/newsfirstlive-kannada/media/post_attachments/wp-content/uploads/2024/05/Shivajinagar.jpg)
ಬೆಂಗಳೂರು: ಕಾಂಬೋಡಿಯಾದಲ್ಲಿ ಕೂತು ಕೈಚಳಕ ತೋರಿದ್ದ ಸೈಬರ್ ವಂಚಕರಿಗೆ ಬೆಂಗಳೂರು ಸೈಬರ್ ಕ್ರೈಂ ಇನ್​ಸ್ಪೆಕ್ಟರ್ ಶಾಕ್​ ನೀಡಿದ್ದಾರೆ. ಮಹಿಯೊಬ್ಬರ ಖಾತೆಯಿಂದ ಕಳೆದುಕೊಂಡಿರುವ ಬರೋಬ್ಬರಿ 20 ಲಕ್ಷ ಹಣವನ್ನು ಒಂದೇ ದಿನದಲ್ಲಿ ವಾಪಸ್​ ತರಿಸಿಕೊಟ್ಟಿದ್ದಾರೆ.
ಕೊರಿಯರ್ ಹೆಸರಿನಲ್ಲಿ ಮೋಸ ಮಾಡ್ತಾರೆ
ಹಲಸೂರಿನ ಮೇರಿ ಮಧುರಾ ಎಂಬ ಮಹಿಳೆ ಬರೋಬ್ಬರಿ 20 ಲಕ್ಷ ರೂಪಾಯಿ ಕಳೆದುಕೊಂಡಿದ್ದರು. ಕಾಂಬೋಡಿಯಾದಲ್ಲಿ ಕುಳಿತ ಖದೀಮರು ತಮ್ಮ ಕೈಚಳಕದ ಮೂಲಕ ಮಹಿಳೆಗೆ ವಂಚಿಸಿದ್ದರು. ಫೆಡೆಕ್ಸ್ ಕೊರಿಯರ್ ಹೆಸರಿನಲ್ಲಿ ಮಹಿಳೆಗೆ ಕರೆ ಮಾಡಿದ್ದ ಸೈಬರ್ ವಂಚಕರು ಮೋಸ ಮಾಡಿದ್ದರು.
ವಂಚಕರ ಜಾಲ ಭೇದಿಸಿದ ಇನ್​ಸ್ಪೆಕ್ಟರ್ ಮತ್ತು ಕೇಸ್ ವರ್ಕರ್
ಕೊನೆಗೆ ಏನು ತೋಚದ ಮಹಿಳೆ ನೇರವಾಗಿ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ. ಶಿವಾಜಿನಗರ ಸೈಬರ್ ಕ್ರೈಂ ಪೊಲೀಸರನ್ನು ಭೇಟಿ ಮಾಡಿ ತನಗಾದ ವಂಚನೆ ಬಗ್ಗೆ ತಿಳಿಸಿದ್ದಾರೆ. ಆದರೆ ಮಹಿಳೆ ಸಮಸ್ಯೆಯನ್ನು ಆಲಿಸಿದ ಪೊಲೀಸರು ವಂಚಕರ ಜಾಲ ಭೇದಿಸಿದ್ದಾರೆ. ಇನ್​ಸ್ಪೆಕ್ಟರ್ ಉಮೇಶ್ ಕುಮಾರ್ ಹಾಗೂ ಕೇಸ್ ವರ್ಕರ್ ಕಿರಣ್ ಕಾಂಬೋಡಿಯಾದ ಖದೀಮರಿಗೆ ಬಿಸಿ ಮುಟ್ಟಿಸಿ ಹಣವನ್ನು ಮಹಿಳೆಗೆ ಸೇರುವಂತೆ ಮಾಡಿದ್ದಾರೆ. ಪೊಲೀಸರ ಸಹಾಯದಿಂದ ಮಹಿಳೆ ಸಂತಸಗೊಂಡಿದ್ದು, ಅವರ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
[caption id="attachment_66105" align="alignnone" width="800"]
ಕೇಸ್​ ವರ್ಕ್​ ಕಿರಣ್​ ಮತ್ತು ಇನ್​ಸ್ಪೆಕ್ಟರ್​ ಉಮೇಶ್​ ಕುಮಾರ್​[/caption]
ಅಭಿನಂದನಾ ಪತ್ರ ಬರೆದ ಮಹಿಳೆ
ದೂರುದಾರ ಮಹಿಳೆ ಮೇರಿ ಮಧುರಾ ಪೊಲೀಸ್ ಇನ್​ಸ್ಪೆಕ್ಟರ್ ಹಾಗೂ ಸಿಬ್ಬಂದಿಗೆ ಅಭಿನಂದನಾ ಪತ್ರ ಬರೆದು ಶಹಬ್ಬಾಶ್ ಗಿರಿ ಹೇಳಿದ್ದಾರೆ. ಜೊತೆಗೆ ಡಿಸಿಪಿ ಕುಲದೀಪ್ ಜೈನ್ ಹಾಗೂ ಕಮಿಷನರ್ ದಯಾನಂದ್ ರಿಂದಲೂ ಇನ್​ಸ್ಪೆಕ್ಟರ್ ಉಮೇಶ್ ಕುಮಾರ್ ಹಾಗೂ ಕೇಸ್ ವರ್ಕರ್ ಕಿರಣ್​ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
[caption id="attachment_66107" align="alignnone" width="800"]
ಪೊಲೀಸ್ ಇನ್​ಸ್ಪೆಕ್ಟರ್ ಉಮೇಶ್​ ಕುಮಾರ್​ಗೆ ಅಭಿನಂದನಾ ಪತ್ರ ಬರೆದ ಮಹಿಳೆ ಮೇರಿ ಮಧುರಾ[/caption]
ಮಹಿಳೆಗೆ ಸೈಬರ್ ವಂಚನೆ ಆಗಿದ್ದು ಹೇಗೆ?
ಫೆಡೆಕ್ಸ್ ಕೊರಿಯರ್ ಹೆಸರಿನಲ್ಲಿ ಮಹಿಳೆ ಮೇರಿ ಮಧುರಾಗೆ ಕರೆ ಮಾಡಿದ್ದರು. ಕರೆಯನ್ನು ನಂಬಿದ ಮಹಿಳೆ ಅತ್ತ ಕಡೆಯಿಂದ ಮಾತನಾಡುತ್ತಿದ್ದ ವ್ಯಕ್ತಿಯು ಆಧಾರ್ ಕಾರ್ಡ್, ಮೊಬೈಲ್ ನಂಬರ್, ನಿಮ್ಮ ಹೆಸರಿನಲ್ಲಿ ಐದು ಪಾಸ್ ಪೋರ್ಟ್, ನಾಲ್ಕು ಕ್ರೆಡಿಟ್ ಕಾರ್ಡ್, 200 ಗ್ರಾಂ ಮಾದಕವಸ್ತು MDMA ಮುಂಬೈನಿಂದ ತೈವಾನ್ ಗೆ ಅಕ್ರಮವಾಗಿ ವರ್ಗಾವಣೆಯಾಗುತ್ತಿದೆ ಎಂದು ಹೇಳಿದ್ದನ್ನು ನಂಬಿದ್ದರು.
ಎಚ್ಚರ.. ಎಚ್ಚರ!
ಮಾತ್ರವಲ್ಲದೆ, ನಿಮ್ಮ ಮೇಲೆ ಕೇಸ್ ರಿಜಿಸ್ಟರ್ ಆಗಿದೆ, ಮುಂಬೈ ಸೈಬರ್ ಇನ್​ಸ್ಪೆಕ್ಟರ್ ನರೇಶ್ ಗುಪ್ತಾ ಹೆಸರಿನಲ್ಲಿ ಖದೀಮರು ವಾಟ್ಸಾಪ್​ ಕಾಲ್ ಮಾಡಿದ್ದರು. ಜೊತೆಗೆ ನಿಮ್ಮ ಹೆಸರಿನಲ್ಲಿ ಅಕ್ರಮವಾಗಿ ಮನಿ ಲ್ಯಾಂಡರಿಂಗ್ ಆಗ್ತಿದೆ. ನಿಮ್ಮ ಬ್ಯಾಂಕ್ ಖಾತೆಯ ಸೇಫ್ ಗಾರ್ಡ್ ಮಾಡುವುದಕ್ಕಾಗಿ ಅಕೌಂಟ್ ನಲ್ಲಿನ ಎಲ್ಲಾ ಹಣವನ್ನು RBI ಖಾತೆಗೆ ವರ್ಗಾಯಿಸಿ. 20 ನಿಮಿಷಗಳ ಒಳಗಾಗಿ ನಿಮ್ಮ ಹಣವನ್ನು ಹಿಂದಿರುಗಿಸುವುದಾಗಿ ಹೇಳಿದ್ದರು. ಇದನ್ನ ನಂಬಿದ ಮಹಿಳೆ ತನ್ನ ಖಾತೆಯಲ್ಲಿದ್ದ 20 ಲಕ್ಷ ಹಣವನ್ನು ವರ್ಗಾಯಿಸಿಕೊಂಡು ಮೋಸ ಹೋಗಿದ್ದರು. ಮಹಿಳೆಯ ಎಸ್.ಬಿ.ಐ ಬ್ಯಾಂಕ್ ನಿಂದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಕೌಂಟ್​ಗೆ ಹಣ ವರ್ಗಾಯಿಸಿಕೊಂಡಿದ್ದರು.
ಸೈಬರ್ ಜಾಲವನ್ನ ಪೊಲೀಸರು ಭೇದಿಸಿದ್ದು ಹೇಗೆ?
20 ನಿಮಿಷಗಳಾದ್ರು ಹಣ ವಾಪಸ್ ಆಗದಿದ್ದಾಗ ಮಹಿಳೆ ದಿಕ್ಕು ತೋಚದೆ ಸೈಬರ್ ಕ್ರೈಂ ಪೊಲೀಸರನ್ನ ಸಂಪರ್ಕಿಸಿದ್ದಾರೆ. ಕೂಡಲೇ ಸೈಬರ್ ಕಂಟ್ರೋಲ್ ರೂಂ ಸಂಖ್ಯೆ 1930 ದಲ್ಲಿ ದೂರು ದಾಖಲಿಸಿದ್ದಾರೆ. ಕಂಟ್ರೋಲ್ ರೂಂ ಕಂಪ್ಲೆಂಟ್ ಆಧರಿಸಿ ಹಣ ವರ್ಗಾವಣೆಯಾಗಿದ್ದ ಬ್ಯಾಂಕ್ ಗೆ ಕೂಡಲೇ ಇನ್​ಸ್ಪೆಕ್ಟರ್ ಮೇಲ್ ಮಾಡಿದ್ದಾರೆ.
ಮಹಿಳೆಯ ಅಕೌಂಟ್​ಗೆ ಹಣ ವಾಪಸ್​
ಇನ್​ಸ್ಪೆಕ್ಟರ್ ಉಮೇಶ್ ಮೇಲ್ ಆಧರಿಸಿ ಹಣ ವರ್ಗಾವಣೆ ಆಗಿದ್ದ ಅಕೌಂಟ್ ಗಳು ಫ್ರೀಜ್ ಆಗಿದೆ. ಅಕೌಂಟ್ ಮಾನಿಟರಿಂಗ್ ಮೂಲಕ ಮೊದಲು ಹಣ ವರ್ಗಾವಣೆಯಾಗಿದ್ದ ಏಳು ಅಕೌಂಟ್ಸ್, ನಂತರ ಅವುಗಳಿಂದ ವರ್ಗಾವಣೆಯಾಗಿದ್ದ ಒಟ್ಟು ಇಪ್ಪತ್ತೂ ಅಕೌಂಟ್ ಗಳು ಫ್ರೀಜ್ ಆಗಿವೆ. ಹೀಗಾಗಿ ಸೈಬರ್ ಕ್ರೈಂ ಪೊಲೀಸರು ಹಾಗೂ ಬ್ಯಾಂಕ್ ಸಿಬ್ಬಂದಿ ಕಾರ್ಯದಿಂದ ಹಣ ಮತ್ತೆ ಮಹಿಳೆ ಅಕೌಂಟ್ ಗೆ ವಾಪಸ್ ಆಗಿದೆ.
ಸದ್ಯ ಶಿವಾಜಿನಗರ ಸೈಬರ್ ಕ್ರೈಂ ಪೊಲೀಸರು ಎಫ್.ಐ.ಆರ್ ಕೋರ್ಟ್​​ಗೆ ಸಲ್ಲಿಕೆ ಮಾಡಿ ಕೋರ್ಟ್ ಮೂಲಕ ಮಹಿಳೆ ಅಮೌಂಟ್ ರಿಲೀಸ್ ಮಾಡಿಸಿದ್ದಾರೆ. ಕೊನೆಗೂ ತನ್ನ ಹಣ ಖದೀಮರ ಪಾಲಾಗದಂತೆ ತಡೆದ ಪೊಲೀಸರ ಉತ್ತಮ ಕಾರ್ಯಕ್ಕೆ ಮಹಿಳೆ ಅಭಿನಂದನಾ ಪತ್ರ ನೀಡಿ ಧನ್ಯವಾದ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us