newsfirstkannada.com

ಟೀಂ ಇಂಡಿಯಾ ಕೋಚ್​ ರೇಸ್​ನಲ್ಲಿ ಮೂವರ ಹೆಸರು.. ಯಾರಿಗೆ ಒಲಿಯುತ್ತೆ ಲಕ್..

Share :

Published May 11, 2024 at 2:23pm

    ಕೋಚ್​ ದ್ರಾವಿಡ್​ ಯುಗಾಂತ್ಯಕ್ಕೆ ಕೌಂಟ್​ಡೌನ್ ಶುರು

    ನೂತನ ಕೋಚ್ ಹುಡುಕಾಟದಲ್ಲಿ ಬಿಸಿಸಿಐ ತಯಾರಿ

    ಟೀಮ್ ಇಂಡಿಯಾಗೆ ಆಗ್ತಾರಾ ಸ್ವದೇಶಿ ಕೋಚ್..?

ಟಿ-20 ವಿಶ್ವಕಪ್​​ಗೆ ಜಸ್ಟ್ 20 ದಿನಗಳಷ್ಟೇ ಬಾಕಿ ಇದೆ. ಈ ನಡುವೆ ಟೀಮ್​ ಇಂಡಿಯಾಗೆ ಹೊಸ ಕೋಚ್ ನೇಮಕದ ಚರ್ಚೆ ಜೋರಾಗಿದೆ. ದಿ ಗ್ರೇಟ್ ವಾಲ್​​ ಪಾಲಿಗೆ ಇದೇ ಟಿ20 ವಿಶ್ವಕಪ್​ ಕೊನೆ ಆಗಲಿದೆಯಾ ಎಂಬ ಅನುಮಾನ ಹುಟ್ಟಿಹಾಕಿದೆ. ರಾಹುಲ್ ದ್ರಾವಿಡ್.. ಟೀಮ್ ಇಂಡಿಯಾದ ಮೋಸ್ಟ್ ಸಕ್ಸಸ್​ಫುಲ್ ಬ್ಯಾಟ್ಸ್​ಮನ್. ಟೀಮ್ ಇಂಡಿಯಾದ ನಾಯಕನಾಗಿ, ಆಟಗಾರನಾಗಿ ತಂಡಕ್ಕೆ ಲೆಕ್ಕವಿಲ್ಲದಷ್ಟು ಗೆಲುವು ತಂದುಕೊಟ್ಟಿದ್ದಾರೆ. ಇದೀಗ ಟೀಮ್​ ಇಂಡಿಯಾ ಕೋಚ್​ ಆಗಿಯೋ ಹಲವು ಸ್ಮರಣೀಯ ಗೆಲುವುಗಳ ರೂವಾರಿ ಆಗಿದ್ದಾರೆ.

ಟೀಮ್ ಇಂಡಿಯಾದಲ್ಲಿ ದ್ರಾವಿಡ್​ ಯುಗಾಂತ್ಯ
ನವೆಂಬರ್​​ 3,2021. ದಿ ವಾಲ್​ ರಾಹುಲ್​ ದ್ರಾವಿಡ್, ಹೆಡ್​​ ಕೋಚ್​ ಆಗಿ ಟೀಮ್ ಇಂಡಿಯಾದ ಚುಕ್ಕಾಣಿ ಹಿಡಿದ ದಿನ. ದಾವಿಡ್ ದ್ರೋಣಾಚಾರ್ಯ ಹುದ್ದೆ ಏರಿ ಬರೋಬ್ಬರಿ, 2 ವರ್ಷ 6 ತಿಂಗಳು ಕಳೀತು. ಈ 2 ವರ್ಷ 6 ತಿಂಗಳಲ್ಲಿ ಸೋಲು, ಗೆಲುವು, ಟೀಕೆಗಳನ್ನ ಎದುರಿಸಿರುವ ದ್ರಾವಿಡ್, ಇನ್ನು 2 ತಿಂಗಳಲ್ಲಿ ಕೋಚ್ ಹುದ್ದೆಯಿಂದ ನಿರ್ಗಮಿಸಲಿದ್ದಾರೆ. ಬಿಸಿಸಿಐ ಬಾಸ್​ಗಳು ನೂತನ ಕೋಚ್ ಹುಡುಕಾಟದಲ್ಲಿದ್ದಾರೆ. ದ್ರಾವಿಡ್​ ಭವಿಷ್ಯದ ಬಗ್ಗೆ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ ಶಾ, ಮಾತನಾಡಿದ್ದಾರೆ. ಶ್ರೀಘ್ರವೇ ನೂತನ ಹೆಡ್​ ಕೋಚ್ ಹುದ್ದೆಯ ನೇಮಕ ಮಾಡುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ:ಭೀಕರ ಅಪಘಾತ.. ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಹೊರಟಿದ್ದ ಮೂವರು ಮಹಿಳೆಯರು ಸಾವು

ಶೀಘ್ರ ಕೋಚ್ ಹುದ್ದೆಗೆ ಆಹ್ವಾನ
ಮುಂದಿನ ದಿನಗಳಲ್ಲಿ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸುತ್ತೇವೆ. ರಾಹುಲ್ ದ್ರಾವಿಡ್ ಅವಧಿ ಮುಕ್ತಾಯವಾಗುತ್ತಿದೆ. ದ್ರಾವಿಡ್ ಮುಂದುವರಿಯಲು ಬಯಸುವುದಾದರೆ, ಮತ್ತೆ ಅರ್ಜಿ ಸಲ್ಲಿಸಬೇಕಾಗುತ್ತೆ. ನಾವು ಮುಂದಿನ 3 ವರ್ಷಗಳ ಅವಧಿಗೆ ಕೋಚ್ ನೇಮಿಸುವ ಎದುರು ನೋಡುತ್ತಿದ್ದೇವೆ-ಜಯ ಶಾ, ಬಿಸಿಸಿಐ ಕಾರ್ಯದರ್ಶಿ

ಮುಂದುವರಿಯುತ್ತಾರಾ ದ್ರಾವಿಡ್..?
ಟೀಮ್ ಇಂಡಿಯಾದ ಕೋಚ್ ಆಗಿ 3 ವರ್ಷಗಳಿಂದ ಸೇವೆ ಸಲ್ಲಿಸಿರುವ ದ್ರಾವಿಡ್​ರ ಅಧಿಕಾರ ಅವಧಿ ಏಕದಿನ ವಿಶ್ವಕಪ್ ವೇಳೆಯೇ ಅಂತ್ಯವಾಗಿತ್ತು. ಟಿ20 ವಿಶ್ವಕಪ್ ದೃಷ್ಟಿಯಿಂದ 1 ವರ್ಷಕ್ಕೆ ವಿಸ್ತರಣೆ ಮಾಡಲಾಗಿತ್ತು. ಇದೀಗ ಆ ಅವಧಿಯೂ ಮುಕ್ತಾಯಗೊಳ್ಳುತ್ತಿದೆ. ಹೀಗಾಗಿ ಹೊಸ ಕೋಚ್​ ನೇಮಕಕ್ಕೆ ಬಿಸಿಸಿಐ ಬಾಸ್​ಗಳು ಮುಂದಾಗಿದ್ದಾರೆ. ಜೊತೆಗೆ ದ್ರಾವಿಡ್​​ಗೆ ಮತ್ತೆ ಮುಂದುವರೆಯೋ ಆಸೆಯಿದ್ರೆ, ಅದಕ್ಕೂ ಚಾನ್ಸ್​ ಇದೆ ಎಂದಿದ್ದಾರೆ. ಆದ್ರೆ, ಈ ಸಲ ದ್ರಾವಿಡ್, ಕೋಚ್ ಆಗಿ ಮುಂದುವರಿಯಲು ಆಸಕ್ತಿ ತೋರುವುದು ಅನುಮಾನವಾಗಿದೆ.

ಇದನ್ನೂ ಓದಿ:ಮಳೆ ಬೀಳುವ ಎಚ್ಚರಿಕೆ.. ರಾಜ್ಯದ ಈ ಜಿಲ್ಲೆಗಳಲ್ಲಿ 6 ದಿನಗಳ ಕಾಲ ಭರ್ಜರಿ ಮಳೆ..!

ಯಾರ್ ಆಗ್ತಾರೆ ಮುಂದಿನ ಕೋಚ್..?
ಜಯ ಶಾ, ಕೋಚ್ ಹುದ್ದೆ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗುತ್ತೆ ಎಂದಿದ್ದೆ ತಡ, ಟೀಮ್ ಇಂಡಿಯಾದ ಕೋಚ್ ಯಾರ್ ಆಗ್ತಾರೆ ಎಂಬ ಚರ್ಚೆ ಜೋರಾಗಿದೆ. ಎನ್​ಸಿಎ ಮುಖ್ಯಸ್ಥ ವಿವಿಎಸ್ ಲಕ್ಷಣ್, ಗುಜರಾತ್ ಟೈಟನ್ಸ್​ ತಂಡದ ಕೋಚ್ ಆಶಿಶ್ ನೆಹ್ರಾ, ಮಾಜಿ ಆಸಿಸ್​ ಕ್ರಿಕೆಟಿಗ ರಿಕಿ ಪಾಂಟಿಂಗ್ ಹೆಸರುಗಳು ಓಡಾಡ್ತಿವೆ. ಇದೆಲ್ಲಕ್ಕೂ ಟಿ20 ವಿಶ್ವಕಪ್ ಬಳಿಕವಷ್ಟೇ ಉತ್ತರ ಸಿಗಲಿದೆ.

ದ್ರಾವಿಡ್ ಅಡಿ ಮೂರು ಐಸಿಸಿ ಟ್ರೋಫಿಗಳಲ್ಲಿ ಸೋಲು
ರಾಹುಲ್ ದ್ರಾವಿಡ್ ಅಡಿಯಲ್ಲಿ 2022ರ ಟಿ20 ವಿಶ್ವಕಪ್​​​, 2023ರ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಸೋತ ಟೀಮ್ ಇಂಡಿಯಾ, 2023ರ ಏಕದಿನ ವಿಶ್ವಕಪ್​​​​​​ನ ಕೂದಲೆಳೆ ಅಂತರದಿಂದ ಸೋತಿತ್ತು. ಮೂರು ಐಸಿಸಿ ಟ್ರೋಫಿಗಳನ್ನ ಸೋತಿರುವ ರಾಹುಲ್ ದ್ರಾವಿಡ್​ಗೆ, ಈ ಬಾರಿಯ ಟಿ20 ವಿಶ್ವಕಪ್ ಪ್ರತಿಷ್ಠೆಯಾಗಿದೆ. ಈಗಾಗಲೇ ಚುಟುಕು ಸಂಗ್ರಾಮಕ್ಕೆ ಯುವ ಸೈನ್ಯ ಸಜ್ಜುಗೊಳಿಸಿರುವ ದ್ರಾವಿಡ್, ಟಿ20 ವಿಶ್ವಕಪ್​ ಗೆಲುವಿನೊಂದಿಗೆ ವಿದಾಯ ಹೇಳುವ ಕನಸಿನಲ್ಲಿದ್ದಾರೆ.

ಇದನ್ನೂ ಓದಿ:ಅಮ್ಮನಿಗೆ ಗುಂಡು.. ಸುತ್ತಿಗೆಯಿಂದ ಪತ್ನಿಯ ಜೀವ.. 3 ಮಕ್ಕಳನ್ನು ಟೆರಸ್​​ನಿಂದ ಎಸೆದ.. ಐವರ ಬರ್ಬರ ಕೊಲೆ

ಒಟ್ನಲ್ಲಿ ಆಟಗಾರನಾಗಿ ಹಾಗೂ ಕೋಚ್ ಆಗಿ ಇದುವರೆಗೆ ಒಂದೇ ಒಂದು ಐಸಿಸಿ ಟ್ರೋಫಿ ಗೆಲ್ಲದ ದ್ರಾವಿಡ್ ಮುಂದೆ ಇದೀಗ ಕೊನೆಯ ಅವಕಾಶ. ಕೋಚ್ ಆಗಿ ಟೀಮ್ ಇಂಡಿಯಾಗೆ ದ್ರಾವಿಡ್​ ವಿಶ್ವ ಕಿರೀಟ ಗೆಲ್ಲಿಸಿ ಗುಡ್ ಬೈ ಹೇಳಲಿ ಅನ್ನೋದೇ ಎಲ್ಲರ ಆಶಯ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಟೀಂ ಇಂಡಿಯಾ ಕೋಚ್​ ರೇಸ್​ನಲ್ಲಿ ಮೂವರ ಹೆಸರು.. ಯಾರಿಗೆ ಒಲಿಯುತ್ತೆ ಲಕ್..

https://newsfirstlive.com/wp-content/uploads/2023/08/RAHUL_DRAVID.jpg

Load More