/newsfirstlive-kannada/media/media_files/2025/10/21/pilwan-story-2025-10-21-21-30-16.jpg)
ಸಾಂದರ್ಭಿಕ ಫೋಟೊ Photograph: (AI)
ಹೆಂಡತಿಯ ಕಾಟಕ್ಕೆ ಲಿಂಬೆ ಹಣ್ಣಂಗೆ ಹಿಂಡಿ ಹಿಪ್ಪೆಯಾಗಿರೋ ಪತಿಯ ಹೆಸರು ಮೊಹಮ್ಮದ್ ​ಯೂಸೂಫ್. ಎನ್ ಆರ್ ಸಿ ವಿರೋಧಿಸಿ ಉಗ್ರ ಹೋರಾಟ, ರಾಜಕೀಯ ನಾಯಕರ ಜೊತೆ ಒಡನಾಟ ಇಟ್ಟುಕೊಂಡಿದ್ದ ಈತನಿಗೆ ಪಾಪ ಹೆಂಡತಿಯ ಕ್ರೂರತ್ವ ಹಾಗು ಹಿಂಸೆಯನ್ನ ಸಹಿಸಿಕೊಳ್ಳೊಕಾಗ್ತಿಲ್ಲವಂತೆ.
ಇದನ್ನೂ ಓದಿ: ಬಿಜೆಪಿ-ಜೆಡಿಎಸ್​ನಲ್ಲಿ ಇವತ್ತು ಭಾರೀ ಬೆಳವಣಿಗೆ.. ಏನೆಲ್ಲ ನಡೆಯಿತು..?
/filters:format(webp)/newsfirstlive-kannada/media/media_files/2025/10/21/filwan-story-2-2025-10-21-21-31-48.jpg)
ಪಾಪ ಪೈಲ್ವಾನ್!
ಮೈ ಲೇಝರ್ ಕ್ಲಬ್ ಎಂಬ ಕಂಪನಿಯಲ್ಲಿ ಕೆಲಸ ಮಾಡ್ತಿರೋ ಯೂಸುಫ್​ ಕೌಟುಂಬಿಕ ಕಲಹದಿಂದ ನೊಂದಿದ್ದ. ಮನೆಯಲ್ಲಿ ಪತ್ನಿ ಟಾರ್ಚರ್ ಅಂತ ಕಚೇರಿಯಲ್ಲಿಯೇ ಯೂಸೂಫ್ ನಿದ್ದೆಗೆ ಜಾರಿದ್ದ. ಮನೆಗೆ ಬಂದಿಲ್ಲ ಅಂತ ಯೂಸೂಫ್​ಗೆ ಈ ವೇಳೆ ಆತನ ಪತ್ನಿ ಆಯೇಷಾ ಕರೆ ಮಾಡಿದ್ದಾರೆ. ಹತ್ತಾರು ಸಲ ಕರೆ ಮಾಡಿದ್ರೂ ಫೋನ್ ರಿಸಿವ್ ಮಾಡಿರಲಿಲ್ಲ ಯೂಸಫ್​. ಮೊಬೈಲ್ ಸೈಲೆಂಟ್ ಮಾಡಿ ಕಚೇರಿಯಲ್ಲೇ ಯೂಸೂಫ್ ಮಲಗಿದ್ದ. ಈ ವಿಚಾರ ತಿಳಿದು ಕಚೇರಿಗೆ ಪತ್ನಿ ಆಯೇಷಾ ಹಾಗೂ ಆಕೆಯ ಮಲತಾಯಿ ನಗೀನಾ ಕಚೇರಿಗೆ ಎಂಟ್ರಿ ಕೊಟ್ಟಿದ್ದಾರೆ.
ಇದನ್ನೂ ಓದಿ: ಮದುವೆ ಆದ ಜಾಗದಲ್ಲೇ ಮತ್ತೆ ಮದುವೆಯಾದ ಪ್ರೇಮ್ ದಂಪತಿ -VIDEO
/filters:format(webp)/newsfirstlive-kannada/media/media_files/2025/10/21/filwan-story-1-2025-10-21-21-32-15.jpg)
ಈ ವೇಳೆ ರೌಡಿಗಳನ್ನೂ ಜೊತೆಯಲ್ಲಿ ಕರೆತಂದು ಯೂಸೂಫ್ ಮೇಲೆ ಹಲ್ಲೆ ಮಾಡಿಸಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ಓಡಿ ಹೋಗಲು ಯತ್ನಿಸಿದಾಗ ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ ಮಾಡಿದ್ದಾರಂತೆ. ಹೀಗಾಗಿ ನೊಂದ ಪತಿ ಪತ್ನಿ ಆಯೇಷಾ, ಆಕೆಯ ಸಾಕು ತಾಯಿ ನಗೀನಾ ವಿರುದ್ಧ ದೂರು ನೀಡಿದ್ದು, ಯೂಸೂಫ್​ ದೂರಿನನ್ವಯ ಅಶೋಕನಗರ ಠಾಣೆಯಲ್ಲಿ FIR ದಾಖಲಾಗಿದೆ.
ಕುಸ್ತಿ ಕಾಳಗದಲ್ಲಿ ಎದುರಾಳಿಯನ್ನ ಹೊಡೆದುರುಳಿಸೋ ಪೈಲ್ವಾನನಿಗೆ ಮನೆಯಲ್ಲಿ ಹೆಂಡತಿ ಮಣ್ಣುಮುಕ್ಕಿಸಿದ್ದು ವಿಪರ್ಯಾಸ.. ನೊಂದ ಜೀವಕ್ಕೆ ಪೊಲೀಸರು ನ್ಯಾಯ ಕೊಡಿಸಬೇಕಿದೆ.
ವಿಶೇಷ ವರದಿ: ಅಂಕಿತಾ ರೈ, ನ್ಯೂಸ್​ಫಸ್ಟ್​ ಬೆಂಗಳೂರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us