/newsfirstlive-kannada/media/media_files/2025/10/21/risha-gowda-2025-10-21-22-18-26.jpg)
ಬಿಗ್​ಬಾಸ್​ (Bigg Boss) ಮನೆಗೆ ನಿನ್ನೆ ಮೂವರು ಸ್ಪರ್ಧಿಗಳ ವೈಲ್ಡ್​ ಕಾರ್ಡ್​ ಎಂಟ್ರಿಯಾಗಿದೆ. ರಿಷಾ, ಸೂರಜ್ ಹಾಗೂ ಮ್ಯೂಟಂಟ್ ರಘು. ಈ ಮೂವರು ಕೂಡ ಈಗಾಗಲೇ ಮನೆಯೊಳಗೆ ಇರುವ ಸ್ಪರ್ಧಿಗಳ ಮೇಲಿನ ಅಭಿಪ್ರಾಯವನ್ನು ವಿಭಿನ್ನವಾಗಿ ಹಂಚಿಕೊಂಡಿದ್ದರು.
ಇಂದು ಬಿಗ್​ಬಾಸ್ ಮನೆಯೊಳಗೆ ಇರುವ ಸ್ಪರ್ಧಿಗಳು, ವೈಲ್ಡ್​ ಕಾರ್ಡ್​ ಸದಸ್ಯರ ಬಗ್ಗೆ ಅಭಿಪ್ರಾಯ ತಿಳಿಸಲು ಸೂಚಿಸಿದ್ದರು. ಈ ವೇಳೆ ಮಾತನ್ನಾಡಿದ ಕಾಕ್ರೋಚ್ ಸುಧಿ.. ಮ್ಯೂಟಂಟ್ ರಘು ಬರುವಾಗ ತುಂಬಾನೇ ರಾಂಗು ಅಂತೆಲ್ಲ ಬಂದರು. ಕೊನೆಗೆ ನೋಡಿದ್ರೆ ಅವರು ದೊಡ್ಡ ಸೈಜ್​ನಲ್ಲಿರುವ ಮಗು ಎನಿಸಿತು.
ಇದನ್ನೂ ಓದಿ: ಈತ ಊರಿಗೇ ಪೈಲ್ವಾನ್.. ಆದರೆ ಹೆಂಡತಿ ಮುಂದೆ ಅದ್ಯಾವುದೂ ನಡೆಯಲೇ ಇಲ್ಲ..!
ಬೆಳಗ್ಗೆ ಬಂದಾಗ ಹೆಣ್ಮಕ್ಕಳಿಗೆ ಹೋಗೆ, ಬಾರೆ ಅಂತಾ ಏಕವಚನದಲ್ಲಿ ಕರೆದಾಗ ಬೇಜಾರು ಆಯಿತು. ಉಳಿದಂತೆ ತುಂಬಾ ಒಳ್ಳೆಯವರು ಅಂದರು. ನಂತರ ಸೂರಜ್ ಬಗ್ಗೆ ಮಾತನ್ನಾಡಿ.. ಸೂರಜ್​ ಈಗಷ್ಟೇ ಬಂದಿದ್ದಾರೆ. ಆದರೆ ಅವರ ಜೊತೆ ಕೆಲವೇ ಕೆಲವು ಮಾತುಗಳನ್ನ ಆಡಿದ್ದೇನೆ. ಇನ್ನೂ ಸಮಯ ಬೇಕು ಎಂದರು.
ನಂತರ ರಿಷಾ ಗೌಡ ಬಗ್ಗೆ ಪ್ರತಿಕ್ರಿಯಿಸಿ.. ಬರುವಾಗ ವಿಷದಂತೆ ಮಾತನ್ನಾಡುತ್ತ ಬಂದರು. ಆಗ ನನಗೆ ಗಾಬರಿ ಆಯಿತು. ಕೊನೆಗೆ ಅವರ ಜೊತೆ ಮಾತನ್ನಾಡುತ್ತ, ಮಾತನ್ನಾಡುತ್ತ ಹೋದಾಗ ಅರ್ಥ ಆಯಿತು. ಏನೆಂದರೆ ಅವರು ಆಗಾಗ ಬೇಕುಬೇಕು ಎನಿಸೋ ನಶೆ ರೀತಿ ಎಂದು. ಬೆಳಗ್ಗೆ ಎಲ್ಲರನ್ನೂ ಪ್ರೀತಿಯಿಂದ ಮಾತನ್ನಾಡಿಸಿದರು. ತುಂಬಾ ಲವಲವಿಕೆಯಿಂದ ಇದ್ದರು. ಇಡೀ ಮನೆಯನ್ನು ಹಬ್ಬದ ವಾತಾವರಣಕ್ಕೆ ಕೊಂಡೊಯ್ದರು. ಹೀಗಾಗಿ ನನ್ನ ಹೃದಯವನ್ನು ರಿಷಾಗೆ ಕೊಡ್ತೀನಿ ಎಂದರು.
ಇದನ್ನೂ ಓದಿ: ಮದುವೆ ಆದ ಜಾಗದಲ್ಲೇ ಮತ್ತೆ ಮದುವೆಯಾದ ಪ್ರೇಮ್ ದಂಪತಿ -VIDEO
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ