newsfirstkannada.com

×

ಜನರನ್ನು ಬೆಂಬಿಡದೆ ಕಾಡ್ತಿರೋ ಮಹಾಮಾರಿ.. ಡೆಂಘೀ ಬಂದ್ರೆ ಏನು ಮಾಡಬೇಕು ಎಂದು ಓದಿ!

Share :

Published June 29, 2024 at 9:07pm

    ವರ್ಷದಿಂದ ವರ್ಷಕ್ಕೆ ಸಿಲಿಕಾನ್ ಸಿಟಿಯಲ್ಲಿ ಏರಿಕೆಯಾಗ್ತಿದೆ ಡೆಂಘೀ ಕೇಸ್​​

    ಡೆಂಘೀ ಮಣಿಸಲು ಜನರು ಕೆಲವೊಂದು ಮುಂಜಾಗೃತ ಕ್ರಮ ಕೈಗೊಳ್ಳಬೇಕು

    ಡೆಂಘೀಯಿಂದ ಪಾರಾಗಬೇಕಾದ್ರೆ ನೀವು ಏನು ಮಾಡಬೇಕು ಈ ಸ್ಟೋರಿ ಓದಿ

ಬೆಂಗಳೂರಿನಲ್ಲಿ ಸದ್ದಿಲ್ಲದೆ ಡೆಂಘೀ ಸವಾರಿ ಹೊರಟಿದೆ. ಗಲ್ಲಿ-ಗಲ್ಲಿಯಲ್ಲೂ ದಂಡಯಾತ್ರೆ ಹೊರಟಿರುವ ಮಾರಿ ಇದಾಗಿದೆ. ಒಂದೇ ದಿನದಲ್ಲಿ ಇಬ್ಬರನ್ನ ಬಲಿ ಪಡೆದುಕೊಂಡಿದೆ. ಇದರ ನಡುವೆ ಡೆಂಘೀ ಕೇಸ್ ಏರಿಕೆಯಾಗ್ತಿದ್ದಂತೆ ಆಸ್ಪತ್ರೆ ಸೇರುತ್ತಿರುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ರೋಗಿಗಳ ಸಂಖ್ಯೆ ಏರಿಕೆಯಾಗುತ್ತಿದ್ದಂತೆ ಬ್ಲಡ್ ಬ್ಯಾಂಕ್​ಗಳಲ್ಲಿ ಪ್ಲೇಟ್ಲೆಟ್​ಗಳಿಗೆ ಡಿಮ್ಯಾಂಡ್ ಶುರುವಾಗಿದೆ.

ಇದನ್ನೂ ಓದಿ: ನೀರಿನ ಟ್ಯಾಂಕ್ ಏರಿ ಆತ್ಮಹತ್ಯೆಗೆ ಯತ್ನಿಸಿದ ಯುವಕ; ಅಸಲಿಗೆ ಆಗಿದ್ದೇನು?

ಮುಂಗಾರು ಆರಂಭವಾಗ್ತಿದ್ದಂತೆ ಮಹಾಮಾರಿ ಡೆಂಘೀ ಅಬ್ಬರ ಜೋರಾಗಿದೆ. ಡೆವಿಲ್ ಡೆಂಘೀ ಆರ್ಭಟಕ್ಕೆ ಸಿಲಿಕಾನ್ ಸಿಟಿ ಮಂದಿ ಕಂಗಾಲಾಗಿದ್ದಾರೆ. ಆಸ್ಪತ್ರೆ ಕದ ತಟ್ಟುವರ ಸಂಖ್ಯೆ ಏರಿಕೆಯಾಗಿ ಬಿಬಿಎಂಪಿ ಎದೆಬಡಿತ ಹೆಚ್ಚಿಸಿದೆ. ಡೆಂಘೀ ಕೇಸ್ ಏರಿಕೆ ಬೆನ್ನಲ್ಲೇ ಪ್ಲೇಟ್‌ಲೆಟ್ಸ್‌ಗಳಿಗೆ ಫುಲ್ ಡಿಮ್ಯಾಂಡ್ ಶುರುವಾಗಿದ್ದು,‌ ಕೊರತೆ ಎದುರಾಗಿದೆ. ಯಾವುದಾದರೂ ವ್ಯಕ್ತಿಗೆ ಡೆಂಘೀ ಬಂದರೆ ನೇರವಾಗಿ ಆ ವ್ಯಕ್ತಿಯ ದೇಹದ ರಕ್ತದಲ್ಲಿನ ಪ್ಲೇಟ್ಲೆಟ್ ಹಾಗೂ ಬಿಳಿ ರಕ್ತ ಕಣಗಳನ್ನು ಕಡಿಮೆ ಮಾಡುತ್ತದೆ. ಡೆಂಘೀಯಿಂದ ಪಾರಾಗಬೇಕಾದ್ರೆ, ನಮ್ಮ ದೇಹದ ರೋಗ ನಿರೋಧಕ ಶಕ್ತಿಯ ಸ್ವರೂಪವಾಗಿರುವ ಬಿಳಿ ರಕ್ತ ಕಣಗಳು ಮತ್ತು ಪ್ಲೇಟ್ ಲೆಟ್​ಗಳ ಸಂಖ್ಯೆಯನ್ನು ಹೆಚ್ಚು ಮಾಡಿಕೊಳ್ಳಬೇಕು. ಹೀಗಾಗಿ ಡೆಂಘೀ ಪ್ರಕರಣ ಹೆಚ್ಚಾದ ಬೆನ್ನಲ್ಲೇ ಪ್ಲೇಟ್ ಲೆಟ್​ಗಳಿಗೆ ಡಿಮ್ಯಾಂಡ್ ಹೆಚ್ಚಾಗಿದೆ.

ಕಳೆದ ತಿಂಗಳು ಪ್ರತಿ ಬ್ಲಡ್ ಬ್ಯಾಂಕ್​ನಲ್ಲಿ ವಾರಕ್ಕೆ 5-10 ಪ್ಲೇಟ್ ಲೆಟ್ಸ್ ಬೇಡಿಕೆಯಿತ್ತು, ಬಟ್ ಈಗ 50-60 ಯುನಿಟ್ ನಷ್ಟು ರ್ಯಾಂಡಮ್ ಡೋನರ್ ಪ್ಲೇಟ್ಲೆಟ್ಸ್​ಗಳಿಗೆ ಬೇಡಿಕೆ ಬರ್ತಿದೆ. ಹೀಗಾಗಿ ಪ್ಲೇಟ್‌ಲೆಟ್ ಕೊರತೆ ನೀಗಿಸಲು ಹಲವು ಕಡೆ ರಕ್ತದಾನ ಶಿಬಿರಗಳನ್ನು ಆಯೋಜನೆ ಮಾಡಲಾಗ್ತಿದೆ. ಇನ್ನು, 2023ರಲ್ಲಿ ಜನವರಿಯಿಂದ ಜೂನ್ ವರೆಗೆ 732 ಪ್ರಕರಣ ವರದಿಯಾಗಿದ್ವು. ಆದರೆ ಈ ಬಾರಿ ರಾಜ್ಯ ವ್ಯಾಪ್ತಿ 4266 ಕೇಸ್ ದಾಖಲಾಗಿ ಆತಂಕ ಹುಟ್ಟಿಸಿದೆ. ಬಿಬಿಎಂಪಿಯೂ ಅಲರ್ಟ್​ ಆಗಿ ಡೆಂಘೀ ವಿರುದ್ಧ ಸಮರ ಶುರು ಮಾಡಿದೆ. ಒಟ್ಟಿನಲ್ಲಿ ಶರವೇಗದಲ್ಲಿ ಓಡುತ್ತಿರುವ ಡೆಂಘೀ ಆರ್ಭಟಕ್ಕೆ ಬ್ರೇಕ್ ಹಾಕಲೇಬೇಕಾದ ಅನಿವಾರ್ಯತೆ ಸಿಲಿಕಾನ್ ಸಿಟಿಯಲ್ಲಿದೆ. ಸ್ವಚ್ಛತೆಯ ಜೊತೆಗೆ ಮುಂಜಾಗ್ರತಾ ಕ್ರಮವನ್ನು ಸಿಟಿ ಮಂದಿ ಕೈಗೊಳ್ಳಬೇಕಿರುವುದು ಅಗತ್ಯವಾಗಿದೆ.

ವಲಯಗಳು        ಪರೀಕ್ಷೆ     ಡೆಂಘೀ ಧೃಡ
ಬೊಮ್ಮನಹಳ್ಳಿ      374         138
ದಾಸರಹಳ್ಳಿ           329         8
ಪೂರ್ವ                 2091      398
ಮಹದೇವಪುರ    866         435
RR ನಗರ             181           97
ದಕ್ಷಿಣ                 1993        230
ಪಶ್ಚಿಮ               734         120
ಯಲಹಂಕ           336        104
ಒಟ್ಟು                 6904       1530

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜನರನ್ನು ಬೆಂಬಿಡದೆ ಕಾಡ್ತಿರೋ ಮಹಾಮಾರಿ.. ಡೆಂಘೀ ಬಂದ್ರೆ ಏನು ಮಾಡಬೇಕು ಎಂದು ಓದಿ!

https://newsfirstlive.com/wp-content/uploads/2024/06/dengue.jpg

Load More