/newsfirstlive-kannada/media/media_files/2025/10/21/gill-and-risha-2025-10-21-22-49-26.jpg)
ಬಿಗ್​ಬಾಸ್​ (Bigg Boss) ಮನೆಗೆ ಸೋಮವಾರ ಮೂವರು ಸ್ಪರ್ಧಿಗಳ ವೈಲ್ಡ್​ ಕಾರ್ಡ್​ ಎಂಟ್ರಿಯಾಗಿದೆ. ರಿಷಾ, ಸೂರಜ್ ಹಾಗೂ ಮ್ಯೂಟಂಟ್ ರಘು. ಈ ಮೂವರು ಕೂಡ ಈಗಾಗಲೇ ಮನೆಯೊಳಗೆ ಇರುವ ಸ್ಪರ್ಧಿಗಳ ಮೇಲಿನ ಅಭಿಪ್ರಾಯವನ್ನು ವಿಭಿನ್ನವಾಗಿ ಹಂಚಿಕೊಂಡಿದ್ದರು.
‘ಗಿಲ್ಲಿ ಮತ್ತು ರಿಷಾ ನಡುವೆ ಕುಚ್ ಕುಚ್ ಹೋತಾ ಹೈ’ ಎಂಬ ಸೌಂಡು ಸಖತ್ ಜೋರಾಗಿದೆ. ಬಿಗ್​ಬಾಸ್ ಮನೆಯೊಳಗೆ ಇರುವ ಸ್ಪರ್ಧಿಗಳು, ವೈಲ್ಡ್​ ಕಾರ್ಡ್​ ಸದಸ್ಯರ ಬಗ್ಗೆ ಅಭಿಪ್ರಾಯ ತಿಳಿಸಲು ಸೂಚಿಸಿದ್ದರು. ಅಂತೆಯೇ ನಿನ್ನೆಯ ದಿನ ಗಿಲ್ಲಿ ಹೃದಯ ಕೊಡುವಾಗ ರಿಷಾರನ್ನು ಹೊಗಳಿದ್ದು ವೀಕ್ಷಕರ ಎದೆಗೆ ನಾಟುವಂತೆ ಇತ್ತು. ಗಿಲ್ಲಿಯೇ ಹೇಳುವಂತೆ.. ನಾನು ರಿಷಾ ಬಗ್ಗೆ ಹೇಳಲೇಬೇಕು. ನಿಜವಾಗಿಯೂ ಫಸ್ಟ್​ ಬಂದಾಗ ನಾನೇ ಅವರನ್ನು ನೋಡಿದೆ. ನೋಡುತ್ತಿದ್ದಂತೆಯೇ ಜನುಮ ಜನುಮಗಳ ಅನುಬಂಧ ಅನಿಸಿಬಿಟ್ಟಿತು..
ಇದನ್ನೂ ಓದಿ: ರಿಷಾ ಗೌಡಗೆ ಹೃದಯ ಕೊಟ್ಟ ಕಾಕ್ರೋಚ್​.. ಮನಸು ಗೆದ್ದೇ ಬಿಟ್ಟಳಾ ಚೆಂದುಳ್ಳಿ..?
/filters:format(webp)/newsfirstlive-kannada/media/media_files/2025/10/14/bigg-boss-kavya-gilli-2025-10-14-11-36-42.jpg)
ನಾವು ಯಾವತ್ತೂ ಮೊದಲು ಭೇಟಿ ಆಗಿರಲಿಲ್ಲ. ಇದೇ ಮೊದಲ ಬಾರಿಗೆ ಭೇಟಿ ಆಗ್ತಿರೋದು. ಆದರೆ ನಮ್ಮಿಬ್ಬರ ಒಲವು ತುಂಬಾನೇ ಇಷ್ಟ ಆಗ್ತಿದೆ. ಅವರು ಆಡುವ ಒಂದೊಂದು ಮಾತುಗಳು ಮುತ್ತುಗಳಂತೆ ಇರುತ್ತವೆ. ನೋಡುವ ನೋಟ ತುಂಬಾನೇ ಅದ್ಭುತ. ಅವರೆ ನೋಟವೆಲ್ಲ ಫೋಟೋಜಿನಿಕ್ ಆಗಿವೆ. ಬಿಗ್​ಬಾಸ್ ಮನೆಯ ಮೂಲೆಯಲ್ಲಿರುವ ಯಾವುದೇ ಕ್ಯಾಮೆರಾದಲ್ಲೂ ತೆಗೆದರೂ ಅವರೊಂದು ಅದ್ಭುತ. ಅಷ್ಟು ಬ್ಯೂಟಿಫುಲ್ ಆಗಿ ಕಾಣ್ತಾರೆ..
ಇದನ್ನೂ ಓದಿ: ‘ತರಕಾರಿ ಹಳಸಿ ವಾಸನೆ ಬರ್ತಿದೆ ಅಂದ್ಮೇಲೆ..’ ನೆಕ್ಸ್ಟ್​ ಎಲಿಮಿನೇಟ್ ಆಗೋರ ಹೆಸರು ಹೇಳಿದ ಮಂಜು
ನಾನು ಬಿಗ್​ಬಾಸ್ ಮನೆಯಲ್ಲಿರೋ ಮೊಟ್ಟೆ, ಹಣ್ಣು ಕದಿಯುತ್ತೀನಿ. ನೀವು ನನ್ನ ಹೃದಯವನ್ನೇ ಕದ್ದು ಬಿಟ್ಟಿದ್ದೀರಿ. ಈ ಹಾರ್ಟ್​ನ ನಾನು ರಿಷಾಗೆ ಕೊಡ್ತೀನಿ. ರಿಷಾ, ಬಿಗ್​ಬಾಸ್ ಮನೆಗೆ ಕೇಸರಿ ಬಾತ್ ಆಗಿದ್ದೀರಿ. ಈ ಗಾರ್ಡನ್ ಏರಿಯಾಗೆ ಮಾಡರ್ನ್ ಸುಂದರಿ ನೀವು. ಬಿಗ್​ ಬಾಸ್ ಎಂಬ ಮೊಸರನ್ನದಲ್ಲಿ ದಾಳಿಂಬೆ ಹಣ್ಣು ನೀವು. ನಾನು ನಿಮ್ಮ ಹೆಸರಲ್ಲಿ ದೇವಸ್ಥಾನಕ್ಕೆ ಅರ್ಚನೆ ಮಾಡಿಸೋಕೆ ಹೋಗಿದ್ದೆ. ಪೂಜಾರಿ ಕೇಳಿದರು. ನಿಮ್ಮ ನಕ್ಷತ್ರ ಯಾವುದು ಅಂತಾ. ನಾನು ಹೇಳಿದೆ, ಆಕೆ ನಕ್ಷತ್ರವಲ್ಲ ಅವಳ ಹೆಸರು ಚಂದ್ರಮಾ ಅನ್ನೋ ಮೂಲಕ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದರು.
ನನ್ನ ಹೃದಯವೇ ನೀನೇ ಎಂದು ಹಾರ್ಟ್ ಕೊಟ್ಟಿದ್ದ ಗಿಲ್ಲಿಗೆ ರಿಷಾ ಬಿಗ್ ಶಾಕ್ ಕೊಟ್ಟಿದ್ದಾಳೆ. ಗಿಲ್ಲಿ ನೀಡಿದ್ದ ಹಾರ್ಟ್​ ಅನ್ನು ಹರಿದು, ತಮ್ಮ ಹೃದಯ ಕಾಕ್ರೋಚ್​​ಗೆ ಎಂದಿದ್ದಾರೆ. ಆ ಮೂಲಕ ಗಿಲ್ಲಿಗೆ ನಿರಾಸೆಯಾಗಿದೆ.
ಇದನ್ನೂ ಓದಿ:ಮದುವೆ ಆದ ಜಾಗದಲ್ಲೇ ಮತ್ತೆ ಮದುವೆಯಾದ ಪ್ರೇಮ್ ದಂಪತಿ -VIDEO
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ