newsfirstkannada.com

UAE ರಾಯಲ್‌ ಮನೆತನದ ಉತ್ತರಾಧಿಕಾರಿ ನಿಗೂಢ ಸಾವು.. ದುಬೈನಲ್ಲಿ ನೀರವ ಮೌನ; ಹಲವು ಅನುಮಾನ

Share :

Published May 10, 2024 at 9:43pm

Update May 10, 2024 at 9:44pm

  ಯುನೈಟೆಡ್ ಅರಬ್ ಎಮಿರೇಟ್ಸ್‌ನ (UAE) ರಾಯಲ್ ಮನೆತನದ ಸದಸ್ಯ

  ಶೇಖ್ ಹಝಾ ಬಿನ್ ಸುಲ್ತಾನ್ ಸಾವಿಗೆ ದುಬೈನಲ್ಲಿ ನೀರವ ಮೌನ

  ಇವರ ವಯಸ್ಸು ಎಷ್ಟು? ಇವರ ಸಾವಿಗೆ ಕಾರಣವೇನು ಅನ್ನೋದು ನಿಗೂಢ

ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್‌ನ (UAE) ರಾಯಲ್ ಮನೆತನದ ಸದಸ್ಯ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ದುಬೈನಲ್ಲಿ ನೀರವ ಮೌನ ಆವರಿಸಿದೆ. ಶೇಖ್ ಹಝಾ ಬಿನ್ ಸುಲ್ತಾನ್ ಬಿನ್ ಜಾಯೆದ್ ಅಲ್ ನಹ್ಯಾನ್ ಸಾವಿಗೆ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

ಶೇಖ್ ಹಝಾ ಬಿನ್ ಸುಲ್ತಾನ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಸದ್ಯ ಯುನೈಟೆಡ್ ಅರಬ್ ಆಳುತ್ತಿರುವ ಮನೆತನದ ಸದಸ್ಯರು. ಹೀಗಾಗಿ ಶೇಖ್ ಹಝಾ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗಿದೆ. ಇವರ ಅಂತ್ಯಕ್ರಿಯೆಗೆ ದುಬೈ ದೊರೆ ಸೇರಿದಂತೆ ಇಡೀ ದೇಶದ ಗಣ್ಯರು ಭಾಗಿಯಾಗಿದ್ದರು. ಅಬುಧಾಬಿಯ ಶೇಖ್ ಸುಲ್ತಾನ್ ಬಿನ್ ಜಾಯೆದ್ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಲಾಗಿದೆ.

ಇದನ್ನೂ ಓದಿ: ಬ್ಯೂಟಿ ಕ್ವೀನ್ ಬರ್ಬರ ಹತ್ಯೆ.. ರೆಸ್ಟೋರೆಂಟ್‌ನಲ್ಲಿ ಗುಂಡಿಕ್ಕಿ ಕೊಂದ ಹಂತಕರು; ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ! 

ಶೇಖ್ ಹಝಾ ಬಿನ್ ಸುಲ್ತಾನ್ ಅವರ ವಯಸ್ಸು ಎಷ್ಟು? ಇವರ ಸಾವಿಗೆ ಕಾರಣವೇನು ಅನ್ನೋದು ನಿಗೂಢವಾಗಿದೆ. ಮೂಲಗಳ ಪ್ರಕಾರ ಶೇಖ್ ಹಝಾ ಬಿನ್ ಸುಲ್ತಾನ್ ಅವರಿಗೆ 58 ವರ್ಷ ವಯಸ್ಸಾಗಿತ್ತು. ಇವರು ಕುದುರೆಯ ರೇಸ್‌ನಲ್ಲಿ ಸಾಕಷ್ಟು ಪ್ರವೀಣರಾಗಿದ್ದರು. ಕುದುರೆ ಸವಾರಿಯಲ್ಲಿ ಇವರ ಅಸಾಧಾರಣ ಪ್ರತಿಭೆಗೆ ಎಲ್ಲರೂ ಬೆರಗಾಗಿದ್ದರು. 2019ರಲ್ಲಿ ಶೇಖ್ ಹಝಾ ಬಿನ್ ಸುಲ್ತಾನ್ ಅವರ ತಂದೆ ಸಾವನ್ನಪ್ಪಿದ್ದರು. ಇದೀಗ ಶೇಖ್ ಹಝಾ ಬಿನ್ ಸುಲ್ತಾನ್ ಅವರು ನಿಗೂಢವಾಗಿ ಸಾವನ್ನಪ್ಪಿದ್ದಾರೆ.

ಶೇಖ್ ಹಝಾ ಬಿನ್ ಸುಲ್ತಾನ್ ಅವರ ಸಾವಿಗೆ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಕರಾಳ ದಿನ ಆಚರಿಸಲಾಗಿದೆ. ಮುಂದಿನ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿದ್ದ ಶೇಖ್ ಹಝಾ ಬಿನ್ ಸುಲ್ತಾನ್ ಸಾವಿಗೆ ತೀವ್ರ ಕಂಬನಿ ಮಿಡಿಯಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

UAE ರಾಯಲ್‌ ಮನೆತನದ ಉತ್ತರಾಧಿಕಾರಿ ನಿಗೂಢ ಸಾವು.. ದುಬೈನಲ್ಲಿ ನೀರವ ಮೌನ; ಹಲವು ಅನುಮಾನ

https://newsfirstlive.com/wp-content/uploads/2024/05/Dubai.jpg

Load More