ಚಾಂಪಿಯನ್ಸ್​ ಟ್ರೋಫಿ ಬೆನ್ನಲ್ಲೇ ಕೊಹ್ಲಿಗೆ ಬಿಗ್​ ಶಾಕ್​​; ರೋಹಿತ್​ ಶರ್ಮಾಗೆ ಭರ್ಜರಿ ಜಾಕ್​ಪಾಟ್​​

author-image
Ganesh Nachikethu
Updated On
ಚಾಂಪಿಯನ್ಸ್​ ಟ್ರೋಫಿ ಬೆನ್ನಲ್ಲೇ ಕೊಹ್ಲಿಗೆ ಬಿಗ್​ ಶಾಕ್​​; ರೋಹಿತ್​ ಶರ್ಮಾಗೆ ಭರ್ಜರಿ ಜಾಕ್​ಪಾಟ್​​
Advertisment
  • 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಮುಕ್ತಾಯ!
  • ಫೈನಲ್​​ ಪಂದ್ಯದಲ್ಲಿ ನ್ಯೂಜಿಲೆಂಡ್​​ ಮಣಿಸಿ ಪ್ರಶಸ್ತಿ ಗೆದ್ದ ಭಾರತ
  • ಚಾಂಪಿಯನ್ಸ್​ ಟ್ರೋಫಿ ಬೆನ್ನಲ್ಲೇ ICC ಏಕದಿನ RANKING ರಿಲೀಸ್

2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಮುಕ್ತಾಯಗೊಂಡಿದೆ. ಫೈನಲ್​​ ಪಂದ್ಯದಲ್ಲಿ ನ್ಯೂಜಿಲೆಂಡ್​​ ತಂಡವನ್ನು ಮಣಿಸಿ ಟೀಮ್​ ಇಂಡಿಯಾ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಈ ಬೆನ್ನಲ್ಲೇ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಕೌನ್ಸಿಲ್​​​​ ಇತ್ತೀಚಿನ ಏಕದಿನ RANKING ರಿಲೀಸ್​ ಮಾಡಿದೆ.

ಐಸಿಸಿ ಏಕದಿನ ಬೌಲರ್​ಗಳ RANKING ಪಟ್ಟಿಯಲ್ಲಿ ಟೀಮ್ ಇಂಡಿಯಾ ಸ್ಪಿನ್ನರ್‌ಗಳು ಏರಿಕೆ ಕಂಡಿದ್ದಾರೆ. ಚಾಂಪಿಯನ್ಸ್​​​ ಟ್ರೋಫಿಯಲ್ಲಿ ಕುಲದೀಪ್ ಯಾದವ್ ಹೇಳಿಕೊಳ್ಳುವಂತ ಪ್ರದರ್ಶನ ನೀಡದಿದ್ರೂ ಉತ್ತಮ RANKING ಪಡೆದಿದ್ದಾರೆ.

ಕ್ಯಾಪ್ಟನ್​ ರೋಹಿತ್​ಗೆ ಜಾಕ್​ಪಾಟ್​​

ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾ ಕ್ಯಾಪ್ಟನ್​​ ರೋಹಿತ್​ ಶರ್ಮಾ 76 ರನ್​ ಸಿಡಿಸಿ ಅದ್ಭುತ ಇನ್ನಿಂಗ್ಸ್ ಆಡಿದ್ದರು. ಇಡೀ ಟೂರ್ನಿಯಲ್ಲಿ ವಿರಾಟ್​ ಕೊಹ್ಲಿ, ಶ್ರೇಯಸ್​ ಅಯ್ಯರ್​​ ಅವರಿಗಿಂತಲೂ ಕಡಿಮೆ ರನ್​ ಗಳಿಸಿದ್ರೂ ಏಕದಿನ RANKING ಪಟ್ಟಿಯಲ್ಲಿ ಏರಿಕೆ ಕಂಡಿದ್ದಾರೆ.

ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಶ್ರೇಯಸ್ ಅಯ್ಯರ್ 8ನೇ ಸ್ಥಾನದಲ್ಲೇ ಇದ್ದಾರೆ. ರೋಹಿತ್ ಶರ್ಮಾ 2 ಸ್ಥಾನ ಏರಿಕೆ ಕಂಡಿದ್ದು, ಈಗ 3ನೇ ಸ್ಥಾನದಲ್ಲಿದ್ದಾರೆ. ಶುಭ್ಮನ್​ ಗಿಲ್​ ಮಾತ್ರ ಮೊದಲ ಸ್ಥಾನದಲ್ಲೇ ಇದ್ದಾರೆ.

ಕೊಹ್ಲಿಗೆ ಬಿಗ್​ ಶಾಕ್​​

ಇನ್ನೊಂದೆಡೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕ್​ ವಿರುದ್ಧ ಕೊಹ್ಲಿ ಅದ್ಭುತ ಶತಕ ಸಿಡಿಸಿದ್ದರು. ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್‌ನಲ್ಲೂ ಕೊಹ್ಲಿ ಉತ್ತಮ ಇನ್ನಿಂಗ್ಸ್​ ಆಡಿದ್ದರು. ಇಷ್ಟಾದ್ರೂ ಕೊಹ್ಲಿ RANKING ಪಟ್ಟಿಯಲ್ಲಿ 4ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಇದನ್ನೂ ಓದಿ:ಅಬ್ಬಾಬ್ಬಾ! ಐಫೋನ್​ಗಾಗಿ ಭಾರತೀಯರು ಪಾವತಿಸುವ ತೆರಿಗೆ ಎಷ್ಟು ಗೊತ್ತಾ? ಯಾಕಿಷ್ಟು ವ್ಯತ್ಯಾಸ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment