newsfirstkannada.com

ಶಿಖರ್​ ಧವನ್ ಈ ಬಾರಿ​ IPL​ ಆಡ್ತಾರಾ? ಪಂಬಾಜ್​ ಪುತ್ತರ್​ಗೆ ಅಂಥದ್ದೇನಾಯ್ತು?

Share :

Published August 24, 2024 at 1:44pm

    ನಿವೃತ್ತಿ ಘೋಷಿಸಿದ ಟೀಂ ಇಂಡಿಯಾದ ಗಬ್ಬರ್​ ಸಿಂಗ್​

    ದೇಶೀಯ ಮತ್ತು ಅಂತರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​ ಬೈ

    IPL ಇತಿಹಾಸದಲ್ಲೇ ಅತಿ ಹೆಚ್ಚು ರನ್​ಗಳಿಸಿದ 2ನೇ ಆಟಗಾರ

​​ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಶಿಖರ್​ ಧವನ್​ ದೇಶೀಯ ಮತ್ತು ಅಂತರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತಾಗಿ ವಿಡಿಯೋ ಹಂಚಿಕೊಳ್ಳುವ ಮೂಲಕ ನಿವೃತ್ತಿ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಆದರೀಗ ಶಿಖರ್​ ಧವನ್ ಈ ಬಾರಿಯ ಐಪಿಎಲ್​ ಆಡಲಿದ್ದಾರಾ? ಎಂಬ ಪ್ರಶ್ನೆ ಮಾತ್ರ ಅಭಿಮಾನಿಗಳನ್ನು ಬಿಟ್ಟು ಬಿಡದೆ ಕಾಡುತ್ತಿದೆ. ಇದರ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ. ಆದರೆ ಇವೆಲ್ಲದಕ್ಕೂ ಉತ್ತರ ಇಲ್ಲಿದೆ.

ಶಿಖರ್​ ಧವನ್​ ಪಂಜಾಬ್​​ ಕಿಂಗ್ಸ್​ ತಂಡದ ನಾಯಕತ್ವ ವಹಿಸಿದವರು. ಆದರೆ 2024ರಲ್ಲಿ ಅವರು ಇಂಜುರಿಯಿಂದ ತಂಡದಿಂದ ಹೊರಗುಳಿದರು. ಬಳಿಕ ಸ್ಯಾಮ್​ ಕುರ್ರಾನ್​ಗೆ ನಾಯಕತ್ವದ ಜವಾಬ್ದಾರಿ ಹೊರಿಸಿದರು.

ಈ ಬಾರಿ ಐಪಿಎಲ್​ ಆಡ್ತಾರಾ?

ಶಿಖರ್​ ಧವನ್​ ಗಾಯದಿಂದಾಗಿ ಐಪಿಎಲ್​ನಿಂದ ಹೊರಗುಳಿದಿದ್ದರು. ಆ ಬಳಿಕ ಸಂಪೂರ್ಣವಾಗಿ ಫಿಟ್ನೆಸ್​ಗೆ ಮರಳಲು ಅವರಿಗೆ ಕಷ್ಟವಾಯಿತು. ಸದ್ಯ ಅವರು ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ. ಸಂಪೂರ್ಣವಾಗಿ ಫಿಟ್​ನೆಸ್​​ ಹಂತವನ್ನು ತಲುಪಿಲ್ಲ ಎಂದು ಒಪ್ಪಿಕೊಳ್ಳುತ್ತಾರೆ.

ಇದನ್ನೂ ಓದಿ: ಶಿಖರ್ ಧವನ್​ಗೂ ಬಿಸಿಸಿಐ ಅನ್ಯಾಯ -ಗಬ್ಬರ್ ಸಿಂಗ್ ನಿವೃತ್ತಿ ಹಿಂದಿದೆ ಕೋಪ, ಆಕ್ರೋಶ

ಈ ಹಿಂದೆ ಸಂದರ್ಶನವೊಂದರಲ್ಲಿ ಶಿಖರ್​ ಧವನ್​, ‘ದುರದುಷ್ಟವಶಾತ್,​​ ನಾನು ಐಪಿಎಲ್ ಋತುವಿನಲ್ಲಿ ಗಾಯಗೊಂಡಿದ್ದೇನೆ. 4-5 ಪಂದ್ಯ ಹೊರತುಪಡಿಸಿ ಪಂಜಾಬ್​ಗಾಗಿ ಆಡಲು ಸಾಧ್ಯವಾಗಿಲ್ಲ. ಚೇತರಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಸದ್ಯ ನಾನು ಗುಣಮುಖನಾಗಿದ್ದೇನೆ. ಆದರೆ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ’ ಎಂದು ಹೇಳಿದ್ದರು.

ಇದನ್ನೂ ಓದಿ: ಬೆಳ್ಳಂಬೆಳಗ್ಗೆಯೇ ಶಾಕ್​ ಕೊಟ್ಟ ಶಿಖರ್​ ಧವನ್.. ದೇಶೀಯ, ಅಂತರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ

ಇನ್ನು  ಶಿಖರ್​ ಧವನ್​ ದೇಶೀಯ ಕ್ರಿಕೆಟ್​ಗೂ ನಿವೃತ್ತಿ ಘೋಷಿಸಿದ್ದರಿಂದ ಈ ಬಾರಿಯಿಂದ ಐಪಿಎಲ್​ನಲ್ಲಿ ಆಡುವುದು ಅನುಮಾನವಾಗಿದೆ.

ಶಿಖರ್​ ಐಪಿಎಲ್​ನಲ್ಲಿ ತಮ್ಮದೇ ಆದ ದಾಖಲೆ ಬರೆದಿದ್ದಾರೆ. ಐಪಿಎಲ್​ ಇತಿಹಾಸದಲ್ಲೇ ಅತಿ ಹೆಚ್ಚು ರನ್​ಗಳಿಸಿದ 2ನೇ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಅವರ ಹೆಸರಲ್ಲಿ 6,700ಕ್ಕೂ ಹೆಚ್ಚು ರನ್​​ ಗಳಿಸಿದ ಖ್ಯಾತಿಯಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಿಖರ್​ ಧವನ್ ಈ ಬಾರಿ​ IPL​ ಆಡ್ತಾರಾ? ಪಂಬಾಜ್​ ಪುತ್ತರ್​ಗೆ ಅಂಥದ್ದೇನಾಯ್ತು?

https://newsfirstlive.com/wp-content/uploads/2024/08/Shikhar-dhawan.jpg

Load More