Advertisment

‘ನೀನು ಎಲ್ಲಿಂದ ಬಂದಿದ್ಯಾ ಅಂತಾ ಗೊತ್ತು..’ ಮತ್ತೆ ರಕ್ಷಿತಾರ ನಿಂದಿಸಿದ ಅಶ್ವಿನಿ ಗೌಡ

ರಕ್ಷಿತಾ ಶೆಟ್ಟಿಯನ್ನು ‘ಕಾರ್ಟೂನ್’ ಎಂದು ಕರೆದು ಮುಜುಗರಕ್ಕೆ ಒಳಗಾಗಿದ್ದ ಅಶ್ವಿನಿ ಗೌಡ ಮತ್ತೊಮ್ಮೆ ರೋಷಾವೇಷಕ್ಕೆ ಒಳಗಾಗಿದ್ದಾರೆ. ಆವಾಜ್ ಹಾಕುವ ಭರದಲ್ಲಿ ಮಾತಿನ ಮೇಲೆ ನಿಗಾ ಇಡದೇ ಕಿಡಿಕಾರಿದ್ದಾರೆ.

author-image
Ganesh Kerekuli
Ashwini Gowda (3)
Advertisment

ರಕ್ಷಿತಾ ಶೆಟ್ಟಿಯನ್ನು ‘ಕಾರ್ಟೂನ್’ ಎಂದು ಕರೆದು ಮುಜುಗರಕ್ಕೆ ಒಳಗಾಗಿದ್ದ ಅಶ್ವಿನಿ ಗೌಡ ಮತ್ತೊಮ್ಮೆ ರೋಷಾವೇಷಕ್ಕೆ ಒಳಗಾಗಿದ್ದಾರೆ. ಆವಾಜ್ ಹಾಕುವ ಭರದಲ್ಲಿ ಮಾತಿನ ಮೇಲೆ ನಿಗಾ ಇಡದೇ ಕಿಡಿಕಾರಿದ್ದಾರೆ. 

Advertisment

ಏನಾಗ್ತಿದೆ..? 

ಬಿಗ್​ಬಾಸ್​​ ಮನೆಯಲ್ಲಿ ಭೂತ ಚೇಷ್ಠ ಮಾಡಲು ಮುಂದಾಗಿದ್ದವರ ಅಸಲಿ ಬಣ್ಣ ವೀಕ್ಷಕರ ಮುಂದೆ  ಬಯಲಾಗಿದೆ. ರಕ್ಷಿತಾ ಶೆಟ್ಟಿ ತಲೆಗೆ ಕಟ್ಟಲು ಹೊರಟಿದ್ದ ಜಾಹ್ನವಿ ಹಾಗೂ ಅಶ್ವಿನಿ ಗೌಡಳ ಮುಖವಾಡ ಬಯಲಾಗಿದೆ. ಗೆಜ್ಜೆ ಸದ್ದಿನ ಹಿಂದಿನ ಸಿಕ್ರೇಟ್​, ಇನ್ನೂ ಗುಟ್ಟಾಗಿಯೇ ಇದೆ ಅನ್ಕೊಂಡಿರುವ ಜಾಹ್ನವಿ ಮತ್ತು ಅಶ್ವಿನಿ ಗೌಡ ತಮ್ಮನ್ನ ಸಮರ್ಥನೆ ಮಾಡ್ಕೊಳ್ತಿದ್ದಾರೆ. 

ಇದನ್ನೂ ಓದಿ: 12 ಸ್ಪರ್ಧಿಗಳು ನಾಮಿನೇಟ್.. ಈ ವಾರ ಐದು ಕಂಟೆಸ್ಟೆಂಟ್ಸ್​​ಗೆ ಗೇಟ್​ಪಾಸ್..?

Rakshita shetty

ಇಂದು ರಾತ್ರಿ ಪ್ರಸಾರವಾಗಲಿರುವ ಸಂಚಿಕೆಯ ಎಪಿಸೋಡ್​​ನ ಪ್ರೊಮೋವನ್ನ ಕಲರ್ಸ್ ಕನ್ನಡ ಶೇರ್ ಮಾಡಿದೆ. ಅದರಲ್ಲಿ ರಕ್ಷಿತಾ ಹಾಗೂ ಜಾಹ್ನವಿ ಮಧ್ಯೆ ಗಲಾಟೆ ಆಗಿದೆ. ನಿನ್ನೆ ಬಿಗ್​ಬಾಸ್ ಮನೆಯಲ್ಲಿ ಮಿಡ್​ನೈಡ್​ ಎಲಿಮಿನೇಷನ್ ನಡೆಯಿತು. ಆಗ ರಕ್ಷಿತಾ ಮೊದಲು ಜಾಹ್ನವಿ ಹೆಸರನ್ನು ಹೇಳಿದರು. ಜಾಹ್ನವಿ ತಮ್ಮ ಸರದಿಯಲ್ಲಿ ರಕ್ಷಿತಾ ಶೆಟ್ಟಿ ಹೆಸರು ತೆಗೆದುಕೊಂಡರು. ಅಲ್ಲಿಂದ ಆರಂಭವಾದ ಯುದ್ಧ ಇದೀಗ ಮತ್ತೊಂದು ಹಂತಕ್ಕೆ ಹೋಗಿದೆ. 

Advertisment

ಆಗಿದ್ದೇನು..?

ಡಾಗ್​ ಸತೀಶ್ ಮನೆಯಿಂದ ಹೊರ ಹೋದಮೇಲೆ.. ಬೆಡ್​​ ಮೇಲೆ ಜಾಹ್ನವಿ ಕೂತುಕೊಂಡು ಮಾತಾಡ್ತಾರೆ ಇರುತ್ತಾರೆ. ಬರ್ಲಿ.. ನಾನು ಕಾಯ್ತಾ ಇದ್ದೀನಿ.. ಅವಳ ಹತ್ತಿರ ಮಾತಾಡಬೇಕು ಎನ್ನುತ್ತಾರೆ. ಅಲ್ಲಿಗೆ ರಕ್ಷಿತಾ ಬರುತ್ತಾರೆ. ಆಗ ಜಾಹ್ನವಿ.. ನನ್ನನ್ನ ನೀನು ಚೈಲ್ಡು ಅನ್ಕೊಂಡಿದ್ದೀಯಾ..? ನಂಗೇನು ಅಷ್ಟೂ ಮೆಚುರಿಟಿ ಇಲ್ವಾ ಎಂದು ಕೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸುವ ರಕ್ಷಿತಾ.. ಹೌದು, ನೀವು ಚೈಲ್ಡೇ.. ಎಂದಿದ್ದಾರೆ. 

ಇದನ್ನೂ ಓದಿ: 12 ಸ್ಪರ್ಧಿಗಳು ನಾಮಿನೇಟ್.. ಈ ವಾರ ಐದು ಕಂಟೆಸ್ಟೆಂಟ್ಸ್​​ಗೆ ಗೇಟ್​ಪಾಸ್..?

bb clash

ಅಲ್ಲಿಗೆ ಕಾವ್ಯಾ ಎಂಟ್ರಿ ಆಗ್ತಾರೆ. ಕಾವ್ಯ ಬಳಿ ಜಾಹ್ನವಿ ಮತ್ತು  ಅಶ್ವಿನಿ ಗೌಡ ನಾಗವಲ್ಲಿ ರೀತಿ ಸೌಂಡು ಮಾಡ್ತಿದ್ದಾರೆ ಎಂದು ದೂರು ನೀಡ್ತಿದ್ದಾಳೆ. ಆಗ ಜಾಹ್ನವಿ ಮತ್ತು ಅಶ್ವಿನಿ ಗೌಡರತ್ತ ತಿರುಗಿ ‘ದೊಡ್ಡ ನಾಗವಲ್ಲಿ ನೀವೇ..’ ಎಂದು ಕಿರುಚಾಡಿದ್ದಾರೆ. ಅದಕ್ಕೆ ಜಾಹ್ನವಿ ಎಷ್ಟು ಮಾತಾಡ್ತೀಯಾ ನೀನು ಎಂದು ಕೂತಲ್ಲೇ ಧಮ್ಕಿ ಹಾಕಿದ್ದಾರೆ. ಆದರೆ ಅಶ್ವಿನಿ ಗೌಡ ಬೆಡ್​ ಮೇಲಿಂದ ಇಳಿದು ರಕ್ಷಿತಾಗೆ ಆವಾಜ್ ಹಾಕಿದ್ದಾರೆ.    

Advertisment

ಅಶ್ವಿನಿ ಗೌಡ: ಜಾಸ್ತಿ ಮಾತಾಡಬೇಡ (ಬೆಟ್ಟು ತೋರಿಸುತ್ತ)..  ಮುಚ್ಕೊಂಡು ಮಲ್ಕೋ.. ಹೋಗಿ ನಿನ್ನ ಡ್ರಾಮಾ ಅಲ್ಲ, ಬಾತ್​ ರೂಮ್​​ನಲ್ಲಿ ಮಾಡು.. ಇಡಿಯಟ್.​. 

ರಕ್ಷಿತಾ ಶೆಟ್ಟಿ: ನಾನು ನೂರು ಬಾರಿ ಹೋಗ್ತೀನಿ.. ನಿಮ್ಗೆ ಏನು? ಅದು ನಿಮ್ಮ ಮನೆಯ ವಾಷ್​​ ರೂಮ್..​​​? 
ಅಶ್ವಿನಿ ಗೌಡ: ನೀನು ಎಲ್ಲಿಂದ ಬಂದಿದ್ಯಾ ಅಂತಾ ಗೊತ್ತು.. ನಿನ್ನ ನೋಡಿದ್ರೆ ಗೊತ್ತಾಗುತ್ತೆ.. 

ಇದನ್ನೂ ಓದಿ: ಜಾಹ್ನವಿಗೆ ಚೈಲ್ಡು ಎಂದ ರಕ್ಷಿತಾ ಶೆಟ್ಟಿ.. ಭೂತ ಚೇಷ್ಟೆ ಮಾಡಲೋಗಿ ಏನೇನೋ ಆಯ್ತು..

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bigg Boss Kannada 12 Ashwini Gowda Bigg Boss Jahnavi bigg boss jahnavi Bigg boss
Advertisment
Advertisment
Advertisment