newsfirstkannada.com

ಪರಾರಿಯಾಗಿರುವ ಪ್ರಜ್ವಲ್ ರೇವಣ್ಣಗೆ ಶಾಕಿಂಗ್ ನ್ಯೂಸ್‌.. ಈ ವಾರದ ಒಳಗೆ ಪಾಸ್‌ಪೋರ್ಟ್‌ ರದ್ದು?

Share :

Published May 24, 2024 at 4:12pm

    ವಿದೇಶಾಂಗ ಇಲಾಖೆಯಿಂದ ಪಾಸ್‌ಪೋರ್ಟ್‌ ರದ್ದು ಮಾಡುವ ಪ್ರಕ್ರಿಯೆ ಶುರು

    ಭಾರತದಲ್ಲಿ ಒಬ್ಬ ವ್ಯಕ್ತಿ ಬಳಿ ಎರಡೆರಡು ಪಾಸ್ ಪೋರ್ಟ್ ಇರಲು ಸಾಧ್ಯವಿಲ್ಲ

    1967 ಸೆಕ್ಷನ್ 10(3)ರ ಪಾಸ್​ಪೋರ್ಟ್ ಆ್ಯಕ್ಟ್ ಅಡಿ ಪಾಸ್‌ಪೋರ್ಟ್‌ ರದ್ದು

ಬೆಂಗಳೂರು: ಹಾಸನದಲ್ಲಿ ಅಶ್ಲೀಲ ವಿಡಿಯೋ ವೈರಲ್ ಹಾಗೂ ಸೆಕ್ಸ್ ಸ್ಕ್ಯಾಂಡಲ್ ಪ್ರಕರಣದಲ್ಲಿ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಆರೋಪಿಯಾಗಿದ್ದಾರೆ. ದೇಶ ಬಿಟ್ಟು ಹೋಗಿರುವ ಪ್ರಜ್ವಲ್ ರೇವಣ್ಣ ಅವರನ್ನು ಅರೆಸ್ಟ್ ಮಾಡಲು SIT ಪೊಲೀಸರು ಕಾದು ಕುಳಿತಿದ್ದಾರೆ. ಎಲ್ಲಾ ಆಯಾಮಗಳಲ್ಲೂ SIT ತನಿಖೆ ನಡೆಯುತ್ತಿರುವಾಗಲೇ ಕೇಂದ್ರ ವಿದೇಶಾಂಗ ಇಲಾಖೆ ಪ್ರಜ್ವಲ್ ರೇವಣ್ಣ ಅವರಿಗೆ ಬಿಸಿ ಮುಟ್ಟಿಸಿದೆ.

ಇದನ್ನೂ ಓದಿ: ನನ್ನ ಎಚ್ಚರಿಕೆಗೂ ತಲೆಬಾಗದಿದ್ದರೆ ಅಷ್ಟೇ.. ಮೊಮ್ಮಗನಿಗೆ H.D ದೇವೇಗೌಡರಿಂದ ಬಹಿರಂಗ ಪತ್ರ; ಹೇಳಿದ್ದೇನು? 

ಪ್ರಜ್ವಲ್ ರೇವಣ್ಣಗೆ ವಿದೇಶಾಂಗ ಇಲಾಖೆಯಿಂದ ಇಂದು ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಪ್ರಜ್ವಲ್ ರೇವಣ್ಣ ಅವರ ಪಾಸ್‌ಪೋರ್ಟ್‌ ರದ್ದು ಮಾಡುವಂತೆ ಎಸ್‌ಐಟಿ ಪತ್ರ ಬರೆದಿತ್ತು. ಸಿಎಂ ಸಿದ್ದರಾಮಯ್ಯ ಕೂಡ ಕೇಂದ್ರ ಸರ್ಕಾರಕ್ಕೆ ಪ್ರಜ್ವಲ್ ರೇವಣ್ಣ ಪಾಸ್‌ಪೋರ್ಟ್ ರದ್ದು ಕೋರಿ ಪತ್ರ ಬರೆದಿದ್ದರು. ಈ ಬೆಳವಣಿಗೆಯ ಬೆನ್ನಲ್ಲೇ ಉತ್ತರ ಕೇಳಿ ವಿದೇಶಾಂಗ ಇಲಾಖೆಯಿಂದ ಶೋಕಾಸ್ ನೋಟಿಸ್ ನೀಡಲಾಗಿದೆ.

ವಾರದೊಳಗೆ ರದ್ದಾಗುತ್ತಾ ಪಾಸ್​ಪೋರ್ಟ್​?
ಆರೋಪ ಸ್ಥಾನದಲ್ಲಿರುವ ಸಂಸದ ಪ್ರಜ್ವಲ್ ರೇವಣ್ಣ ಅವರ ಪಾಸ್‌ಪೋರ್ಟ್ ರದ್ದು ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಪಾಸ್‌ಪೋರ್ಟ್‌ ರದ್ದು ಮಾಡಲು ಅಗತ್ಯವಾದ ದಾಖಲೆಗಳನ್ನು ಎಸ್​ಐಟಿ ಟೀಮ್ ಒದಗಿಸಿತ್ತು. ಈ ಪತ್ರ ಆಧರಿಸಿ ವಿದೇಶಾಂಗ ಇಲಾಖೆ ಸದ್ಯ ಪಾಸ್‌ಪೋರ್ಟ್‌ ರದ್ದು ಮಾಡುವ ಪ್ರಕ್ರಿಯೆ ಶುರು ಮಾಡಿದೆ. ಕೇಂದ್ರ ಗೃಹ ಇಲಾಖೆ ಮಾಹಿತಿಯನ್ನು ದೃಢಪಡಿಸಿಕೊಂಡು ಪಾಸ್​ಪೋರ್ಟ್ ಆ್ಯಕ್ಟ್​​​ ಸೆಕ್ಷನ್ 10 (3)ರಡಿ ಪಾಸ್‌ಪೋರ್ಟ್‌ ರದ್ದುಗೊಳಿಸಲು ಸಿದ್ಧತೆ ನಡೆಸಿದೆ.

ಇದನ್ನೂ ಓದಿ: ಪತ್ರ ಬರೆದು ಪ್ರಜ್ವಲ್ ರೇವಣ್ಣಗೆ ವಾರ್ನಿಂಗ್ ಕೊಟ್ಟ ದೇವೇಗೌಡ.. ಸಿಎಂ ಸಿದ್ದರಾಮಯ್ಯ ಲೇವಡಿ.. ಹೇಳಿದ್ದೇನು? 

ಪಾಸ್​ಪೋರ್ಟ್ ರದ್ದು​ ಪ್ರಕ್ರಿಯೆ ಹೇಗೆ?
1967 ಸೆಕ್ಷನ್ 10(3)ರ ಪಾಸ್​ಪೋರ್ಟ್ ಆ್ಯಕ್ಟ್ ಅಡಿ ಪಾಸ್‌ಪೋರ್ಟ್‌ ರದ್ದು ಮಾಡುವ ಅವಕಾಶವಿದೆ. ಒಬ್ಬ ವ್ಯಕ್ತಿ ಮೇಲೆ ಕ್ರಿಮಿನಲ್ ಕೇಸ್ ಇದ್ರೆ ಈ ಕಾನೂನಿನ ಅಡಿ ಪಾಸ್‌ಪೋರ್ಟ್‌ ರದ್ದು ಮಾಡಬಹುದು. ಒಬ್ಬ ವ್ಯಕ್ತಿಯ ಬಳಿ ಎರಡು ಪಾಸ್ ಪೋರ್ಟ್ ಇರಲು ಸಾಧ್ಯವಿಲ್ಲ.

ಸಂಸದರಾದಾಗ ರೆಗ್ಯೂಲರ್ ಪಾಸ್​ಪೋರ್ಟ್ ಪಡೆದುಕೊಳ್ಳಲಾಗುತ್ತೆ. ಅದರ ಬದಲು ರಾಜತಾಂತ್ರಿಕ ಪಾಸ್‌ಪೋರ್ಟ್ ನೀಡಲಾಗುತ್ತೆ. ಸಂಸದ ಸ್ಥಾನದಿಂದ ಕೆಳಗಿಳಿದ್ರೆ ರಾಜತಾಂತ್ರಿಕ ಪಾಸ್​ಪೋರ್ಟ್ ಸರೆಂಡರ್ ಮಾಡಬೇಕು. ಆಗ ರೆಗ್ಯೂಲರ್ ಪಾಸ್‌ಪೋರ್ಟ್ ಅನ್ನು ಮತ್ತೆ ಪಡೆಯಲು ಅವಕಾಶವಿದೆ. ಹೀಗಾಗಿ ಎರಡು ಪಾಸ್ ಪೋರ್ಟ್ ಒಬ್ಬ ವ್ಯಕ್ತಿ ಬಳಸಲು ಸಾಧ್ಯವಿಲ್ಲ. ಇನ್ನೊಂದು ವಾರದೊಳಗೆ ಸೆಕ್ಷನ್ 10(3) ಅಡಿಯಲ್ಲಿ ಪ್ರಜ್ವಲ್ ರೇವಣ್ಣ ಅವರ ಪಾಸ್‌ಪೋರ್ಟ್‌ ರದ್ದಿಗೆ ಅವಕಾಶವಿದೆ.

1967ರ ಪಾಸ್​ಪೋರ್ಟ್​ ಆ್ಯಕ್ಟ್​ನಲ್ಲೇನಿದೆ?

ಸೆಕ್ಷನ್ 10(1) – ದೇಶದ ಆಂತರಿಕ ಭದ್ರತೆ, ಸಾರ್ವಭೌಮತ್ವಕ್ಕೆ ಧಕ್ಕೆಯಾದ್ರೆ ಕ್ಯಾನ್ಸಲ್
ಸೆಕ್ಷನ್ 10(2) – 2 ದೇಶಗಳ ಸಂಬಂಧ ಹಾಳಾಗಬಾರದೆಂದು ಪಾಸ್​ಪೋರ್ಟ್​ ರದ್ದು
ಸೆಕ್ಷನ್ 10(3) – ಒಬ್ಬ ವ್ಯಕ್ತಿ ಮೇಲೆ ಕ್ರಿಮಿನಲ್ ಕೇಸ್ ದಾಖಲಾದ್ರೆ ಪಾಸ್​ಪೋರ್ಟ್ ರದ್ದು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪರಾರಿಯಾಗಿರುವ ಪ್ರಜ್ವಲ್ ರೇವಣ್ಣಗೆ ಶಾಕಿಂಗ್ ನ್ಯೂಸ್‌.. ಈ ವಾರದ ಒಳಗೆ ಪಾಸ್‌ಪೋರ್ಟ್‌ ರದ್ದು?

https://newsfirstlive.com/wp-content/uploads/2024/04/Prajwal-Revanna-1-1.jpg

Load More