/newsfirstlive-kannada/media/media_files/2025/10/24/risha-raghu-2025-10-24-11-58-04.jpg)
ರಘು- ರಿಷಾಗೌಡ Photograph: (ಕಲರ್ಸ್ ಕನ್ನಡ)
ಬಿಗ್​ ಬಾಸ್​ ಕೊಟ್ಟಿರುವ ಕ್ಯಾಪ್ಟನ್ಸಿ ಟಾಸ್ಕ್​ ಪ್ರೊಮೋ ರಿಲೀಸ್ ಆಗಿದೆ. ಬಿಗ್​ಬಾಸ್​ ಪ್ರೇಕ್ಷಕರಲ್ಲಿ ಯಾರಾಗ್ತಾರೆ ಮೊದಲ ಕ್ಯಾಪ್ಟನ್​ ಅನ್ನೋ ಕುತೂಹಲ ಹೆಚ್ಚಾಗಿದೆ. ಬಿಗ್​ಬಾಸ್​ ಌಕ್ಟಿವಿಟಿ ಏರಿಯಾದಲ್ಲಿ ಕ್ಯಾಪ್ಟನ್ಸಿ ಟಾಸ್ಕ್ ಆಯೋಜಿಸಲಾಗಿದೆ. ಕಗ್ಗತ್ತಲಿನ ವಾತಾವರಣ ಸೃಷ್ಟಿಸಿ, ಆ ಕತ್ತಲಿನಲ್ಲಿ ತಮ್ಮ ಹೆಸರಿನ ಅಕ್ಷರಗಳನ್ನ ಹುಡುಕಿ ಅದನ್ನ ಜೋಡಿಸುವಂತೆ ಬಿಗ್​ಬಾಸ್​ ಟಾಸ್ಕ್​ ನೀಡಿದ್ದಾರೆ.
ಕಗ್ಗತ್ತಲಿನಲ್ಲಿ ಕ್ಯಾಪ್ಟನ್ಸಿ ಟಾಸ್ಕ್ ಅಭ್ಯರ್ಥಿಗಳಾದ ರಘು ಹಾಗೂ ರಿಷಾ ಗೌಡರನ್ನ ಬಿಡಲಾಗಿದೆ. ಇತ್ತ ಮನೆ ಮಂದಿ ಇಬ್ಬರು ಕತ್ತಲಿನಲ್ಲಿ ಪರದಾಡ್ತಿರೊದನ್ನ ಲಿವಿಂಗ್​ ಏರಿಯಾದ ಟಿವಿಯಲ್ಲಿ ಕಂಡು ಮನೆ ಮಂದಿ ಮಜಾಮಾಡಿದ್ದಾರೆ. ಈ ಪ್ರೊಮೋ ನೋಡಿ ಬಿಗ್​ಬಾಸ್​ ಪ್ರೇಕ್ಷಕರಲ್ಲಿ ರಘು V/S ರಿಷಾಗೌಡರಲ್ಲಿ ಯಾರಾಗ್ತಾರೆ ಮೊದಲ ಕ್ಯಾಪ್ಟನ್​ ಅನ್ನೋ ಕುತೂಹಲ ಹೆಚ್ಚಾಗಿದೆ.
ನಾಣ್ಯಗಳ ಟಾಸ್ಕ್​ನಲ್ಲಿ ಸೂರಜ್ ತಂಡ ಸೋತು ಹೋಯಿತು. ರಘು ಟೀಮ್ ಗೆದ್ದು ಆಫರ್ ಸ್ವೀಕಾರ ಮಾಡಿದರೂ ಕ್ಯಾಪ್ಟೆನ್ಸಿ ಟಾಸ್ಕ್​​ಗೆ ಹೋಗಲಿಲ್ಲ. ಕಡಿಮೆ ನಾಣ್ಯ ಸಂಗ್ರಹಿಸಿದ್ದ ರಿಷಾ ಸಹ ಕ್ಯಾಪ್ಟೆನ್ಸಿ ಟಾಸ್ಕ್​​ಗೆ ಆಯ್ಕೆ ಆದರು. ಹೀಗಾಗಿ ರಘು ಹಾಗೂ ರಿಷಾ iಬ್ಬರೂ ಕ್ಯಾಪ್ಟೆನ್ಸಿ ಫೈನಲ್ ಟಾಸ್ಕ್​​​ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಅದರಂತೆ ಇವರಿಬ್ಬರ ಮಧ್ಯೆ ಇವತ್ತು ಕ್ಯಾಪ್ಟನ್ಸಿ ಟಾಸ್ಕ್ ನಡೆಯಲಿದೆ. ಆ್ಯಕ್ಟಿವಿಟಿ ರೂಮ್​ನಲ್ಲಿ ಕಗ್ಗತ್ತಲು ಇದ್ದು ಆ ಕತ್ತಲೆಯಲ್ಲಿ ತನ್ನ ಹೆಸರಿನ ಅಕ್ಷರಗಳನ್ನು ಹುಡುಕಿ ಸರಿಯಾಗಿ ಜೋಡಿಸಬೇಕು. ಕಡಿಮೆ ಸಮಯದಲ್ಲಿ ಟಾಸ್ಕ್ ಮುಗಿಸಿದ ಸ್ಪರ್ಧಿ ಬಿಬಿಕೆ 12ರ ಮೊದಲ ಕ್ಯಾಪ್ಟನ್ ಆಗಿ ಆಯ್ಕೆ ಆಗುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us