/newsfirstlive-kannada/media/media_files/2025/10/21/manju-bhashini-2025-10-21-18-23-20.jpg)
ಮುಂದಿನ ವಾರ ಬಿಗ್​ಬಾಸ್ (BBK 12) ಮನೆಯಿಂದ ಜಾಹ್ನವಿ, ಅಶ್ವಿನಿ ಗೌಡ, ಮಾಳು, ಸ್ಪಂದನಾ ಹಾಗೂ ಮಲ್ಲಮ್ಮ ಈ ಐದು ಜನರಲ್ಲಿ ಒಬ್ಬರು ಹೊರಹೋಗಬೇಕು ಎಂದು ಮಂಜು ಭಾಷಿಣಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನ್ಯೂಸ್​ಫಸ್ಟ್ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನ್ನಾಡಿರುವ ಅವರು, ಇವಾಗ ಹೋಗುತ್ತಿರುವ ಟ್ರೆಂಡ್​ನಲ್ಲಿ ಜಾನು ಮತ್ತು ಅಶ್ವಿನಿ ಗೌಡ ಮನೆಯಿಂದ ಹೊರ ಹೋಗಬೇಕು. ಆದರೆ ಅವರು ಹೋಗಲ್ಲ ಅನಿಸುತ್ತೆ. ಈಗ ನನ್ನನ್ನೇ ನೋಡಿ. ನನ್ನಲ್ಲಿ ಏನೂ ಮಸಾಲಾ ಇಲ್ಲ. ನಾನು ಕೊಡೋದು ಬರೀ ಕರ್ನಾಟಕದ ಅನ್ನ, ಮೊಸರು, ಬರೀ ತಿಳಿ ಸಾರು.
ಇದನ್ನೂ ಓದಿ: ರಾಶಿಕಾ ಕಡೆಗೆ ವಾಲಿದ ರಕ್ಷಿತಾ ಶೆಟ್ಟಿ ಕಿತ್ತಾಟ.. ಬಿಗ್​ಬಾಸ್ ಮನೆಯಲ್ಲಿ ನಾಮಿನೇಷನ್ ಕಿಡಿ..!
ಉಪ್ಪಿನಕಾಯಿ, ಚಿಲ್ಲಿ ಚಿಕನ್, ಮಸಾಲಾ ಪಪ್ಪಡ್ ಏನೂ ಇಲ್ಲ. ಆದರೆ ಅವೆಲ್ಲ ಅವರು ಆಗಿದ್ದಾರೆ. ಬರೀ ಸಿಹಿ ತಿಂದುಕೊಂಡು ಇರು ಅಂದರೆ ಆಗಲ್ಲ. ಅಲ್ಲಿ ಇಂಥ ವ್ಯಕ್ತಿತ್ವ ಹೊಂದಿರೋರು ಇದ್ದಾರೆ. ವಿಲನ್ ಇಲ್ಲದೇ ಹೀರೋ ಆಗೋಕೆ ಆಗಲ್ಲ. ಬರೀ ತಮಾಷೆ ಮಾಡಿಕೊಂಡು ಇರೋಕೂ ಆಗಲ್ಲ. ಇದನ್ನೆಲ್ಲ ನೋಡಿದ್ರೆ ಅಶ್ವಿನಿ ಮತ್ತು ಜಾಹ್ನವಿ ಮುಂದಿನ ವಾರಕ್ಕೂ ಇರುತ್ತಾರೆ ಅನಿಸುತ್ತೆ..
ಇದನ್ನೂ ಓದಿ: ಬಿಗ್​ಬಾಸ್ ಮನೆಯಲ್ಲಿ ಕಾಡಿತು ದೊಡ್ಡ ಆತಂಕ.. ಕಣ್ಣೀರಿಟ್ಟ ಜಾಹ್ನವಿ.. VIDEO
ನಿಜವಾಗಿಯೂ ಹೇಳಬೇಕು ಅಂದರೆ ಒಂದು ತರಕಾರಿ ಹಾಳಾಗಿದೆ. ವಾಸನೆ ಬರುತ್ತಿದೆ ಅಂದರೆ ಅದನ್ನು ಉಳಿಸಿಕೊಳ್ಳಬೇಕೋ, ಬಿಡಬೇಕೋ ಅನ್ನೋದು ಜನರ ನಿರ್ಧಾರಕ್ಕೆ ಬಿಟ್ಟಿರೋದು. ನನ್ನ ಪ್ರಕಾರ, ಅವರಲ್ಲಿ ಒಬ್ಬರಾದರೂ ಹೋಗಬೇಕು. ಇನ್ನು ಇರೋದ್ರಲ್ಲಿ ಸ್ವಲ್ಪ ಗಾಯಕ ಮಾಳು ಡಲ್ ಇದ್ದಾರೆ. ಅವರು ಹೊರಗಡೆ ದೊಡ್ಡ ಸಿಂಗರ್ ಆಗಿರಬಹುದು. ಆದರೆ ಬಿಗ್​ಬಾಸ್ ಮನೆಯಲ್ಲಿ ಅವರಿಗೆ ಭಾಷೆ ಸಮಸ್ಯೆ ಇದೆ.
ತಮ್ಮ ಪರವೇ ಅವರು ಸ್ಟ್ಯಾಂಡ್ ತೆಗೆದುಕೊಳ್ಳಲ್ಲ. ಯಾರು ಜೋರಾಗಿ ಮಾತನ್ನಾಡುತ್ತಾರೋ, ಅವರ ಪರ ನಿಲ್ಲುತ್ತಾರೆ. ಟಾಸ್ಕ್​ ಒಂದರಲ್ಲಿ ಮಾತ್ರ ತಮ್ಮನ್ನು ನಿರೂಪಿಸಿಕೊಂಡಿದ್ದಾರೆ. ಸ್ಪಂದನಾ ಇಲ್ಲಿಯವರೆಗೆ ನ್ಯೂಟ್ರಲ್ ಆಗಿದ್ದರು. ಮಲ್ಲಮ್ಮ, ಟಾಸ್ಕ್​​ ಚೆನ್ನಾಗಿ ಆಡುತ್ತಾರೆ. ಆದರೆ ಅವರಿಗೆ ಬಿಗ್​ಬಾಸ್​ ಮನೆಯೇ ಅರ್ಥವಾಗಿಲ್ಲ. ಈ ಐದು ಜನರಲ್ಲಿ ಒಬ್ಬರು ಮುಂದಿನ ವಾರಕ್ಕೆ ಎಲಿಮಿನೇಟ್ ಆಗಬೇಕು ಅಂದುಕೊಳ್ತೀನಿ ಎಂದು ಮಂಜು ಭಾಷಿಣಿ ಹೇಳಿದ್ದಾರೆ.
ಇದನ್ನೂ ಓದಿ: ತನ್ನ ತಂದೆಯ ಜೊತೆ ಪತ್ನಿಗೆ ಅಫೇರ್ ಆರೋಪ : 33 ವರ್ಷದ ಮಗ ನಿಗೂಢ ಸಾವು, ತಂದೆ ನಿವೃತ್ತ ಡಿಜಿಪಿ ಮೇಲೆ ಅನುಮಾನ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ