ಕುಗ್ಗದ ಸ್ಮೃತಿ, ಗೆದ್ದ ಆರ್‌ಸಿಬಿ ಎಂದ ಶ್ರೇಯಾಂಕ; ವೈಯಕ್ತಿಕ ನೋವಿನ ನಡ್ವೆಯೂ ಕಪ್ ಗೆದ್ದ ಮಂದಾನ!

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮಹಿಳಾ ತಂಡವು ಐತಿಹಾಸಿಕ 2ನೇ ಬಾರಿಗೆ ಮಹಿಳಾ ಪ್ರೀಮಿಯರ್ ಲೀಗ್ (WPL) ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಈ ಸಂಭ್ರಮದ ನಡುವೆ ಆಲ್‌ರೌಂಡರ್ ಶ್ರೇಯಾಂಕಾ ಪಾಟೀಲ್ ಅವರು ನಾಯಕಿ ಸ್ಮೃತಿ ಮಂದಾನ ಬಗ್ಗೆ ಆಡಿದ ಮಾತುಗಳು ಇದೀಗ ಅಭಿಮಾನಿಗಳ ಮನಗೆದ್ದಿವೆ.

author-image
Ganesh Kerekuli
smriti mandana (6)
Advertisment

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮಹಿಳಾ ತಂಡವು ಐತಿಹಾಸಿಕ 2ನೇ ಬಾರಿಗೆ ಮಹಿಳಾ ಪ್ರೀಮಿಯರ್ ಲೀಗ್ (WPL) ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಈ ಸಂಭ್ರಮದ ನಡುವೆ ಆಲ್‌ರೌಂಡರ್ ಶ್ರೇಯಾಂಕಾ ಪಾಟೀಲ್ ಅವರು ನಾಯಕಿ ಸ್ಮೃತಿ ಮಂದಾನ ಬಗ್ಗೆ ಆಡಿದ ಮಾತುಗಳು ಇದೀಗ ಅಭಿಮಾನಿಗಳ ಮನಗೆದ್ದಿವೆ.

ಪಂದ್ಯದ ಬಳಿಕ ಮಾತನಾಡಿದ ಶ್ರೇಯಾಂಕಾ, ನಾಯಕಿ ಸ್ಮೃತಿ ಮಂದಾನ ಇತ್ತೀಚೆಗೆ ತಮ್ಮ ವೈಯಕ್ತಿಕ ಜೀವನದಲ್ಲಿ ಕಠಿಣ ಸಮಯವನ್ನು ಎದುರಿಸಿದ್ದರು. ಅದೆಲ್ಲವನ್ನೂ ಬದಿಗಿಟ್ಟು, ತಂಡವನ್ನು ಮುನ್ನಡೆಸಿದ ರೀತಿ ಮತ್ತು ಅವರು ತೋರಿದ ಸ್ಥೈರ್ಯ ಅದ್ಭುತ. ಈ ಗೆಲುವನ್ನು ನಾವು ಅವರಿಗೆ ಸಮರ್ಪಿಸುತ್ತೇವೆ ಎಂದು ಭಾವುಕವಾಗಿ ನುಡಿದಿದ್ದಾರೆ.

ಇದನ್ನೂ ಓದಿ: ಮತ್ತೆ ಚಾಂಪಿಯನ್ ಗಳಾದ ಸ್ಮೃತಿ ಮಂಧಾನ ತಂಡಕ್ಕೆ ವಿರಾಟ್ ಕೊಹ್ಲಿಯಿಂದ ಅಭಿನಂದನೆ : ಗೆಲುವಿಗೆ ಕೊಹ್ಲಿ ಹೇಳಿದ್ದೇನು?

ಫೈನಲ್ ಪಂದ್ಯದಲ್ಲಿ ಸ್ಮೃತಿ ಅಬ್ಬರ

ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಆಟಗಾರ್ತಿಯರು ಅಬ್ಬರಿಸಿದ್ದಾರೆ. ಕಠಿಣ ಗುರಿಯನ್ನು ಬೆನ್ನತ್ತಿದ ಆರ್‌ಸಿಬಿ ಪರ ನಾಯಕಿ ಸ್ಮೃತಿ ಮಂದಾನ 87 ರನ್ ಬಾರಿಸಿದರೆ, ಜಾರ್ಜಿಯಾ ವೋಲ್ 79 ರನ್ ಸಿಡಿಸಿ ತಂಡಕ್ಕೆ ಜಯ ತಂದಿತ್ತರು. ಆರ್‌ಸಿಬಿಯನ್ನು ಅತ್ಯಂತ ಸ್ಥಿರ ತಂಡವನ್ನಾಗಿ ರೂಪಿಸುವಲ್ಲಿ ಸ್ಮೃತಿ ಪಾತ್ರ ದೊಡ್ಡದು ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ತಂಡದ ಮುಖ್ಯ ಕೋಚ್ ಮಾಲೋಲನ್ ರಂಗರಾಜನ್ ಅವರ ಬಗ್ಗೆಯೂ ಶ್ರೇಯಾಂಕಾ ಮೆಚ್ಚುಗೆ ವ್ಯಕ್ತಪಡಿಸಿದ್ದು, ‘ಇದು ಮುಖ್ಯ ಕೋಚ್ ಆಗಿ ಅವರಿಗೆ ಮೊದಲ ಸೀಸನ್, ಅವರ ಮಾರ್ಗದರ್ಶನದಲ್ಲಿ ಈ ಗೆಲುವು ನಮಗೆಲ್ಲರಿಗೂ ವಿಶೇಷವಾಗಿದೆ’ ಎಂದಿದ್ದಾರೆ.

ಇದನ್ನೂ ಓದಿ: ರೀಲ್ಸ್ ರಾಣಿಗೆ ಕಲಾಕಾರ ಕಮಲಾಕರ್ ರಾಜಾತಿಥ್ಯ; ಎರಡೆರಡು ಕಾರು, ಬುಲೆಟ್ ಬೈಕ್ ಗಿಫ್ಟ್..! Photos

smriti mandana (4)

ಮೈದಾನದಲ್ಲಿ ಕಪ್ ಎತ್ತಿ ಹಿಡಿದು ನಗುತ್ತಿರುವ ಸ್ಮೃತಿ ಮಂದಾನ, ಕಳೆದ ಕೆಲವು ತಿಂಗಳುಗಳಿಂದ ವೈಯಕ್ತಿಕವಾಗಿ ಸಾಕಷ್ಟು ನೋವು ಅನುಭವಿಸಿದ್ದರು. ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಜೊತೆಗಿನ ಅವರ ಮದುವೆ ರದ್ದಾಗಿದ್ದು ಅವರ ಜೀವನದಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿತ್ತು.

ನವೆಂಬರ್ 23, 2025 ರಂದು ಸಾಂಗ್ಲಿಯಲ್ಲಿ ನಡೆಯಬೇಕಿದ್ದ ಮದುವೆ, ಅಂದೇ ಸ್ಮೃತಿ ಅವರ ತಂದೆಗೆ ಆದ ಹಠಾತ್ ಆರೋಗ್ಯ ಸಮಸ್ಯೆಯಿಂದ ಮುಂದೂಡಲ್ಪಟ್ಟಿತ್ತು. ಬಳಿಕ ಪಲಾಶ್ ಕೂಡ ತೀವ್ರ ಒತ್ತಡದಿಂದ ಆಸ್ಪತ್ರೆ ಸೇರಿದ್ದರು. ಅಂತಿಮವಾಗಿ ಡಿಸೆಂಬರ್ 7 ರಂದು ಈ ಮದುವೆ ಮುರಿದು ಬಿದ್ದಿದೆ ಎಂದು ಸ್ವತಃ ಸ್ಮೃತಿ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಪಷ್ಟಪಡಿಸಿದ್ದರು.

ಕುಗ್ಗದ ಸ್ಮೃತಿ, ಗೆದ್ದ ಆರ್‌ಸಿಬಿ

ಮದುವೆ ಮುರಿದು ಬಿದ್ದ ಸಂದರ್ಭದಲ್ಲಿ ಹಬ್ಬಿದ ನಾನಾ ವದಂತಿಗಳು, ಟೀಕೆಗಳ ನಡುವೆಯೂ ಸ್ಮೃತಿ ಮೌನವಾಗಿದ್ದರು. ಅವರ ಕಷ್ಟಕಾಲದಲ್ಲಿ ಗೆಳತಿ ಜೆಮಿಮಾ ರಾಡ್ರಿಗ್ಸ್ ಬಿಗ್ ಬ್ಯಾಷ್ ಲೀಗ್ (WBBL) ಬಿಟ್ಟು ಬೆಂಬಲಕ್ಕೆ ನಿಂತಿದ್ದರು. ಇಷ್ಟೆಲ್ಲಾ ಮಾನಸಿಕ ಒತ್ತಡದ ನಡುವೆಯೂ, ಮೈದಾನದಲ್ಲಿ ನಾಯಕಿಯಾಗಿ ಮತ್ತು ಆಟಗಾರ್ತಿಯಾಗಿ ಸ್ಮೃತಿ ತೋರಿದ ಪ್ರದರ್ಶನ ನಿಜಕ್ಕೂ ಸ್ಫೂರ್ತಿದಾಯಕ. ವೈಯಕ್ತಿಕ ನೋವನ್ನು ಮೆಟ್ಟಿ ನಿಂತು ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಅವರ ಸಾಧನೆಗೆ ಕ್ರಿಕೆಟ್ ಜಗತ್ತು ಸೆಲ್ಯೂಟ್ ಹೊಡೆಯುತ್ತಿದೆ.

ಇದನ್ನೂ ಓದಿ:ಮತ್ತೆ ಚಾಂಪಿಯನ್ ಗಳಾದ ಸ್ಮೃತಿ ಮಂಧಾನ ತಂಡಕ್ಕೆ ವಿರಾಟ್ ಕೊಹ್ಲಿಯಿಂದ ಅಭಿನಂದನೆ : ಗೆಲುವಿಗೆ ಕೊಹ್ಲಿ ಹೇಳಿದ್ದೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

smriti mandhana
Advertisment