ಟೀಮ್ ಇಂಡಿಯಾಕ್ಕೆ ಬಿಗ್ ಶಾಕ್​.. ಆಲ್​ರೌಂಡರ್​ ಇಂಜುರಿ; ಯುವ ಬ್ಯಾಟರ್​ ಎಂಟ್ರಿ, ಯಾರು?

author-image
Bheemappa
Updated On
ಟೀಮ್ ಇಂಡಿಯಾಕ್ಕೆ ಬಿಗ್ ಶಾಕ್​.. ಆಲ್​ರೌಂಡರ್​ ಇಂಜುರಿ; ಯುವ ಬ್ಯಾಟರ್​ ಎಂಟ್ರಿ, ಯಾರು?
Advertisment
  • ಆಲ್​ರೌಂಡರ್ ಗಾಯದಿಂದ ಟೀಮ್ ಇಂಡಿಯಾಕ್ಕೆ ನಷ್ಟ.!
  • ಅಭ್ಯಾಸ ಮಾಡುವಾಗ ಗಾಯಕ್ಕೆ ಒಳಗಾದ ಆಲ್​ರೌಂಡರ್
  • ಯುವ ಬ್ಯಾಟ್ಸ್​​ಮನ್​ ಭಾರತ ತಂಡಕ್ಕೆ ಆಗಮನ, ಯಾರು?

ಭಾರತ ಹಾಗೂ ಬಾಂಗ್ಲಾದೇಶದ ನಡುವೆ ಟಿ20 ಸರಣಿಯ ಮೊದಲ ಪಂದ್ಯ ನಾಳೆ ನಡೆಯಲಿದ್ದು ಈಗಾಗಲೇ 2 ಕಡೆಯ ಆಟಗಾರರು ಕಠಿಣ ಅಭ್ಯಾಸ ಮಾಡಿದ್ದಾರೆ. ಟೆಸ್ಟ್​ ಸರಣಿಯಲ್ಲಿ ಮುಖಭಂಗ ಅನುಭವಿಸಿರುವ ಬಾಂಗ್ಲಾ ಟಿ20 ಗೆಲ್ಲಲು ಸಾಕಷ್ಟು ರಣತಂತ್ರ ರೂಪಿಸಿದೆ. ಅಲ್ಲದೇ ತವರಿನಲ್ಲಿ ಟೀಮ್ ಇಂಡಿಯಾವನ್ನು ಸೋಲಿಸುವುದು ಕಷ್ಟದ ಕೆಲಸ. ಆದರೆ ಭಾರತ ತಂಡದ ಆಲ್​ರೌಂಡರ್ ಗಾಯಕ್ಕೆ ತುತ್ತಾಗಿದ್ದು ಯುವ ಲೆಫ್ಟಿ ಬ್ಯಾಟರ್ ತಂಡಕ್ಕೆ ಆಗಮನವಾಗಿದೆ.

publive-image

ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ಟ್ವಿ20 ಸರಣಿಯ ಮೊದಲ ಪಂದ್ಯ ನಡೆಯಲಿದ್ದು ಈಗಾಗಲೇ ಭಾರತದ ಪ್ಲೇಯರ್ಸ್​ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಮೈದಾನದಲ್ಲಿ ಪ್ರಾಕ್ಟೀಸ್ ಮಾಡುವಾಗ ಆಲ್​ರೌಂಡರ್ ಶಿವಂ ದುಬೆ ಗಾಯಕ್ಕೆ ಒಳಗಾಗಿದ್ದಾರೆ. ಗ್ರೌಂಡ್​ನಲ್ಲಿ ಅಭ್ಯಾಸ ಮಾಡುವಾಗ ಬೆನ್ನಿನ ನೋವಿಗೆ ಒಳಗಾಗಿದ್ದು ಇಡೀ ಬಾಂಗ್ಲಾ ವಿರುದ್ಧದ ಸರಣಿಯಿಂದಲೇ ಹೊರಗುಳಿಯಲಿದ್ದಾರೆ ಎನ್ನಲಾಗಿದೆ. 2024 ಟಿ20 ವಿಶ್ವಕಪ್​ ತಂಡದಲ್ಲಿದ್ದ ದುಬೆ ಸದ್ಯ ಗಾಯಗೊಂಡಿದ್ದರಿಂದ ಯಂಗ್ ಪ್ಲೇಯರ್ ಮುಂಬೈಕರ್ ತಿಲಕ್ ವರ್ಮಾ ತಂಡಕ್ಕೆ ಮರಳಲಿದ್ದಾರೆ ಎಂದು ಬಿಸಿಸಿಐ ಮಾಹಿತಿ ನೀಡಿದೆ.

ಇದನ್ನೂ ಓದಿ: Ind vs Ban; ಅಶ್ವಿನ್​ ಮತ್ತೊಂದು ದಾಖಲೆ.. ಟೀಮ್ ಇಂಡಿಯಾ ಗೆಲ್ಲಲು ಏನ್ ಮಾಡಬೇಕು?

ಐಪಿಎಲ್‌ನಲ್ಲಿ ಈಗಾಗಲೇ ಹೆಸರು ಮಾಡಿರುವ ತಿಲಕ್ ವರ್ಮಾ, ಮಧ್ಯಮ ಕ್ರಮಾಂಕದಲ್ಲಿ ಪ್ರಭಾವ ಬೀರುವ ರನ್ ತಂದುಕೊಡುವ ಲೆಫ್ಟ್​ಹ್ಯಾಂಡ್ ಬ್ಯಾಟರ್​ ಆಗಿದ್ದಾರೆ. ಅಲ್ಲದೇ ಬೌಂಡರಿ, ಸಿಕ್ಸರ್​ಗಳನ್ನ ಆರಾಮವಾಗಿಯೇ ಬಾರಿಸುವ ಯಂಗ್ ಪ್ಲೇಯರ್. ಇನ್ನು ತಿಲಕ್ ವರ್ಮಾ 2023ರಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. 16 ಟಿ20 ಪಂದ್ಯಗಲನ್ನು ಆಡಿದ್ದು ಬ್ಯಾಟಿಂಗ್, ಫೀಲ್ಡಿಂಗ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಇನ್ನು ಬಾಂಗ್ಲಾ ವಿರುದ್ಧವೂ ತಿಲಕ್ ವರ್ಮಾ ಉತ್ತಮ ಬ್ಯಾಟಿಂಗ್ ಮಾಡುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ.


">October 5, 2024

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment