಸೂಚಿಸಿಲ್ಲ. ಸದ್ಯ ಅವರು ಬಚಾವ್ ಆಗಿದ್ದಾರೆ. 

ಇದನ್ನೂ ಓದಿ: ಇಲ್ಲಿ ದೀಪಾವಳಿ ತುಂಬಾನೇ ಸ್ಪೆಷಲ್ಲಾಗಿದೆ.. ಪ್ರತ್ಯೇಕವಾಗಿ ಆಚರಿಸೋದು ಯಾಕೆ..?

Risha Gowda

ಕಳೆದ ವಾರ ವೀಕೆಂಡ್​ನಲ್ಲಿ ಮಿಡ್​ ಸೀಸನ್ ಫಿನಾಲೆ ನಡೆದಿತ್ತು. ಈ ವೇಳೆ ಡಾಗ್ ಸತೀಶ್ ಅವರನ್ನು ಮಿಡ್​ನೈಟ್ ಎಲಿಮಿನೇಷನ್ ಮೂಲಕ ಹೊರ ಕಳುಹಿಸಲಾಗಿತ್ತು. ನಂತರ ಮಂಜು ಭಾಷಿಣಿ ಹಾಗೂ ಅಶ್ವಿನಿ ಎನ್​.ಎಸ್​ ಅವರು ವೀಕೆಂಡ್​ನಲ್ಲಿ ಮನೆಯಿಂದ ಹೊರ ಬಂದಿದ್ದರು. ಅಂತೆಯೇ ಈ ವಾರ ಯಾರು ಮನೆಯಿಂದ ಹೊರ ಬರುತ್ತಾರೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ.  

Advertisment

ಇದನ್ನೂ ಓದಿ: ಹೃದಯ ಕೊಟ್ಟಿದ್ದ ಗಿಲ್ಲಿಗೆ ಶಾಕ್.. ಕಾಕ್ರೋಚ್ ಹೃದಯಾನ ಒಪ್ಪಿಕೊಂಡ ರಿಷಾ ಗೌಡ..!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

BBK12 Ashwini Gowda Bigg Boss bigg boss kavya bigg boss jahnavi Bigg Boss Kannada 12
Advertisment
Advertisment
Advertisment