/newsfirstlive-kannada/media/media_files/2025/11/11/bhavya-gowda-2025-11-11-20-59-01.jpg)
ಜೀ ಕನ್ನಡದ ಜನಪ್ರಿಯ ಡ್ಯಾನ್ಸಿಂಗ್ ರಿಯಾಲಿಟಿ ಶೋ ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್ (DKD) ಅದ್ದೂರಿಯಾಗಿ ಲಾಂಚ್ ಆಗ್ತಿದೆ. ಈ ಬಾರಿಯೂ ಕೂಡ ಸ್ಟಾರ್​​ ಸೆಲಿಬ್ರಿಟಿಗಳು ಸೌಂಡ್ ಮಾಡುತ್ತಿರೋದು ತುಂಬಾನೇ ವಿಶೇಷತೆ ಪಡೆದುಕೊಂಡಿದೆ.
ವಾಹಿನಿಯು ಕಳೆದ ಬಾರಿ ಹೊಸ ಫಾರ್ಮೆಟ್​ ಪರಿಚಯಿಸಿತ್ತು. ಸೆಲಿಬ್ರಿಟಿಗಳ ಜೊತೆಗೆ ಡ್ಯಾನ್ಸಿಂಗ್​ ಪ್ರತಿಭೆಗಳನ್ನ ಜೋಡಿ ಮಾಡಿ ಅಖಾಡಕ್ಕೆ ಬಿಡಲಾಗಿತ್ತು. ಈ ಬಾರಿಯೂ ಇದೇ ರೀತಿಯ ಪರಿಕಲ್ಪನೆಯೊಂದಿಗೆ ಡ್ಯಾನ್ಸಿಂಗ್ ಕಾಂಪಿಟೇಷನ್​​ಗೆ ನಾಂದಿ ಹಾಡಲಾಗುತ್ತಿದೆ.
ಯಾರೆಲ್ಲ ಬರುತ್ತಾರೆ..?
ಶ್ರಾವಣಿ ಸುಭ್ರಮಣ್ಯ ಖ್ಯಾತಿಯ ಅಮೋಘ್​, ಕರಿಮಣಿ ಖ್ಯಾತಿಯ ಅಶ್ವಿನ್​, ಬಿಗ್ ಬಾಸ್​ ಖ್ಯಾತಿಯ ನಂದಿನಿ, ಭವ್ಯಾ ಗೌಡ, ಅಣ್ಣಯ್ಯ ಖ್ಯಾತಿಯ ಪ್ರತೀಕ್ಷಾ, ಬ್ರಹ್ಮಗಂಟು ಖ್ಯಾತಿಯ ಆರತಿ, ಲಕ್ಷ್ಮೀ ನಿವಾಸ ಖ್ಯಾತಿಯ ಧನಂಜಯ್​, ಮಹಾನಟಿ ಖ್ಯಾತಿಯ ಪೂಜಾ ರಮೇಶ್​, ಸ್ಮೈಲ್​ ಗುರು ರಕ್ಷಿತ್​, ಅನನ್ಯ ಅಮರ್​, ಬಾಲ ಪ್ರತಿಭೆ ಅನುಪ್​ ಹಾಗೂ ಜಗ್ಗಪ್ಪ ಡ್ಯಾನ್ಸ್​ ಫ್ಲೋರ್​ಗೆ ಎಂಟ್ರಿ ಕೊಟ್ಟಿದ್ದಾರೆ.
ನವೆಂಬರ್ 15 ರಿಂದ ಶನಿ-ಭಾನು ರಾತ್ರಿ 7:30ಕ್ಕೆ Dance ಕರ್ನಾಟಕ Dance ಪ್ರಾರಂಭವಾಗ್ತಿದೆ.
ಇದನ್ನೂ ಓದಿ: KSCA ಅಧ್ಯಕ್ಷೀಯ ಚುನಾವಣೆಗೆ ಎಂಟ್ರಿ ಕೊಟ್ಟ ವೆಂಕಟೇಶ್ ಪ್ರಸಾದ್..! ಕುಂಬ್ಳೆ ಬೆಂಬಲ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us