/newsfirstlive-kannada/media/post_attachments/wp-content/uploads/2024/07/Arjun-Truck-Driver.png)
ಶಿರೂರು ಗುಡ್ಡ ಕುಸಿದು ಇಂದಿಗೆ 15 ದಿನ. ನಾಪತ್ತೆಯಾದ ಕೇರಳ ಮೂಲದ ಲಾರಿ ಚಾಲಕ ಅರ್ಜುನ್​, ಸ್ಥಳೀಯ ಜಗನ್ನಾಥ್​ ಮತ್ತು ಲೋಕೇಶ್​​ ಇನ್ನು ಪತ್ತೆಯಾಗಿಲ್ಲ. ಆದರೆ ನಾಪತ್ತೆಯಾದ ಅರ್ಜುನ್ ಶವ​ ನೀರಿನಿಂದ ತೇಲಿ ನದಿ ನೀರಿನಲ್ಲಿ ಕೊಚ್ಚಿ ಹೋಗಿದೆ ಎಂದು ಉಡುಪಿ ದ್ವಾರಕಾಮಯಿ ಮಠದ ಸಾಯಿಈಶ್ವರ ಸ್ವಾಮೀಜಿ ಹೇಳಿದ್ದಾರೆ.
ಶಿರೂರಿನ ಗುಡ್ಡ ಕುಸಿದ ಸ್ಥಳಕ್ಕೆ ಬಂದ ಸಾಯಿಈಶ್ವರ ಸ್ವಾಮೀಜಿ, ಇಲ್ಲಿ 17 ಶವಗಳು ಇರುವುದಾಗಿ ತಮ್ಮ ದಿವ್ಯದೃಷ್ಟಿಯ ಮೂಲಕ ತಿಳಿಸಿದ್ದಾರೆ. ಮಾತ್ರವಲ್ಲದೆ, ಪೆಂಟೋಲಮ್​ ಮತ್ತು ಎಲೆಕ್ಟ್ರಾನಿಕ್​​ ಸ್ಕ್ಯಾನಿಂಗ್​​ ಬಳಸಿ ಹುಡುಕಾಡಿದ್ದಾರೆ.
/newsfirstlive-kannada/media/post_attachments/wp-content/uploads/2024/07/Arjun-Truck-Driver-1.jpg)
ಇದನ್ನೂ ಓದಿ: 25 ಕಿ.ಮೀ ದೂರದಲ್ಲಿ ಪತ್ತೆಯಾದ ಶವಗಳು.. ಕೇರಳದಲ್ಲಿ ಘೋರ ದುರಂತ; ಪ್ರತ್ಯಕ್ಷದರ್ಶಿ ಹೇಳಿದ್ದೇನು?
ಸ್ವಾಮೀಜಿ ತನ್ನ ದಿವ್ಯ ದೃಷ್ಟಿಯ ಮೂಲಕ ಮಣ್ಣಿನ ಅಡಿಯಲ್ಲಿ 9 ಶವಗಳಿವೆ. 24 ಅಡಿ ಆಳದಲ್ಲಿ ಲಾರಿ ಇದೆ. ಅದರ ಹತ್ತಿರವೇ ಶವವಿದೆ. ನದಿಯಿಂದ 15 ಅಡಿ ಅಳದಲ್ಲಿ ಜಗನ್ನಾಥರ ಶವವಿದೆ ಎಂದು ಸ್ವಾಮೀಜಿ ಹೇಳಿದ್ದಾರೆ.
/newsfirstlive-kannada/media/post_attachments/wp-content/uploads/2024/07/Shirur-9.jpg)
ಶಿರೂರು ಬಳಿಕ ವಯನಾಡಿಗೂ ಆಘಾತ
ಶಿರೂರು ಘಟನೆ ಕಳೆದು 15 ದಿನಗಳ ಬಳಿಕ ಕೇರಳದ ವಯನಾಡಿನಲ್ಲೂ ಭಾರೀ ದೊಡ್ಡ ಪ್ರಮಾಣದ ಭೂಕುಸಿತ ಸಂಭವಿಸಿದೆ. ಸುಮಾರು 70ಕ್ಕೂ ಅಧಿಕ ಜನರು ಈ ಅವಘಡದಲ್ಲಿ ಸಾವನ್ನಪ್ಪಿದ್ದಾರೆ. 100 ಕ್ಕೂ ಹೆಚ್ಚು ಜನ ಮಣ್ಣಿನಡಿಯಲ್ಲಿ ಸಿಲುಕಿದ್ದಾರೆ ಎನ್ನಲಾಗುತ್ತಿದೆ. ಸ್ಥಳದಲ್ಲಿ ಎನ್​ಡಿಆರ್​ಎಫ್​, ಅಗ್ನಿ ಶಾಮಕ ದಳ ಸೇರಿ ಸ್ಥಳೀಯ ತಂಡ ರಕ್ಷಣಾ ಕಾರ್ಯಾಚರಣೆ ಮಾಡುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us