/newsfirstlive-kannada/media/post_attachments/wp-content/uploads/2024/08/DHAWAN.jpg)
ಟೀಂ ಇಂಡಿಯಾ ದಿಗ್ಗಜ ಬ್ಯಾಟ್ಸ್‌ಮನ್ ಶಿಖರ್ ಧವನ್ ಅಂತಾರಾಷ್ಟ್ರೀಯ ಕ್ರಿಕೆಟ್ ಮತ್ತು ದೇಶೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 38 ವರ್ಷದ ಧವನ್, ಟೀಂ ಇಂಡಿಯಾದಲ್ಲಿ ದೀರ್ಘಕಾಲದಿಂದ ಕಾಣಿಸಿಕೊಂಡಿರಲಿಲ್ಲ. 2018ರಲ್ಲಿ ಕೊನೆಯ ಟೆಸ್ಟ್, 2022ರಲ್ಲಿ ಕೊನೆಯ ODI ಮತ್ತು 2021ರಲ್ಲಿ ಕೊನೆಯ T20 ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರು.
ಇದನ್ನೂ ಓದಿ:ಅಭಿಮಾನಿಗಳ ಜೊತೆ ಗುಡ್ನ್ಯೂಸ್ ಹಂಚಿಕೊಂಡ KL ರಾಹುಲ್.. ‘ನಿಮ್ಮ ಬಗ್ಗೆ ಹೆಮ್ಮೆ ಇದೆ’ ಎಂದ ಫ್ಯಾನ್ಸ್..!
ಶಿಖರ್ ಧವನ್ ಇನ್ಮುಂದೆ ಐಪಿಎಲ್‌ನಲ್ಲೂ ಆಡಲ್ಲ. ಅವರು ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ನಿವೃತ್ತಿ ಘೋಷಿಸುವಾಗ, ಧವನ್, ‘ನನ್ನ ಜೀವನದಲ್ಲಿ ಭಾರತಕ್ಕಾಗಿ ಆಡುವುದು ಗುರಿಯಾಗಿತ್ತು. ಈ ಗುರಿ ಸಾಧಿಸುವಲ್ಲಿ ಯಶಸ್ವಿ ಆಗಿದ್ದೇನೆ. ಅನೇಕರಿಗೆ ಕೃತಜ್ಞನಾಗಿದ್ದೇನೆ. ನಾನು ಅಂತಾರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ. ನನ್ನ ದೇಶಕ್ಕಾಗಿ ಬಹಳಷ್ಟು ಪಂದ್ಯಗಳನ್ನು ಆಡಿದ್ದೇನೆ. ಈ ಸಂದರ್ಭದಲ್ಲಿ BCCI ಮತ್ತು ಅಭಿಮಾನಿಗಳಿಗೆ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ.
ಧವನ್ ಅವರನ್ನು ಮಿಸ್ಟರ್ ಐಸಿಸಿ ಎಂದಿದ್ದೇಕೆ..?
- 2013ರಲ್ಲಿ ನಡೆದ ICC ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತಕ್ಕೆ ಹೆಚ್ಚಿನ ರನ್ಗಳ ಕಾಣಿಕೆ (363 ರನ್ಸ್)
- 2015ರಲ್ಲಿ ICC ODI ವರ್ಲ್ಡ್ ಕಪ್ನಲ್ಲಿ ಭಾರತಕ್ಕಾಗಿ ಹೆಚ್ಚಿನ ರನ್ಗಳ ಕಾಣಿಕೆ (412 ರನ್ಸ್)
- 2017ರಲ್ಲಿ ICC ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತಕ್ಕಾಗಿ ಹೆಚ್ಚಿನ ರನ್ಗಳು (338 ರನ್ಸ್)
- ಏಷ್ಯಾ ಕಪ್ 2018ರಲ್ಲಿ ಭಾರತಕ್ಕಾಗಿ ಹೆಚ್ಚಿನ ರನ್ಗಳನ್ನು ನೀಡಿದ್ದಾರೆ. (342 ರನ್ಸ್)
- ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಟ್ಟು 10,867 ರನ್ಗಳನ್ನು ಬಾರಿಸಿದ್ದಾರೆ
2013ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಧವನ್ ಸಾಧನೆ
- ದಕ್ಷಿಣ ಆಫ್ರಿಕಾ ವಿರುದ್ಧ 94 ಎಸೆತಗಳಲ್ಲಿ 114 ರನ್
- ವೆಸ್ಟ್ ಇಂಡೀಸ್ ವಿರುದ್ಧ 107 ಎಸೆತಗಳಲ್ಲಿ ಔಟಾಗದೇ 102 ರನ್
- ಪಾಕಿಸ್ತಾನ ವಿರುದ್ಧ 41 ಎಸೆತಗಳಲ್ಲಿ 48 ರನ್ 68 ರನ್
- ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿ 31 ರನ್
ICC ODI ಪಂದ್ಯಾವಳಿಗಳಲ್ಲಿ ಶಿಖರ್ ಧವನ್ ಅದ್ಭುತ ರೆಕಾರ್ಡ್ ಹೊಂದಿದ್ದಾರೆ. ವಿವ್ ರಿಚರ್ಡ್ಸ್, ಸೌರವ್ ಗಂಗೂಲಿ, ರೋಹಿತ್ ಶರ್ಮಾ ಮತ್ತು ಸಯೀದ್ ಅನ್ವರ್ ಅವರಂತಹ ದಿಗ್ಗಜರಿಗಿಂತ ಧವನ್ ಮುಂದಿದ್ದಾರೆ. ICC ODI ಪಂದ್ಯಾವಳಿಗಳಲ್ಲಿ ಧವನ್ ಸರಾಸರಿ 65.15 ಆಗಿದೆ.
ಇದನ್ನೂ ಓದಿ:ಎರಡನೇ ಮಗುವಿಗೆ ತಂದೆ ಆಗ್ತಿದ್ದಾರೆ ರೋಹಿತ್ ಶರ್ಮಾ; ವಿಡಿಯೋದಲ್ಲಿ ಕ್ಲೂ ಬಿಟ್ಟುಕೊಟ್ಟ ರಿತಿಕಾ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ