/newsfirstlive-kannada/media/post_attachments/wp-content/uploads/2023/11/Kohli_Shreyas.jpg)
ಬಿಸಿಸಿಐ ಸದ್ಯದಲ್ಲೇ ನೂತನ ಟೀಮ್ ಇಂಡಿಯಾ ಮುಖ್ಯ ಕೋಚ್ ಅನೌನ್ಸ್ ಮಾಡಲಿದೆ. ರಾಹುಲ್ ದ್ರಾವಿಡ್ ನಂತರ ಗೌತಮ್ ಗಂಭೀರ್ ಮುಖ್ಯ ಕೋಚ್ ಆಗಿ ನೇಮಕವಾಗುವುದು ಬಹುತೇಕ ಖಚಿತವಾಗಿದೆ.
ಇನ್ನು, ಮುಂದಿನ 3 ವರ್ಷಗಳ ಕಾಲ 2027ರ ಏಕದಿನ ವಿಶ್ವಕಪ್ವರೆಗೆ ಗೌತಮ್ ಗಂಭೀರ್ ಟೀಮ್ ಇಂಡಿಯಾ ಮುಖ್ಯ ಕೋಚ್ ಆಗಿರಲಿದ್ದಾರೆ. ಮುಂದೆ ಎದುರಾಗಲಿರೋ 2026ರ ಟಿ20 ವಿಶ್ವಕಪ್ ಮತ್ತು 2027ರ ಏಕದಿನ ವಿಶ್ವಕಪ್ ಟೂರ್ನಿಗೆ ಟೀಮ್ ಇಂಡಿಯಾಗೆ ಹೊಸ ಕ್ಯಾಪ್ಟನ್ ರೆಡಿ ಮಾಡೋ ಜವಾಬ್ದಾರಿ ಗೌತಮ್ ಗಂಭೀರ್ ಮೇಲಿದೆ. ಗಂಭೀರ್ಗೆ ಶ್ರೇಯಸ್ ಅಯ್ಯರ್ ಟೀಮ್ ಇಂಡಿಯಾ ಹೊಸ ಕ್ಯಾಪ್ಟನ್ ಆಗಲಿ ಎಂಬ ಅಭಿಪ್ರಾಯ ಇದೆ.
ಯಾರು ಈ ಶ್ರೇಯಸ್ ಅಯ್ಯರ್?
ಶ್ರೇಯಸ್ ಅಯ್ಯರ್ ಏಕದಿನ ಮತ್ತು ಟಿ20 ನಾಯಕರಾಗೋ ಸಾಮರ್ಥ್ಯ ಹೊಂದಿದ್ದಾರೆ. ಗಂಭೀರ್ ಪ್ರಕಾರ ಶ್ರೇಯಸ್ ಅಯ್ಯರ್ ನಾಯಕತ್ವ ವಹಿಸಿಕೊಂಡರೆ ಟೀಮ್ ಇಂಡಿಯಾ ಭವಿಷ್ಯವೇ ಬದಲಾಗಲಿದೆ.
ಇನ್ನು, ಕೆಕೆಆರ್ ತಂಡದ ಕ್ಯಾಪ್ಟನ್ ಶ್ರೇಯಸ್ ಅಯ್ಯರ್. ಇವರ ನಾಯಕತ್ವದಲ್ಲೇ ಕೆಕೆಆರ್ ಐಪಿಎಲ್ 2024ರ ಟ್ರೋಫಿ ಗೆದ್ದಿದೆ. ಶ್ರೇಯಸ್ ನಿರ್ಭೀತ ಬ್ಯಾಟರ್ ಮತ್ತು ಬುದ್ಧಿವಂತ ನಾಯಕ. ಅದರಲ್ಲೂ ಗಂಭೀರ್ ಜತೆ ಕೆಲಸ ಮಾಡಿದ ಅನುಭವ ಇದೆ.
ಇದನ್ನೂ ಓದಿ:ಗೆಳೆಯನ ನೆನೆದು ಕಣ್ಣೀರಿಟ್ಟ ಮಾಜಿ ಕ್ರಿಕೆಟರ್; ಡೇವಿಡ್ ಜಾನ್ಸನ್ ಬಗ್ಗೆ ವಿಜಯ್ ಭಾರದ್ವಾಜ್ ಏನಂದ್ರು?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್