ಅಂಬಾನಿ ಮಾತ್ರವಲ್ಲ, ಇನ್ನೂ ಯಾರು ಯಾರಿಗೆ ನಿಷೇಧ ಶಿಕ್ಷೆ..?
ಅನಿಲ್ ಅಂಬಾನಿ ವಿರುದ್ಧ ಕೇಳಿ ಬಂದಿರುವ ಆರೋಪ ಏನು?
ನಿಷೇಧ ಬೆನ್ನಲ್ಲೇ ಅನಿಲ್ ಅಂಬಾನಿಗೆ ಸಮೂಹ ಷೇರುಗಳು ಕುಸಿತ
ಸಾಲದ ಸುಳಿಯಲ್ಲಿ ಸಿಲುಕಿರುವ ಕೈಗಾರಿಕೋದ್ಯಮಿ ಅನಿಲ್ ಅಂಬಾನಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಹಣ ದುರುಪಯೋಗದ ಪ್ರಕರಣದಲ್ಲಿ ಐದು ವರ್ಷಗಳ ಕಾಲ ಷೇರು ಮಾರುಕಟ್ಟೆಯಿಂದ ಮಾರುಕಟ್ಟೆ ನಿಯಂತ್ರಕ ಸೆಬಿ (Securities and Exchange Board of India) ನಿಷೇಧಿಸಿದೆ.
ರಿಲಯನ್ಸ್ ಹೋಮ್ ಫೈನಾನ್ಸ್‌ನ (RHFL) ಮಾಜಿ ಅಧಿಕಾರಿಗಳು ಸೇರಿದಂತೆ ಒಟ್ಟು 24 ಉದ್ಯಮಿಗಳನ್ನು ಸೆಕ್ಯೂರೆಟೀಸ್ ಮಾರ್ಕೆಟ್ನಿಂದ ನಿಷೇಧ ಮಾಡಲಾಗಿದೆ. ಅನಿಲ್ ಅಂಬಾನಿಗೆ 25 ಕೋಟಿ ರೂಪಾಯಿ ದಂಡ ವಿಧಿಸಿದೆ. ಜೊತೆಗೆ ಐದು ವರ್ಷಗಳ ಅವಧಿಗೆ ಸೆಕ್ಯುರಿಟೀಸ್ ಮಾರುಕಟ್ಟೆಯೊಂದಿಗೆ ಸಹಭಾಗಿತ್ವವನ್ನು ನಿಷೇಧಿಸಿದೆ. ರಿಲಯನ್ಸ್ ಹೋಮ್ ಫೈನಾನ್ಸ್ ಅನ್ನು ಆರು ತಿಂಗಳ ಕಾಲ ನಿಷೇಧಿಸಿ, ದಂಡ ವಿಧಿಸಿದೆ.
ಇದನ್ನೂ ಓದಿ:ಕಳೆದ ಬಾರಿ ಹಸರಂಗ ಯಾಕೆ IPL ಆಡಲಿಲ್ಲ? ಇಲ್ಲೂ ಇದೆ ಆರ್ಸಿಬಿಯ ಒಂದು ನಿರ್ಧಾರದ ಕತೆ..!
ನಿಷೇಧದ ಅವಧಿಯಲ್ಲಿ ಅವರು SEBIಯಲ್ಲಿ ನೋಂದಾಯಿತ ಯಾವುದೇ ಮಧ್ಯವರ್ತಿ, ನಿರ್ದೇಶಕ ಅಥವಾ ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿಯಾಗಿ ಸೇರಲು ಸಾಧ್ಯವಿಲ್ಲ. ಈ ಬೆನ್ನಲ್ಲೇ ಅನಿಲ್ ಅಂಬಾನಿ ಸಮೂಹ ಷೇರುಗಳಲ್ಲಿ ಭಾರೀ ಕುಸಿತ ಆಗಿದೆ. ಶೇಕಡಾ 14 ರಷ್ಟು ಷೇರು ಕುಸಿತವಾಗಿದೆ ಎಂದು ವರದಿಯಾಗಿದೆ.
ಸೆಬಿ ಆದೇಶದಲ್ಲಿ ಏನಿದೆ..?
ಅನಿಲ್ ಅಂಬಾನಿ ಮೋಸದ ಸಂಚು ರೂಪಿಸಿದ್ದಾರೆ. ರಿಲಯನ್ಸ್ ಹೋಮ್ ಫೈನಾನ್ಸ್‌ನಿಂದ ಹಣವನ್ನು ದುರುಪಯೋಗಪಡಿಸಿಕೊಳ್ಳಲು ಹಿರಿಯ ಅಧಿಕಾರಿಗಳ ಸಹಾಯ ಪಡೆದಿದ್ದಾರೆ. ಇದನ್ನು ತನ್ನ ಅಂಗಸಂಸ್ಥೆಗಳಿಂದ ಸಾಲವಾಗಿ ತೋರಿಸಲಾಗಿದೆ. ಕಂಪನಿಯ ಮಂಡಳಿಯು ಅಂತಹ ಸಾಲ ನೀಡದಂತೆ ಸೂಚನೆ ನೀಡಿತ್ತು. ಜೊತೆಗೆ ಕಾರ್ಪೊರೇಟ್ ಸಾಲಗಳ ಬಗ್ಗೆ ತನಿಖೆ ನಡೆದಿತ್ತು. ಆದರೆ ಕಂಪನಿಯ ಆಡಳಿತ ಮಂಡಳಿ ಈ ಆದೇಶಗಳನ್ನು ನಿರ್ಲಕ್ಷಿಸಿದೆ. ಅನಿಲ್ ಅಂಬಾನಿ ಪ್ರಭಾವದಿಂದ ಸಂಸ್ಥೆಯ ಹಿರಿಯ ಅಧಿಕಾರಿಗಳು ದೋಷ ಮಾಡಿರೋದು ಸಾಬೀತಾಗಿದೆ ಎಂದು 222 ಪುಟಗಳ ಆದೇಶದಲ್ಲಿ ಸೆಬಿ ತಿಳಿಸಿದೆ.
ಇದನ್ನೂ ಓದಿ:IND vs BAN: ಟೆಸ್ಟ್ ಸರಣಿಗೆ ಟೀಂ ಇಂಡಿಯಾದಲ್ಲಿ ಯಾರಿಗೆಲ್ಲ ಚಾನ್ಸ್..?
ಅನಿಲ್ ಅಂಬಾನಿಗೆ 25 ಕೋಟಿ, ಅಮಿತ್ ಬಾಪ್ನಾಗೆ 27 ಕೋಟಿ, ರವೀಂದ್ರ ಸುಧಾಲ್ಕರ್ 26 ಕೋಟಿ, ಪಿಂಕೇಶ್ ಆರ್ ಶಾಗೆ 21 ಕೋಟಿ ದಂಡ ವಿಧಿಸಲಾಗಿದೆ. ರಿಲಯನ್ಸ್ ಯೂನಿಕಾರ್ನ್ ಎಂಟರ್‌ಪ್ರೈಸಸ್, ರಿಲಯನ್ಸ್ ಎಕ್ಸ್‌ಚೇಂಜ್ ನೆಕ್ಸ್ಟ್ ಮತ್ತು ಇತರ ಕಂಪನಿಗಳು ಹಣ ದುರುಪಯೋಗದಲ್ಲಿ ಭಾಗಿಯಾಗಿದ್ದಕ್ಕಾಗಿ ತಲಾ 25 ಕೋಟಿ ರೂಪಾಯಿ ದಂಡ ವಿಧಿಸಿದೆ.
ಇದನ್ನೂ ಓದಿ:ಪಂತ್ ಕಂಬ್ಯಾಕ್.. ಕೊಹ್ಲಿ, ರೋಹಿತ್ ಗ್ಯಾರಂಟಿ; ಬಾಂಗ್ಲಾ ವಿರುದ್ಧ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಹೇಗಿರುತ್ತೆ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ