Advertisment

ಮೊಟ್ಟೆ ಹಗರಣದಲ್ಲಿ ಶಶಿಕಲಾ ಜೊಲ್ಲೆಗೆ ಭಾರೀ ಮುಖಭಂಗ; ನ್ಯೂಸ್​ಫಸ್ಟ್​ ‘ನಿರ್ಭೀತಿ’ಯ ಹೋರಾಟಕ್ಕೆ ಜಯ

author-image
Bheemappa
Updated On
ಮೊಟ್ಟೆ ಹಗರಣದಲ್ಲಿ ಶಶಿಕಲಾ ಜೊಲ್ಲೆಗೆ ಭಾರೀ ಮುಖಭಂಗ; ನ್ಯೂಸ್​ಫಸ್ಟ್​ ‘ನಿರ್ಭೀತಿ’ಯ ಹೋರಾಟಕ್ಕೆ ಜಯ
Advertisment
  • ನ್ಯೂಸ್​ ಫಸ್ಟ್​ನ ‘ನಿರ್ಭೀತಿ’ಯ ಹೋರಾಟಕ್ಕೆ ಕಾನೂನಿನಲ್ಲಿ ಸಿಕ್ಕ ಜಯ
  • ಮಕ್ಕಳಿಗೆ ಕೊಡುವ ಮೊಟ್ಟೆಗೆ ಕನ್ನ ಹಾಕಿದ್ದ ಮಾಜಿ ಸಚಿವೆ ಶಶಿಕಲಾ ಜೊಲ್ಲೆ
  • ಕಾನೂನಾತ್ಮಕ ಹೋರಾಟದಲ್ಲಿ ನ್ಯೂಸ್ ಫಸ್ಟ್​ ಚಾನೆಲ್‌ಗೆ ಗೆಲುವು

ಬೆಳಗಾವಿ: ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಅವರು ಸಲ್ಲಿಸಿದ್ದ ಅರ್ಜಿಯನ್ನು ಬೆಳಗಾವಿಯ ನಿಪ್ಪಾಣಿ ಸಿವಿಲ್ ಕೋರ್ಟ್ ವಜಾ ಮಾಡಿದೆ. ಈ ಮೂಲಕ ಮೊಟ್ಟೆ ಹಗರಣದ ಕಾನೂನಾತ್ಮಕ ಹೋರಾಟದಲ್ಲಿ ನ್ಯೂಸ್ ಫಸ್ಟ್​ಗೆ ಗೆಲುವು ಸಿಕ್ಕಿದ್ದು, ಶಶಿಕಲಾ ಜೊಲ್ಲೆಗೆ ಭಾರೀ ಮುಖಭಂಗವಾಗಿದೆ.

Advertisment

ಸರ್ಕಾರದ ವತಿಯಿಂದ ಮಕ್ಕಳಿಗೆ ನೀಡಲಾಗುತ್ತಿದ್ದ ಮೊಟ್ಟೆಗಳಿಗೆ ಶಶಿಕಲಾ ಜೊಲ್ಲೆ ಹಾಗೂ ಅವರು ತಂಡದವರು ಕನ್ನ ಹಾಕಿದ್ದರು. ಈ ಕಳ್ಳಾಟವನ್ನೆಲ್ಲಾ ನ್ಯೂಸ್​ ಫಸ್ಟ್ ಚಾನೆಲ್ ಸ್ಟಿಂಗ್ ಆಪರೇಷನ್ ಮಾಡಿ ಸತ್ಯವನ್ನು ಬಯಲಿಗೆ ಎಳೆದಿತ್ತು. ಇದಾದ ಮೇಲೆ ಶಶಿಕಲಾ ಜೊಲ್ಲೆ ಅವರು ವರದಿ ಪ್ರಸಾರ ಮಾಡದಂತೆ ಏಕಪಕ್ಷೀಯವಾಗಿ ತಡೆ ಆದೇಶ ತಂದಿದ್ದರು. ಹೀಗಾಗಿ 2022ರಿಂದ ವರದಿ ಪ್ರಸಾರಕ್ಕೆ ಕೋರ್ಟ್ ನಿರ್ಬಂಧ ಹೇರಿತ್ತು. ಆದರೂ ಕಾನೂನಾತ್ಮಕ ಹೋರಾಟದಲ್ಲಿ ನ್ಯೂಸ್ ಫಸ್ಟ್​ಗೆ ಜಯ ಸಂದಿದೆ.

ಶಶಿಕಲಾ ಜೊಲ್ಲೆ ಪರ ಯಾವುದೇ ಸಾಕ್ಷಿ ಇಲ್ಲದಿದ್ದರೂ 2 ಪ್ರತ್ಯೇಕ ಕೇಸ್ ದಾಖಲಿಸಿ ಕಾಲಹರಣ ಮಾಡಿದ್ದಾರೆ. ಅದರಂತೆ 2022 ಏಪ್ರಿಲ್ 12 ರಂದು ನ್ಯಾಯಾಲಯಕ್ಕೆ ಸಾಕ್ಷಿ ನೀಡಲು ವಿಫಲವಾಗಿದ್ದರಿಂದ ವಿಚಾರಣೆ ಮುಂದೂಡಿಕೆ ಮಾಡಲಾಗಿತ್ತು. ಮಾಜಿ ಸಚಿವೆ ಕೇಸ್ ನಡೆಸುವ ಶ್ರದ್ಧೆ ಹೊಂದಿಲ್ಲ. ವಿನಾಕಾರಣ 3 ವರ್ಷ ಕೇಸ್​ನಲ್ಲೇ ಕಾಲಹರಣ ಮಾಡಿದ್ದಾರೆ. ಹೀಗೆ ಒಂದಿಲ್ಲ ಒಂದು ಕಾರಣ ನೀಡಿ ಸಮಯ ಕೇಳುತ್ತಿದ್ದರು. ಸುಳ್ಳು ಪ್ರಕರಣ ಹಾಗೂ ವಿಚಾರಣೆಗೆ ಹಾಜರಾಗದೆ ಕೋರ್ಟ್​ ಸಮಯ ವ್ಯರ್ಥ ಮಾಡುತ್ತಿದ್ದರು. ಹೀಗಾಗಿ ನಿಪ್ಪಾಣಿ ಸಿವಿಲ್ ಕೋರ್ಟ್​ ಅರ್ಜಿ ವಜಾ ಮಾಡಿದೆ.

ಇದನ್ನೂ ಓದಿ:ಗೌತಮ್ ಅದಾನಿಗೆ ಬಿಗ್ ಶಾಕ್​.. 26,000 ಕೋಟಿ ಹಣ ಫ್ರೀಜ್..! ಏನಿದು ಅಸಲಿ ಕತೆ..?

Advertisment

publive-image

ನ್ಯಾಯಾಲಯ ಶಶಿಕಲಾ ಜೊಲ್ಲೆಗೆ ದಂಡ ಹಾಕಿ ಕೊನೆ ಕಾಲವಕಾಶ ನೀಡಿತ್ತು. ಆದ್ರೆ, ದಂಡ ಕಟ್ಟಲು ವಿಫಲವಾದ ಕಾರಣ ಶಶಿಕಲಾ ಜೊಲ್ಲೆಗೆ ಕೋರ್ಟ್ ತರಾಟೆ ತೆಗೆದುಕೊಂಡಿತ್ತು. ನ್ಯಾಯಲಯದ ಸಮಯ ಹಾಳು ಮಾಡಿದ್ದಕ್ಕೆ 100 ರೂಪಾಯಿಗಳನ್ನು ದಂಡ ವಿಧಿಸಿ ಆದೇಶ ಹೊರಡಿಸಿತ್ತು.

ನ್ಯೂಸ್ ಫಸ್ಟ್ ವರದಿ ಬಳಿಕ ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ, ಸುರೇಂದ್ರು ಉಗಾರೆ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಪ್ರಕರಣದ ಕಾಂಗ್ನೀಸ್ ಪಡೆದು ತನಿಖೆಗೆ ಲೋಕಾಯುಕ್ತ ಮುಂದಾಗಿತ್ತು. ಬಳಿಕ ಸಾಕ್ಷಿ ನೀಡುವಂತೆ ನ್ಯೂಸ್​ಫಸ್ಟ್​ಗೆ ನೋಟಿಸ್ ನೀಡಿತ್ತು. ಹೀಗಾಗಿ ಸ್ಟಿಂಗ್ ರಾ ಪೂಟೇಜ್ ಮತ್ತು ಎವಿಡೆನ್ಸ್ ಆ್ಯಕ್ಟ್ ಸೆ.65 ಅಡಿ ಪ್ರಮಾಣ ಪತ್ರ ಸಲ್ಲಿಕೆ ಮಾಡಿತ್ತು. ಆದರಂತೆ ತನಿಖೆಗೆ ಸ್ಯಾಕ್ಷನ್ ಕೇಳಿ ಗವರ್ನರ್​ಗೆ ಲೋಕಾಯುಕ್ತ ಪತ್ರ ಬರೆದಿತ್ತು. ಆದರೆ 2 ವರ್ಷಗಳ ಬಳಿಕ ರಾಜ್ಯಪಾಲರು ಅನುಮತಿ ನಿರಾಕರಿಸಿದ್ದಾರೆ. ಈ ಮೂಲಕ ಲೋಕಾಯುಕ್ತದಲ್ಲಿ ಪ್ರಕರಣ ಇನ್ನೂ ಜೀವಂತವಾಗಿದೆ.

ಮೊಟ್ಟೆ ಹಗರಣದ ಕಾನೂನಾತ್ಮಕ ಹೋರಾಟದಲ್ಲಿ ನ್ಯೂಸ್ ಫಸ್ಟ್​ಗೆ ಜಯ ಸಿಕ್ಕಿದೆ. ಧೂಳು ಹಿಡಿದಿರುವ ಮೊಟ್ಟೆ ಪ್ರಕರಣದ ಫೈಲ್​ಗೆ ಜೀವ ಸಿಗುತ್ತಾ, ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಯಾವಾಗ?. 2 ವರ್ಷ ಕಳೆದ್ರೂ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿಲ್ಲ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment