newsfirstkannada.com

ಬೆಳ್ಳಂಬೆಳಗ್ಗೆಯೇ ಶಾಕ್​ ಕೊಟ್ಟ ಶಿಖರ್​ ಧವನ್.. ದೇಶೀಯ, ಅಂತರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ

Share :

Published August 24, 2024 at 9:01am

Update August 24, 2024 at 9:39am

    38 ವರ್ಷದ ಶಿಖರ್​ ಧವನ್​​ರಿಂದ ನಿವೃತ್ತಿ ಘೋಷಣೆ

    ನಾನು ನನ್ನ ಕ್ರಿಕೆಟ್ ಪಯಣಕ್ಕೆ ವಿದಾಯ ಹೇಳುತ್ತಿದ್ದೇನೆ

    2013ರಲ್ಲಿ ಟೀಂ ಇಂಡಿಯಾಗೆ ಮರಳಿದ ಶಿಖರ್ ಧವನ್

ಬೆಳ್ಳಂ ಬೆಳಗ್ಗೆಯೇ ಭಾರತದ ಮಾಜಿ ಕ್ರಿಕೆಟಿಗ ಶಿಖರ್​ ಧವನ್​ ಅಭಿಮಾನಿಗಳಿಗೆ ಶಾಕ್​​ ನೀಡಿದ್ದಾರೆ. ದೇಶೀಯ ಮತ್ತು ಅಂತರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕುರಿತಾಗಿ ವಿಡಿಯೋ ಹಂಚಿಕೊಳ್ಳುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

38 ವರ್ಷದ ಶಿಖರ್​ ಧವನ್​​ ಕೊನೆಯದಾಗಿ ಬಾಂಗ್ಲಾದೇಶದ ವಿರುದ್ಧ ODI ಸರಣಿಯಲ್ಲಿ ಆಡಿದ್ದರು. ಆ ಬಳಿಕ ಅವರ ಸ್ಥಾನವನ್ನು 2022ರಲ್ಲಿ ಶೂಭ್ಮನ್​ ಗಿಲ್​ ಕಸಿದುಕೊಂಡರು. ಆದರೀಗ ಶಿಖರ್​ ಧವನ್​ ದೇಶೀಯ ಮತ್ತು ಅಂತರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ವೃತ್ತಿ ಜೀವನದ ಉದ್ದಕ್ಕೂ ಪ್ರೋತ್ಸಾಹ ಮತ್ತು ಪ್ರೀತಿ ನೀಡಿದ್ದಕ್ಕಾಗಿ ಧನ್ಯವಾದ ಹೇಳಿದ್ದಾರೆ.

ಇದನ್ನೂ ಓದಿ: ನಿವೃತ್ತಿ ವದಂತಿ ಬೆನ್ನಲ್ಲೇ.. ಮತ್ತೊಂದು ಬಿಗ್​ ಸ್ಟೇಟ್​​ಮೆಂಟ್​​ ಕೊಟ್ಟ KL ರಾಹುಲ್..!

ಶಿಖರ್​ ಧವನ್​ ದೆಹಲಿ ಮೂಲದವರಾಗಿದ್ದು, ವಿಶಾಖಪಟ್ಟಣಂನಲ್ಲಿ ನಡೆದ ODI ಸಂದರ್ಭದಲ್ಲಿ ಆಸ್ಟ್ರೇಲಿಯಾ ವಿರುದ್ಧ ಚೊಚ್ಚಲ ಪ್ರವೇಶ ಮಾಡಿದರು. ಆದರೆ ಎರಡು ಎಸೆತಗಳ ಡಕ್​​ಗೆ ಔಟ್​ ಆಗುವ ಮೂಲಕ ವೃತ್ತಿ ಜೀವನದಲ್ಲಿ ಉತ್ತಮ ಆಟವನ್ನು ತೋರಿಸಿರಲಿಲ್ಲ. ಆರಂಭಿಕ ವೈಫಲ್ಯದ ಅನುಭವಿಸುತ್ತಿದ್ದ ಶಿಖರ್​ 2013ರಲ್ಲಿ ಟೀಂ ಇಂಡಿಯಾಗೆ ಮರಳಿದರು. ಮೂರು ಸ್ವರೂಪದಲ್ಲಿ ಗುರುತಿಸಿಕೊಂಡರು.

ಇದನ್ನೂ ಓದಿ: Gold Rate: ನಿನ್ನೆಗಿಂತ ಇಂದು ಇಳಿಕೆ ಕಂಡ ಚಿನ್ನ.. ಬೆಂಗಳೂರಲ್ಲಿ ಗೋಲ್ಡ್​ ರೇಟ್​​ ಎಷ್ಟಿದೆ?

ಶಿಖರ್​ ತನ್ನ ನಿವೃತ್ತಿ ವಿಚಾರವಾಗಿ ವಿಡಿಯೋ ಹಂಚಿಕೊಂಡಿದ್ದು, ಅದರಲ್ಲಿ ‘ನಾನು ಭಾರತಕ್ಕಾಗಿ ಆಡುವ ಗುರಿಯನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದೆ. ನಾನು ಅದನ್ನು ಸಾಧಿಸಿದ್ದೇನೆ. ಬಹಳಷ್ಟು ಜನರಿಗೆ ನನ್ನ ಧನ್ಯವಾದಗಳು. ಮೊದಲನೆಯದಾಗಿ ನನ್ನ ಕುಟುಂಬ, ನನ್ನ ಬಾಲ್ಯದ ಕೋಚ್ ತಾರಕ್ ಸಿನ್ಹಾ ಮತ್ತು ಮದನ್ ಶರ್ಮಾ ಅವರ ಮಾರ್ಗದರ್ಶನದಲ್ಲಿ ನಾನು ಕ್ರಿಕೆಟ್ ಕಲಿತೆ. ನಂತರ ನಾನು ವರ್ಷಗಳ ಕಾಲ ಆಡಿದ ನನ್ನ ಇಡೀ ತಂಡಕ್ಕೆ ಧನ್ಯವಾದಗಳು. ಇದು ನನ್ನ ಮತ್ತೊಂದು ಕುಟುಂಬ. ಇಲ್ಲಿ ನನಗೆ ಖ್ಯಾತಿ ಮತ್ತು ಎಲ್ಲರ ಪ್ರೀತಿ ಮತ್ತು ಬೆಂಬಲ ಸಿಕ್ಕಿತು. ಕಥೆಯಲ್ಲಿ ಮುಂದುವರಿಯಲು ನೀವು ಪುಟಗಳನ್ನು ತಿರುಗಿಸಬೇಕು ಎಂದು ಹೇಳಲಾಗುತ್ತದೆ. ಹಾಗಾಗಿ, ನಾನು ಸಹ ಅದನ್ನು ಮಾಡುತ್ತಿದ್ದೇನೆ, ನಾನು ಅಂತರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಿದ್ದೇನೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಉಕ್ರೇನ್​ ಅಧ್ಯಕ್ಷನ ಕೈಯಲ್ಲಿದೆಯೇ ಮೋದಿ ಭವಿಷ್ಯ? ವಾಡ್ಲಿಮಿರ್ ಜೊತೆ ಕೈ ಕುಲುಕಿ ಅಧಿಕಾರ ಕಳೆದುಕೊಂಡ ನಾಯಕರಿವರು!

ನಂತರ ಮಾತು ಮುಂದುವರೆಸಿದ ಅವರು, ‘ಈಗ ನಾನು ನನ್ನ ಕ್ರಿಕೆಟ್ ಪಯಣಕ್ಕೆ ವಿದಾಯ ಹೇಳುತ್ತಿದ್ದೇನೆ. ನನ್ನ ದೇಶಕ್ಕಾಗಿ ನಾನು ಸಾಕಷ್ಟು ಆಡಿದ್ದೇನೆ ಎಂಬ ತೃಪ್ತಿ ನನಗಿದೆ. ನನಗೆ ಈ ಅವಕಾಶವನ್ನು ನೀಡಿದ ಬಿಸಿಸಿಐ, ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ ಮತ್ತು ಅವರ ಪ್ರೀತಿ ಮತ್ತು ಬೆಂಬಲಕ್ಕಾಗಿ ನನ್ನ ಎಲ್ಲಾ ಅಭಿಮಾನಿಗಳಿಗೆ ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ ಎಂದು ಶಿಖರ್​ ಧವನ್​​ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಳ್ಳಂಬೆಳಗ್ಗೆಯೇ ಶಾಕ್​ ಕೊಟ್ಟ ಶಿಖರ್​ ಧವನ್.. ದೇಶೀಯ, ಅಂತರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ

https://newsfirstlive.com/wp-content/uploads/2024/08/Shikar-dhawan.jpg

Load More