Advertisment

ಹಾಸನ ಕೇಸಲ್ಲಿ ತಾನು ಬೀಸಿದ ಬಲೆಗೆ ಸಿಲುಕಿದ ದೇವರಾಜೇಗೌಡ; ಪೊಲೀಸ್ರ ಕೈಯಲ್ಲಿ ಲಾಕ್​ ಆಗಿದ್ಹೇಗೆ?

author-image
Veena Gangani
Updated On
ಪೆನ್​ಡ್ರೈವ್​ ಪ್ರಕರಣದ ಬಗ್ಗೆ ಬಿಜೆಪಿ ನಾಯಕನ ಅನುಮಾನ; SIT ವಿರುದ್ಧ ಕೇಸ್‌ ಹಾಕ್ತೀನಿ ಎಂದ ದೇವರಾಜೇಗೌಡ
Advertisment
  • ದೇವಸ್ಥಾನಕ್ಕೆ ಹೊರಟ್ಟಿದ್ದ ದೇವರಾಜೇಗೌಡಗೆ ಪೊಲೀಸರ ದರ್ಶನ
  • ತನಿಖೆ ವೇಳೆ ಪೊಲೀಸರಿಗೆ ದೇವರಾಜೇಗೌಡರಿಂದ ತಿರುಮಂತ್ರ
  • ಹಿರಿಯೂರಿನಿಂದ ಹೊಳೆನರಸೀಪುರಕ್ಕೆ ದೇವರಾಜೇಗೌಡ ಶಿಫ್ಟ್​

ಹಾಸನ ಪೆನ್​ಡ್ರೈವ್​ ಪುರಾಣದ ಮಧ್ಯೆ ಪ್ರವಾಸ ಹೋಗ್ತೀನಿ ಅಂತ ಗುಂಡಾಗಿರೋ ಭೂಮಿಯನ್ನ ಸುತ್ತಾಡಲು ಹೋದ ದೇವರಾಜೇಗೌಡಗೆ ನಿನ್ನೆ ಅಚಾನಕ್​ ಆಗಿ ಪೊಲೀಸರ ಭೇಟಿಯಾಗಿತ್ತು. ಊರಿಗೆ ಬಂದವರು ಪೊಲೀಸ್​​ ಸ್ಟೇಷನ್​ಗೆ ಬರದೇ ಇದ್ರೆ ಹೇಗೆ ಸರ್​ ಅಂತ ಹಿರಿಯೂರು ಪೊಲೀಸರು ದೇವರಾಜೇಗೌಡರನ್ನ ಅತಿಥಿ ಮಾಡಿಕೊಂಡ್ರು. ಬಳಿಕ ಹೊಳೆನರಸೀಪುರ ಪೊಲೀಸರ ಕೈವಶವಾದ ವಕೀಲರು ವಿಚಾರಣೆ ಚಕ್ರವ್ಯೂಹಕ್ಕೆ ಸಿಲುಕಿ ವಿಲ ವಿಲ ಅಂತಿದ್ದಾರೆ.

Advertisment

publive-image

ಇದನ್ನೂ ಓದಿ: ಅಪ್ಪ, ಅಮ್ಮ.. ಬದುಕಿಸಿ ಬಿಡಿ.. ಕರುಳು ಹಿಂಡುತ್ತೆ ಪ್ರವಾಹದಲ್ಲಿ ಫ್ಯಾಮಿಲಿ ಕಳೆದುಕೊಂಡ ಪುಟಾಣಿಯ ಕಣ್ಣೀರ ಕತೆ

ಕಳೆದ ಏಪ್ರಿಲ್ 01 ರಂದು ವಕೀಲ ದೇವರಾಜೇಗೌಡ ವಿರುದ್ಧ ಹಾಸನದ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳ ಕೇಸ್​ ಒಂದು ದಾಖಾಲಾಗಿತ್ತು. ಈ ಬಳಿಕ ಕಣ್ಮರೆಯಾಗಿದ್ದ ದೇವರಾಜೇಗೌಡರ ಜಾಡು ಹಿಡಿದು ಹೊರಟ ಹಿರಿಯೂರು ಪೊಲೀಸರು ಮೊಬೈಲ್​ ಟವರ್ ಆಧರಿಸಿ ಗುಹಿಳಾಳ್ ಟೋಲ್​ ಬಳಿ KA04 MW7191 ಕ್ರೇಟಾ ಕಾರಿನಲ್ಲಿ ಹೋಗ್ತಿದ್ದ ದೇವರಾಜೇಗೌಡರನ್ನ ನಿನ್ನೆ ರಾತ್ರಿ ಲಾಕ್​ ಮಾಡಿದ್ರು. ಬಂಧನ ಭೀತಿಯಲ್ಲಿ ಎಸ್ಕೇಪ್ ಆಗೋ ತರಾತುರಿಯಲ್ಲಿದ್ದ ದೇವರಾಜೇಗೌಡ ವೀಡಿಯೋ ಶೇರ್ ಮಾಡಲು ಹೋಗಿ ದೇವರಾಜೇಗೌಡ ಯಡವಟ್ಟು ಮಾಡಿಕೊಂಡಿದ್ರು.

ಲಾಯರ್ ಲಾಕ್ ಆಗಿದ್ಹೇಗೆ?

ಮೊನ್ನೆ ರಾತ್ರಿ 8 ಗಂಟೆ ಐದು ನಿಮಿಷಕ್ಕೆ ದೇವರಾಜೇಗೌಡ ವಾಟ್ಸಾಪ್​ನಲ್ಲಿ ವಿಡಿಯೋ ಮತ್ತು ಆಡಿಯೋವನ್ನ ಅಪ್ಲೋಡ್​ ಮಾಡಿದ್ರು. ಇದನ್ನೇ ಆಧರಿಸಿ ಮೊಬೈಲ್ ನೆಟ್​​ವರ್ಕ್ ಜಾಡು ಹಿಡಿದು ಹೊರಟ ಹಿರಿಯೂರು ಪೊಲೀರು ವಿಡಿಯೋ ಅಪ್ಲೋಡ್​ ಆದ 5 ನಿಮಿಷದಲ್ಲಿ ರಾತ್ರಿ 8.10 ಗಂಟೆ ಸುಮಾರಿಗೆ ದೇವರಾಜೇಗೌಡರನ್ನ ವಶಕ್ಕೆ ಪಡೆದಿದ್ರು.

Advertisment

publive-image

ಗುರುವಾರ ರಾತ್ರಿ ಇಡೀ ಹಿರಿಯೂರು ಪೊಲೀಸ್ ಠಾಣೆಯಲ್ಲಿ ತೂಗಡಿಸಿದ್ದ ದೇವರಾಜೇಗೌಡರನ್ನ ಶನಿವಾರ ಮುಂಜಾನೆ 4.30ರ ಸುಮಾರಿಗೆ ಹೊಳೆನರಸೀಪುರಕ್ಕೆ ಪೊಲೀಸರು ಕರೆದುಕೊಂಡು ಹೋಗಿದ್ದರು. ಹೊಳೆನರಸೀಪುರದಲ್ಲಿ ದೇವರಾಜೇಗೌಡರ ವಿಚಾರಣೆ ನಡೆಸಿದ ಪೊಲೀಸರಿಗೆ ತಲೆಗೆ ಹುಳ ಬಿಟ್ಟಹಾಗೆ ಆಗಿತ್ತು. ಪೊಲೀಸರ ಪ್ರಶ್ನೆಗೆ ಮರು ಪ್ರಶ್ನೆ ಹಾಕ್ತಿದ ದೇವರಾಜೇಗೌಡ, ಸರಿಯಾದ ಉತ್ತರ ನೀಡದೇ ಸತಾಯಿಸಿದ್ರು ಹೀಗಾಗಿ ಅವರ ಕಾರು ಚಾಲಕನನ್ನ ವಿಚಾರಣೆ ನಡೆಸಲಾಯ್ತು. ಈ ವೇಳೆ ಡ್ರೈವರ್​ ಹೇಳಿಕೆ ಆಧರಿಸಿ ಕಾರಿನ ಡ್ಯಾಶ್​ ಬೋರ್ಡ್​ನಲ್ಲಿದ್ದ ದೇವರಾಜೇಗೌಡ ಮೊಬೈಲ್​ನ ಪೊಲೀಸರು ವಶಕ್ಕೆ ಪಡೆದ್ರು.

ಇದನ್ನೂ ಓದಿ: ಟೀಂ ಇಂಡಿಯಾ ಕೋಚ್​ ರೇಸ್​ನಲ್ಲಿ ಮೂವರ ಹೆಸರು.. ಯಾರಿಗೆ ಒಲಿಯುತ್ತೆ ಲಕ್..

ಇನ್ನೂ, ಲೈಂಗಿಕ ಕಿರುಕುಳ ಕೇಸ್​​ ಸಂಬಂಧ ಮೊನ್ನೆ ಸಂತ್ರಸ್ತೆ ವಿಚಾರಣೆ ನಡೆಸಿದ್ದ ಪೊಲೀಸರು ಆಕೆಯ ಮರು ಹೇಳಿಕೆ ಆಧರಿಸಿ ಐಪಿಸಿ ಸೆಕ್ಷೆನ್ 376 ಅಡಿ ಅತ್ಯಾಚಾರ ಕೇಸ್ ಸಹ ದಾಖಲು ಮಾಡಿಕೊಂಡಿದ್ದರು. ಸದ್ಯ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಕೇಸ್​​ ಸಂಬಂಧ ದೇವರಾಜೇಗೌಡಗೆ 14 ದಿನ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಆದೇಶಿಸಿದೆ. ಒಟ್ಟಿನಲ್ಲಿ ಹಾಸನ ಅಶ್ಲೀಲ ವಿಡಿಯೋ ಪ್ರಕರಣವನ್ನ ಹೊಸ ದಿಕ್ಕಿಗೆ ತಿರುಗಿಸಿದ್ದ ವಕೀಲ ದೇವರಾಜೇಗೌಡಗೆ ತಮ್ಮದೇ ಕೇಸ್​ನಲ್ಲಿ ಪೊಲೀಸರ ತನಿಖೆ ಎದುರಿಸುವಂತಾಗಿದೆ. ತನಿಖೆ ವೇಳೆ ದೇವರಾಜೇಗೌಡ ಮತ್ತಿನ್ಯಾವ ಸತ್ಯಗಳನ್ನ ಪೊಲೀಸರ ಮುಂದೆ ಬಿಚ್ಚಿಡುತ್ತಾರೆ ಅನ್ನೋದೆ ಸದ್ಯದ ಕುತೂಹಲವಾಗಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment