/newsfirstlive-kannada/media/media_files/2025/10/21/rashika-and-rakshita-shetty-2025-10-21-17-11-39.jpg)
ಬಿಗ್​ಬಾಸ್ (Bigg Boss)​ ಮನೆಯಲ್ಲಿ ನಾಮಿನೇಷನ್​ ಕಿಡಿ ಹೊತ್ತಿಕೊಂಡಿದೆ. ಈ ವಾರ ಮನೆಯಿಂದ ಹೊರಗೆ ಕಳುಹಿಸಲು ಸ್ಪರ್ಧಿಗಳು ತಮ್ಮ ಎದುರಾಳಿಗಳ ಹೆಸರನ್ನು ಸೂಚಿಸಿದ್ದಾರೆ. ಇದೇ ನಾಮಿನೇಷನ್ ವಿಚಾರಕ್ಕೆ ರಕ್ಷಿತಾ ಶೆಟ್ಟಿ ಮತ್ತು ರಾಶಿಕಾ ಮಧ್ಯೆ ಗಲಾಟೆ ಆಗಿದೆ.
ಇಷ್ಟುದಿನ ರಕ್ಷಿತಾ ಶೆಟ್ಟಿ ಗಲಾಟೆಯು ಅಶ್ವಿನಿ ಗೌಡ, ಜಾಹ್ನವಿ ಮಧ್ಯೆ ಸುತ್ತುತ್ತಿತ್ತು. ಈ ವಾರದಿಂದ ರಾಶಿಕಾ ಕಡೆಗೆ ತಿರುಗಿದಂತೆ ಕಾಣ್ತಿದೆ. ಬಿಗ್​ಬಾಸ್​ ನಾಮಿನೇಷನ್ ಚಟುವಟಿಕೆ ನೀಡಿದ್ದರು. ಮೊದಲಿಗೆ ರಾಶಿಕಾ ಅವರನ್ನು ರಕ್ಷಿತಾ ನಾಮಿನೇಟ್ ಮಾಡಿದ್ದಾರೆ.
ಇದನ್ನೂ ಓದಿ: ಬಿಗ್​ಬಾಸ್ ಮನೆಯಲ್ಲಿ ಕಾಡಿತು ದೊಡ್ಡ ಆತಂಕ.. ಕಣ್ಣೀರಿಟ್ಟ ಜಾಹ್ನವಿ.. VIDEO
ತಮ್ಮ ನಾಮಿನೇಟ್​ಗೆ ಸಂಬಂಧಿಸಿ ಸೂಕ್ತ ಕಾರಣವನ್ನೂ ನೀಡಿದ್ದಾರೆ. ಬಿಗ್​ಬಾಸ್ ನಾನು ರಾಶಿಕಾ ಅವರ ಹೆಸರು ತೆಗೆದುಕೊಳ್ತೀನಿ. ಅವರು ವೈಯಕ್ತಿಕ ಆಟದಲ್ಲಿ ಏನು.. ಆರ್ಡರ್ ಮಾಡ್ತಾರೆ. ಅದು ತಗೋಬಾ, ಇದು ತಗೋಬಾ ಎಂದು ಹೇಳುತ್ತಾರೆ ಎಂದಿದ್ದಾರೆ.
ಅದಕ್ಕೆ ರಾಶಿಕಾ, ನಾನು ಯಾರ ಮೇಲೆ ಡಿಪೆಂಡ್ ಆಗಿದ್ದೀನಮ್ಮ ಎಂದು ಪ್ರಶ್ನೆ ಮಾಡಿದ್ದಾರೆ. ಆಗ ಇಬ್ಬರ ಮಧ್ಯೆ ಗಲಾಟೆ ಶುರುವಾಗಿದೆ. ಇಲ್ಲಿ ನೀವು ಎಲ್ಲರನ್ನೂ ರೆಸ್ಪೆಕ್ಟ್ ಮಾಡಬೇಕು ಎಂದಿದ್ದಾರೆ. ಅದಕ್ಕೆ ಕೋಪಿಸಿಕೊಳ್ಳುವ ರಾಶಿಕಾ, ಈ ಮನೆಯಲ್ಲಿ ನಿಂಗೆ ಏನೂ ಅರ್ಥಾನೇ ಆಗಲ್ಲ. ಸುಮ್ಮನೆ ಬಂದು ಬಿಟ್ಟಿದ್ದಾಳೆ ಎಂದು ಜೊರಾಗಿ ಕೂಗಿದ್ದಾರೆ. ಅದರಂತೆ ಇವತ್ತು ಬಿಗ್​ಬಾಸ್ ಮನೆಯಲ್ಲಿ ನಾಮಿನೇಷನ್ ಗಲಾಟೆ ಆಗಿದ್ದು, ವೀಕ್ಷಕರ ಎಕ್ಸೈಟ್​ಮೆಂಟ್ ಹೆಚ್ಚಿಸಿದೆ. ಅಲ್ಲದೇ ಯಾರೆಲ್ಲ ಮನೆಯಿಂದ ಆಚೆ ಹೋಗಲು ನಾಮಿನೇಟ್ ಆಗಿದ್ದಾರೆ ಅನ್ನೋದು ಇಂದು ಗೊತ್ತಾಗಲಿದೆ.
ಇದನ್ನೂ ಓದಿ: ಕನ್ನಡಿಗನ ಕಡೆಗಣಿಸಿ ಹರ್ಷಿತ್ ರಾಣಾಗೆ ಚಾನ್ಸ್​.. ಏನಿದು ವಿವಾದ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ