ಕೆಎಲ್ ರಾಹುಲ್ ನಿವೃತ್ತಿ ಬಗ್ಗೆ ಪೋಸ್ಟ್ ವೈರಲ್ ಆಗ್ತಿದೆ
ರಾಹುಲ್ ನಿವೃತ್ತಿ ವದಂತಿ ಸುದ್ದಿ ತಿಳಿದು ಅಭಿಮಾನಿಗಳಿಗೆ ಆಘಾತ
ಈ ಬಾರಿ ಮಾಡಿದ ಇನ್ಸ್ಟಾ ಪೋಸ್ಟ್ನಲ್ಲಿ ಏನೆಂದು ಬರೆಯಲಾಗಿದೆ?
ಕ್ರಿಕೆಟಿಗ ಕೆಎಲ್ ರಾಹುಲ್ ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಟಾಪಿಕ್ ಆಗಿದ್ದಾರೆ. ಕಾರಣ, ಅವರ ಕ್ರಿಕೆಟ್ ನಿವೃತ್ತಿ ಕುರಿತು ಗೊಂದಲಕಾರಿ ಪೋಸ್ಟ್ಗಳು. ವೈರಲ್ ಆಗಿರುವ ಪೋಸ್ಟ್ಗಳಿಗೆ ಇಲ್ಲಿಯವರೆಗೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಈ ಮಧ್ಯೆ ರಾಹುಲ್ ಮತ್ತೊಂದು ಪೋಸ್ಟ್ ಮಾಡಿದ್ದಾರೆ.
ವೈರಲ್ ಆಗ್ತಿರುವ ಪೋಸ್ಟ್ನಲ್ಲಿ ಏನಿದೆ?
ವೈರಲ್ ಆಗುತ್ತಿರೋ ಪೋಸ್ಟ್ನಲ್ಲಿ ಕೆ.ಎಲ್ ರಾಹುಲ್ ಕ್ರಿಕೆಟ್ ನಿವೃತ್ತಿ ಘೋಷಿಸಿದ್ದಾರೆ. ಭಾರತ ತಂಡವನ್ನು ಪ್ರತಿನಿಧಿಸಿದ್ದು ನನ್ನದು. ಅನೆಕ ಪ್ರತಿಭಾನ್ವಿತ ಆಟಗಾರರ ಜೊತೆ ಆಡಿದ ನೆನಪುಗಳು ಇವೆ. ನನ್ನನ್ನು ಬೆಂಬಲಿಸಿ ಎಲ್ಲರಿಗೂ ಧನ್ಯಾವಾದಗಳು ಎಂದು ಬರೆಯಲಾಗಿದೆ. ಈ ಪೋಸ್ಟ್ ವೈರಲ್ ಆಗುವುದಕ್ಕೂ ಮೊದಲು ಮತ್ತೊಂದು ಪೋಸ್ಟ್ ಮಾಡಿದ್ದರು. ಅದರಲ್ಲಿ ‘ಅವರು ನಾನು ಏನೋ ಹೇಳುವುದಿದೆ’ ಎಂದು ಬರೆಯಲಾಗಿತ್ತು. ಈ ಪೋಸ್ಟನ್ನೇ ಕಿಡಿಗೆಡಿಗಳು ತಮಗೆ ಇಷ್ಟ ಬಂದಂತೆ ತಿರುಚಿದ್ದಾರೆ ಎಂದು ಹೇಳಲಾಗಿದೆ. ಇನ್ನೊಂದೆಡೆ ಕೆ.ಎಲ್ ರಾಹುಲ್ ಅವರೇ ಪೋಸ್ಟ್ ಮಾಡಿ ಮತ್ತೆ ಡಿಲೀಟ್ ಮಾಡಿದ್ದಾರೆ ಎಂದು ವರದಿಯಾಗಿತ್ತು.
ಇದನ್ನೂ ಓದಿ:ಇಂಡಸ್ಟ್ರಿ ಬಗ್ಗೆ ಕೆಟ್ಟದಾಗಿ ಮಾತನಾಡೋರ ವಿರುದ್ಧ ಡಾಲಿ ಧನಂಜಯ ಆಕ್ರೋಶ.. ಏನಂದ್ರು
ಹೊಸ ಪೋಸ್ಟ್ನಲ್ಲಿ ಏನಿದೆ..?
ಈ ಎಲ್ಲ ಬೆಳವಣಿಗೆಗಳ ಮಧ್ಯೆ ರಾಹುಲ್ರ ಇನ್ಸ್ಟಾಗ್ರಾಮ್ ಸ್ಟೋರಿಸ್ನಿಂದ ಮತ್ತೊಂದು ಪೋಸ್ಟ್ ಹೊರಬಿದ್ದಿದೆ. ನಮ್ಮ ಹರಾಜು ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದೆ. ಸಂಗ್ರಹಿಸಿದ ಹಣದಿಂದ ವಿಶೇಷ ಮಕ್ಕಳ ಬದುಕು ಸುಧಾರಿಸುವುದನ್ನು ಮುಂದುವರಿಸುತ್ತೇವೆ. ನಮ್ಮನ್ನು ಬೆಂಬಲಿಸಿದ, ಕ್ರಿಕೆಟ್ ಜಗತ್ತಿಗೆ ಸಂಬಂಧಿಸಿದ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ. ದೇಣಿಗೆ ನೀಡಿದವರಿಗೆ ಕೃತಜ್ಞತೆಗಳು ಎಂದು ಪೋಸ್ಟ್ ಮಾಡಿದ್ದಾರೆ.
ವಾಸ್ತವಾಗಿ ಕೆಎಲ್ ರಾಹುಲ್ ಹಾಗೂ ಅಥಿಯಾ ಶೆಟ್ಟಿ ವಿಪ್ಲಾ ಫೌಂಡೇಶನ್‌ನೊಂದಿಗೆ ಸೇರಿ ನಿರ್ಗತಿಕ ಮಕ್ಕಳಿಗಾಗಿ 1.93 ಕೋಟಿ ರೂಪಾಯಿ ಸಂಗ್ರಹಿಸಿದ್ದಾರೆ. ಈ ಕುರಿತು ಅವರು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ. ಹರಾಜಿನಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿಂದತೆ ಅನೇಕ ಕ್ರಿಕೆಟಿಗರ ವಸ್ತುಗಳು ಹರಾಜಿಗಿದ್ದವು.
ಇದನ್ನೂ ಓದಿ:IND vs BAN: ಟೆಸ್ಟ್ ಸರಣಿಗೆ ಟೀಂ ಇಂಡಿಯಾದಲ್ಲಿ ಯಾರಿಗೆಲ್ಲ ಚಾನ್ಸ್..?
Proud of you @klrahul bro 🛐💥 pic.twitter.com/6l9LIVqFw1
— VK✨ (@C_E_N_A_T_I_O_N) August 23, 2024
ಕೆಎಲ್ ರಾಹುಲ್ ನಿವೃತ್ತಿ?
ಇನ್ನು ಕೆಎಲ್ ರಾಹುಲ್ ನಿವೃತ್ತಿಯ ಬಗ್ಗೆ ಯಾವುದೇ ಔಪಚಾರಿಕ ಹೇಳಿಕೆ ನೀಡಿಲ್ಲ. ರಾಹುಲ್ ಪ್ರಸ್ತುತ ದುಲೀಪ್ ಟ್ರೋಫಿ 2024 ತಯಾರಿಯಲ್ಲಿದ್ದಾರೆ. ಇದು ಸೆಪ್ಟೆಂಬರ್ 5-22 ರವರೆಗೆ ನಡೆಯಲಿದೆ. ನಂತರ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅವರನ್ನು ಕಾಣಬಹುದು.
ಇದನ್ನೂ ಓದಿ: ಅನಿಲ್ ಅಂಬಾನಿ ಷೇರು ಮಾರುಕಟ್ಟೆಯಿಂದ ಬ್ಯಾನ್.. ಕಾರಣ ಏನು..?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್