/newsfirstlive-kannada/media/post_attachments/wp-content/uploads/2024/01/Sheikh-Hasina.jpg)
ಢಾಕಾ: ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಆಡಳಿತ ಅಂತ್ಯವಾಗಿದೆ. ದಶಕಕ್ಕೂ ಹೆಚ್ಚು ಕಾಲ ಆಳ್ವಿಕೆ ಮಾಡಿ ಉಕ್ಕಿನ ಮಹಿಳೆ ಎನಿಸಿಕೊಂಡಿದ್ದ ಹಸೀನಾ ಹುಟ್ಟಿದ ನಾಡನ್ನೇ ತೊರೆಯುವಂತಾಗಿದೆ. ಇದೀಗ ಹಸೀನಾ ಸ್ಥಾನಕ್ಕೆ ಮತ್ತೊಬ್ಬರ ನೇಮಕವಾಗಿದೆ. ನೊಬೆಲ್ ಪ್ರಶಸ್ತಿ ವಿಜೇತ ಸಾಧಕರೊಬ್ಬರು ಮಧ್ಯಂತರ ಪ್ರಧಾನಿಯಾಗಿ ಪಟ್ಟ ಅಲಂಕರಿಸಿದ್ದಾರೆ.ಶೇಖ್ ಹಸೀನಾ.
ಬಾಂಗ್ಲಾದೇಶದ ಗಟ್ಟಿಗಿತ್ತಿ. ಭಾರತದ ನೆರೆರಾಷ್ಟ್ರದ ಐರನ್ ಲೇಡಿ. ಆದ್ರೀಗ 15 ವರ್ಷಗಳ ಹಸೀನಾ ಆಡಳಿತ ಅಂತ್ಯವಾಗಿದೆ. ಹಿಂಸಾಚಾರ, ಗಲಭೆ, ದೊಂಬಿಗಳಿಂದ ಶೇಖ್ ಹಸೀನಾ ರಾಜೀನಾಮೆ ನೀಡಿದ್ದಾರೆ. ಇದೀಗ ಶೇಖ್ ಜಾಗವನ್ನ ಮತ್ತೊಬ್ಬರು ಆಕ್ರಮಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಕ್ಷಿಪ್ರ ರಾಜಕೀಯ ಕ್ರಾಂತಿಯಿಂದ ಸರ್ಕಾರವೇ ಪತನವಾಗಿದೆ. ಇದೀಗ ಹೊಸ ಸರ್ಕಾರ ಕಟ್ಟಲು, ದೇಶದಲ್ಲಿ ಆಡಳಿತ ನಡೆಸಲು ಹೊಸ ಸರ್ಕಾರದ ಅವಶ್ಯಕತೆ ಇದೆ. ಹೀಗಾಗಿ ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರ ರಚನೆ ಆಗಲಿದೆ. ಈ ಸರ್ಕಾರಕ್ಕೆ ಮೊಹಮ್ಮದ್ ಯೂನಸ್‌ರನ್ನ ಪ್ರಧಾನಿಯಾಗಿ ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಹಿಂದೂಗಳೇ ಟಾರ್ಗೆಟ್.. ಬರೋಬ್ಬರಿ 54 ಕಡೆ ಚಿತ್ರಹಿಂಸೆ ಕೊಟ್ಟು ಕೊಲೆ; ಏನೇನಾಯ್ತು
ನೊಬೆಲ್ ಪ್ರಶಸ್ತಿ ವಿಜೇತ ಮೊಹಮ್ಮದ್ ಯೂನಸ್ ಸದ್ಯ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಸಾರಥಿಯಾಗಿ ಆಯ್ಕೆಯಾಗಿದೆ. ಬಾಂಗ್ಲಾ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 84 ವರ್ಷದ ಯೂನಸ್‌ರಿಗೆ ಪಟ್ಟ ಕಟ್ಟಲಾಗಿದೆ. ಈ ಸಭೆಯಲ್ಲಿ ಮೂರು ಸೇನೆಯ ಮುಖ್ಯಸ್ಥರು ಭಾಗಿಯಾಗಿದ್ದು, ದೇಶದಲ್ಲಿ ಶಾಂತಿ ನೆಲೆಸುವ ನಿಟ್ಟಿನಲ್ಲಿ ಚರ್ಚೆ ಮಾಡಲಾಗಿದೆ.
ಯಾರು ಈ ಮೊಹಮ್ಮದ್ ಯೂನಸ್?
ಮೊಹಮ್ಮದ್ ಯೂನಸ್ ಬಡತನದ ವಿರುದ್ಧ ಹಲವು ಹೋರಾಟಗಳನ್ನ ನಡೆಸಿದ್ದಾರೆ. ಹೀಗಾಗಿ ಬಾಂಗ್ಲಾದಲ್ಲಿ ಮೊಹಮ್ಮದ್ ಯೂನಸ್ ಬಡವರ ಬ್ಯಾಂಕರ್ ಎಂದೇ ಪ್ರಖ್ಯಾತಿಗಳಿಸಿದ್ದಾರೆ. ಅಲ್ಲದೇ ನೊಬೆಲ್ ಪ್ರಶಸ್ತಿಗೂ ಪಾತ್ರರಾಗಿರೋ ಮೊಹಮ್ಮದ್ ಯೂನಸ್‌ರೇ ಪ್ರತಿಭಟನಾ ನಿರತ ವಿಧ್ಯಾರ್ಥಿಗಳ ಆಯ್ಕೆಯೂ ಆಗಿದ್ದಾರೆ. ಅಲ್ಲದೇ ಹಲವು ನಾಯಕರ ಆಯ್ಕೆಯೂ ಮೊಹಮ್ಮದ್ ಯೂನಸ್ ಆಗಿದ್ದಾರೆ
ವರ್ಷದಿಂದ ಪ್ರಧಾನಿಯಾಗಿ ಆಡಳಿತ ನಡೆಸಿದ ದೇಶವನ್ನೇ ತೊರೆಯೋದು ಅಷ್ಟು ಸುಲಭದ ಮಾತಲ್ಲ. ಹೀಗಾಗಿ ಆಗಸ್ಟ್ 5ರ ರಾತ್ರಿ ಶೇಖ್ ಹಸೀನಾಗೆ ಕರಾಳದಿನವಾಗಿತ್ತು. ದೇಶಬಿಡಲು ಒಪ್ಪದೇ ಹಸೀನಾ ಬಿಗಿಪಟ್ಟು ಹಿಡಿದಿದ್ರು. ಆದ್ರೆ, ಅವರನ್ನ ಮನವೊಲಿಸಿದ್ಹೇಗೆ ತೋರಿಸ್ತೀವಿ ನೋಡಿ.
ಆಗಸ್ಟ್ 5ರ ರಾತ್ರಿ ಶೇಖ್ ಹಸೀನಾ ನಿವಾಸದಲ್ಲಿ ಆಗಿದ್ದೇನು?
ಆಗಸ್ಟ್ 5ರಂದು ಶೇಖ್ ಹಸೀನಾ ನಿವಾಸಕ್ಕೆ ಮುತ್ತಿಗೆ ಹಾಕಲು ಪ್ರತಿಭಟನಾಕಾರರು ಪ್ಲಾನ್ ಮಾಡಿದ್ರು. ಒಂದ್ವೇಶೆ ಪ್ರಧಾನಿಯ ನಿವಾಸಕ್ಕೆ ನುಗ್ಗಿದ್ದರೇ ಜೀವಕ್ಕೆ ರಕ್ಷಣೆಯೇ ಇರುತ್ತಿರಲಿಲ್ಲ. ಹೀಗಾಗಿ ಶೇಖ್ ಹಸೀನಾಗೆ ದೇಶ ಬಿಟ್ಟು ತೆರಳುವಂತೆ ಭದ್ರತಾಪಡೆ, ಸೇನಾಪಡೆಯಿಂದ ಸೂಚನೆ ಬಂದಿತ್ತು. ಆದ್ರೆ, ಇದಕ್ಕೆ ಒಪ್ಪದೇ ಬಾಂಗ್ಲಾದೇಶದಲ್ಲಿ ಇರುವುದಾಗಿ ಶೇಖ್ ಹಸೀನಾ ಬಿಗಿಪಟ್ಟು ಹಿಡಿದಿದ್ರು. ಹೀಗಾಗಿ ಹಸೀನಾ ಸೋದರಿ ಶೇಖ್ ರೆಹನಾ ಮೂಲಕ ಮನವೊಲಿಕೆಗೆ ಯತ್ನ ನಡೆಸಲಾಗಿತ್ತು.
ಇದನ್ನೂ ಓದಿ:ನೇಪಾಳದಲ್ಲಿ ಮತ್ತೊಂದು ಭಯಾನಕ ದುರಂತ.. ಹೆಲಿಕಾಪ್ಟರ್ ಪತನ; ನಾಲ್ವರ ದಾರುಣ ಸಾವು; ಆಗಿದ್ದೇನು?
ಆದ್ರೆ, ಶೇಖ್ ರೆಹನಾರಿಂದಲೂ ಹಸೀನಾರ ಮನವೊಲಿಕೆ ಯತ್ನ ವಿಫಲವಾಗಿತ್ತು. ಕೊನೆಗೆ ಶೇಖ್ ಹಸೀನಾ ಪುತ್ರ ಸಜೀಬ್ ವಾಜೀದ್ ಮನವೊಲಿಕೆಗೆ ಒಪ್ಪಿಕೊಂಡಿದ್ರು. ಇನ್ನೇನು ಪ್ರತಿಭಟನಾಕಾರರು ಹಸೀನಾ ಮನೆ ತಲುಪಲು 45 ನಿಮಿಷ ಬೇಕಿತ್ತು. ಅಷ್ಟರೊಳಗೆ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವಂತೆ ಸೇನೆ ಸೂಚನೆ ನೀಡಿತ್ತು. ಮಧ್ಯಾಹ್ನ 1.30 ರೊಳಗೆ ರಾಜೀನಾಮೆಗೆ 45 ನಿಮಿಷದ ಡೆಡ್ ಲೈನ್ ನೀಡಲಾಗಿತ್ತು. ಹೀಗಾಗಿ ಮಧ್ಯಾಹ್ನ 2.15 ರೊಳಗೆ ಪ್ರಧಾನಿ ಹುದ್ದೆಗೆ ಶೇಖ್ ರಾಜೀನಾಮೆ ನೀಡಿದ್ರು. ಬಳಿಕ ಬಳಿಕ ಸೇನಾ ಹೆಲಿಕಾಪ್ಟರ್ ಮೂಲಕ ಭಾರತಕ್ಕೆ ಹಾರಿದ್ದರು.
ಹೀಗೆ ಒಂದೇ ದಿನದಲ್ಲಿ ಪ್ರಧಾನಿ ಪಟ್ಟ ತೊರೆದಿದ್ದಲ್ಲದೇ ದೇಶವನ್ನೇ ಬಿಟ್ಟು ಶೇಖ್ ವಿದೇಶಕ್ಕೆ ಹಾರುವಂತಾಗಿತ್ತು. ವಿದಾಯ ಭಾಷಣ ಮಾಡಲು ಅವಕಾಶವನ್ನೂ ನೀಡದೇ ದೇಶದಿಂದ ಹೊರನೂಕಲಾಗಿತ್ತು. ಹೀಗೆ ತರಾತುರಿಯಲ್ಲಿ ದೇಶ ಬಿಟ್ಟು ಭಾರತಕ್ಕೆ ಬಂದಿರೋ ಶೇಖ್ ಗೂಡು ಬಿಟ್ಟ ಹಕ್ಕಿಯಾಗಿದ್ದಾರೆ. ಇದೀಗ ಮುಂದಿನ ನೆಲೆ ಯಾವುದಯ್ಯಾ? ಅನ್ನೋದೆ ಹಸೀನಾ ಪ್ರಶ್ನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ