/newsfirstlive-kannada/media/post_attachments/wp-content/uploads/2023/06/Bus-Conductor.jpg)
ವಿಜಯಪುರ: ಶಕ್ತಿ ಯೋಜನೆ ಜಾರಿಯಾಗಿದ್ದೇ ತಡ ಮಹಿಳೆಯರು ಈ ಅವಕಾಶವನ್ನು ಪೂರ್ತಿಯಾಗಿ ಬಳಸುತ್ತಿದ್ದಾರೆ. ಅದರಲ್ಲೂ ಬಸ್ ಪೂರ್ತಿ ತುಂಬುವಂತೆ ಮಹಿಳೆಯರು ಪ್ರಯಾಣ ಬೆಳೆಸುತ್ತಿದ್ದಾರೆ. ಆದರೆ ಮಹಿಳೆಯರ ಪ್ರಯಾಣದಿಂದ ಬಸ್ ಚಾಲಕ ಮತ್ತು ಕಂಡಕ್ಟರ್ ಹೈರಾಣಾಗಿದ್ದಾರೆ. ಅದಕ್ಕೆ ಸಾಕ್ಷಿ ಎಂಬ ಇಲ್ಲೊಬ್ಬ ತುಂಬಿದ ಬಸ್ ಒಳಗೆ ಕಂಡಕ್ಟರ್ ಟಿಕೆಟ್ ಕೊಡಲು ಹರಸಾಹಸಪಡುತ್ತಿದ್ದು, ಕೊನೆಗೆ ಸೀಟ್ ಮೇಲೆ ಹತ್ತಿ ಕುಳಿತ ಘಟನೆ ಬೆಳಕಿಗೆ ಬಂದಿದೆ.
ಬಸ್ ಸೀಟಿನ ಮೇಲೆ ಕಂಡಕ್ಟರ್ ಏರಿ ಕುಳಿತ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಸ್ ನಲ್ಲಿ ಮಹಿಳೆಯರೇ ತುಂಬಿ ತುಳುಕಿದ್ದ ಕಾರಣ ನಿರ್ವಾಹಕ ಪರದಾಡಿದ್ದಾನೆ.
‘ಶಕ್ತಿ’ ಯೋಜನೆಯಿಂದಾಗಿ ತುಂಬಿದ ಬಸ್ನಲ್ಲಿ ಟಿಕೆಟ್ ಕೊಡಲು ಪರದಾಡಿದ ಕಂಡಕ್ಟರ್ ಕೊನೆಗೆ ಸೀಟು ಏರಿ ಕುಳಿತ ದೃಶ್ಯ ವಿಜಯಪುರದಲ್ಲಿ ಬೆಳಕಿಗೆ ಬಂದಿದೆ. ಅಫಜಲಫುರದಿಂದ ಬ್ಯಾಡಗಿಗೆ ತೆರಳುವ ಬಸ್ನಲ್ಲಿ ಈ ದೃಶ್ಯ ಮೊಬೈಲ್ ಕ್ಯಾಮೆರಾಗೆ ಸೆರೆ ಸಿಕ್ಕಿದೆ.#Bus#ShaktiSchemepic.twitter.com/JlaWXowlSc
— NewsFirst Kannada (@NewsFirstKan) June 14, 2023
ಅಫಜಲಫುರದಿಂದ ದೇವರ ಹಿಪ್ಪರಗಿ, ಭೈರವಾಡಗಿ, ಹೂವಿನ ಹಿಪ್ಪರಗಿ, ಮುದ್ದೇಬಿಹಾಳ ಮಾರ್ಗವಾಗಿ ಹಾವೇರಿ ಜಿಲ್ಲೆಯ ಮೂಲಕ ಬ್ಯಾಡಗಿಗೆ ತೆರಳುವ ಬಸ್ನಲ್ಲಿ ಈ ದೃಶ್ಯ ಕಂಡುಬಂದಿದೆ. ನಿನ್ನೆ ಬೆಳಗ್ಗೆ ನಡೆದ ಘಟನೆ ಇದಾಗಿದೆ. ಬಸ್ ಹತ್ತಿದವರಿಗೆ ಟಿಕೆಟ್ ಕೊಡುವ ಸಲುವಾಗಿ ನಿರ್ವಾಹಕ ಸೀಟ್ ಮೇಲೆ ಹತ್ತಿ ಕುಳಿತಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ