newsfirstkannada.com

ನಕ್ಸಲರು ಮತ್ತು ಪೊಲೀಸರ ನಡುವೆ ಫೈರ್​.. ಇಬ್ಬರು ಮಹಿಳೆಯರು ಸೇರಿ 7 ನಕ್ಸಲರು ಎನ್​ಕೌಂಟರ್​

Share :

Published April 30, 2024 at 1:28pm

Update April 30, 2024 at 1:54pm

    ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ನಡೆದ ಗುಂಡಿನ ಚಕಮಕಿ

    2 ಮಹಿಳೆಯರು ಸೇರಿ 7 ನಕ್ಸಲರ ಶವವನ್ನು ವಶಪಡಿಸಿಕೊಂಡ ಪೊಲೀಸರು

    AK47 ರೈಫಲ್​ ಮತ್ತು ಇತರೆ ಶಸ್ತ್ರಾಸ್ತ್ರ, ಸ್ಫೋಟಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ

ಇಬ್ಬರು ಮಹಿಳೆಯರು ಸೇರಿ ಏಳು ನಕ್ಸಲರು ಎನ್​ಕೌಂಟರ್​ಗೆ ಬಲಿಯಾದ ಘಟನೆ ಛತ್ತೀಸ್​​ಗಢದಲ್ಲಿ ಬೆಳಕಿಗೆ ಬಂದಿದೆ. ಅಲ್ಲಿನ ನಾರಾಯಣಪುರ ಮತ್ತು ಕಂಕೇರ್​ ಜಿಲ್ಲೆಯ ಗಡಿಭಾಗದಲ್ಲಿ ಭದ್ರತಾ ಸಿಬ್ಬಂದಿಗೊಂದಿಗಿನ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ.

ಪೊಲೀಸರು ಹಂಚಿಕೊಂಡ ಮಾಹಿತಿ ಪ್ರಕಾರ, ಜಿಲ್ಲೆಯ ರಿಸರ್ವ್​ ಗಾರ್ಡ್ (ಡಿಆರ್​​ಜಿ)​ ಮತ್ತು ವಿಶೇಷ ಕಾರ್ಯಪಡೆ (ಎಸ್​ಟಿಎಫ್​) ಜಂಟಿ ತಂಡ ನಕ್ಸಲರ ಜೊತೆಗೆ ಗುಂಡಿನ ದಾಳಿ ನಡೆಸಿದ್ದಾರೆ. ಬೆಳಗ್ಗೆ 6 ಗಂಟೆ ಸುಮಾರಿಗೆ ಅಬುಜ್ಮದ್​ ಪ್ರದೇಶದ ಟೆಕ್ಮೆಟಾ ಮತ್ತು ಕಾಕೂರ್ ಗ್ರಾಮದ ನಡುವಿನ ಕಾಡಿನಲ್ಲಿ ಗುಂಡಿನ ದಾಳಿ ನಡೆದಿದೆ ಎಂದು ಹೇಳಿದ್ದಾರೆ.

ಇಬ್ಬರು ಮಹಿಳೆಯರು ಸೇರಿ 7 ನಕ್ಸಲರ ಶವವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಎಕೆ 47 ರೈಫಲ್​ ಮತ್ತು ಇತರೆ ಶಸ್ತ್ರಾಸ್ತ್ರ, ಸ್ಫೋಟಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ. ಗುಂಡೇಟಿಗೆ ಬಲಿಯಾದ ನಕ್ಸಲರ ಗುರುತು ಇನ್ನು ಪತ್ತೆಯಾಗಿಲ್ಲವೆಂದು ತಿಳಿದುಬಂದಿದೆ.

ಇದನ್ನೂ ಓದಿ: ವಾರಣಾಸಿ ಸೇರಿ ಭಾರತದ 30 ವಿಮಾನ ನಿಲ್ದಾಣಗಳಿಗೆ ಬಾಂಬ್​ ಬೆದರಿಕೆ

ಇನ್ನು 15 ದಿನಗಳ ಅಂತರದಲ್ಲಿ ಭದ್ರತಾ ಪಡೆ ಮತ್ತು ನಕ್ಸಲೀಯರ ನಡುವೆ ನಡೆದ ಎರಡನೇ ದಾಳಿ ಇದಾಗಿದೆ. ರಾಜ್ಯದ ನಾರಾಯಣಪುರ, ಕಂಕೇರ್​ ಸೇರಿದಂತೆ 7 ಜಿಲ್ಲೆಗಳನ್ನು ಒಳಗೊಂಡು ನಡೆದ ಎನ್​ಕೌಂಟರ್​ಗಳಲ್ಲಿ ಈ ವರ್ಷ 88 ನಕ್ಸಲರ ಹತ್ಯೆಯಾಗಿದೆ ಎಂದು ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಕ್ಸಲರು ಮತ್ತು ಪೊಲೀಸರ ನಡುವೆ ಫೈರ್​.. ಇಬ್ಬರು ಮಹಿಳೆಯರು ಸೇರಿ 7 ನಕ್ಸಲರು ಎನ್​ಕೌಂಟರ್​

https://newsfirstlive.com/wp-content/uploads/2024/04/New-Project-1.jpg

Load More