newsfirstkannada.com

ಮದುವಣಗಿತ್ತಿಯಂತೆ ಸಿಂಗಾರಗೊಂಡ ರಾಮ ಜನ್ಮಭೂಮಿ ; ಇಲ್ಲಿವೆ ಅಯೋಧ್ಯೆಯ ಕಲರ್​ಫುಲ್ ಫೋಟೋಸ್

Share :

Published April 17, 2024 at 6:20am

    ಕಲರ್​ ಕಲರ್​ ಲೈಟ್​ಗಳಿಂದ ಫಳಫಳನೆ ಹೊಳೆಯುತ್ತಿರೋ ರಾಮನ ಭೂಮಿ

    ಶ್ರೀ ರಾಮನನ್ನು ನೋಡಲು ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸುತ್ತಿರೋ ಭಕ್ತರು

    ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ ಗರ್ಭಗುಡಿಯ ಫೋಟೋಸ್​

ಅಯೋಧ್ಯೆ: ಇಂದು ದೇಶಾದ್ಯಂತ ರಾಮನವಮಿಯನ್ನು ಸಂಭ್ರಮ. ಜನವರಿ 22ರಂದು ಅಯೋಧ್ಯೆಯ ಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠೆಯನ್ನು ಮಾಡಲಾಗಿತ್ತು. ಅಂದಿನಿಂದ ಇಂದಿನವರೆಗೂ ಲಕ್ಷ, ಲಕ್ಷ ಭಕ್ತರು ಅಯೋಧ್ಯೆಗೆ ಭೇಟಿ ನೀಡಿ ರಾಮಲಲ್ಲಾನ ದರ್ಶನ ಪಡೆಯುತ್ತಿದ್ದಾರೆ.

ಇದನ್ನೂ ಓದಿ: VIDEO: ಬಾಲರಾಮನಿಗೆ ಸೂರ್ಯ ತಿಲಕ.. ಅಯೋಧ್ಯೆಯಲ್ಲಿ ನಡೆದ ಮೊದಲ ಪ್ರಯೋಗ ಹೇಗಿತ್ತು ಗೊತ್ತಾ?

ಇದೇ ಮೊದಲ ಬಾರಿಗೆ ಅಯೋಧ್ಯೆಯಲ್ಲಿ ನಿರ್ಮಾಣಗೊಂಡ ನೂತನ ದೇವಸ್ಥಾನದಲ್ಲಿ ರಾಮನವಮಿ ಆಚರಣೆ ನಡೆಯುತ್ತಿದೆ. ಹೀಗಾಗಿ ಶ್ರೀರಾಮ ಜನ್ಮಭೂಮಿ ಟ್ರಸ್ಟ್​ ವತಿಯಿಂದ ಎಲ್ಲ ರೀತಿಯಲ್ಲೂ ಸಕಲ ತಯಾರಿ ನಡೆಸಲಾಗುತ್ತಿದೆ. ಇದರ ಮಧ್ಯೆ ಈ ಬಾರಿಯ ರಾಮನವಮಿ ಬಹಳ ವಿಶೇಷವಾದದ್ದು. ವಿಶೇಷ ಎಂದರೆ ಶ್ರೀ ರಾಮಚಂದ್ರನ ಜನ್ಮದಿನವನ್ನು ಆಚರಿಸುವುದಲ್ಲದೇ, ರಾಮ ಹಾಗೂ ಸೀತೆಯರ ವಿವಾಹದ ದಿನವನ್ನಾಗಿಯೂ ಆಚರಿಸಲಾಗುತ್ತದೆ.

ಶ್ರೀ ರಾಮನವಮಿ ಆಚರಣೆ ಪ್ರಯುಕ್ತ ಅಯೋಧ್ಯೆಯ ದೇವಸ್ಥಾನವು ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಎಲ್ಲೆಲ್ಲೂ ಕಲರ್​ ಕಲರ್​ ಲೈಟ್​ಗಳಿಂದ ರಾಮ ಜನ್ಮಭೂಮಿ ಲಕ ಲಕ ಅಂತಾ ಹೊಳೆಯುತ್ತಿದೆ. ಇದನ್ನು ಕಣ್ತುಂಬಿಕೊಳ್ಳು ಜನಸಾಗರವೇ ಹರಿದು ಬರುವ ಸಾಧ್ಯತೆ ಇದೆ. ಇದರ ಜೊತೆಗೆ ರಾಮನವಮಿಯ ದಿನದಂದು ಬಾಲರಾಮನ ಹಣೆಯ ಮೇಲೆ ಸೂರ್ಯ ತಿಲಕ ಹೊಳೆಯಲಿದೆ.

ಇದನ್ನೂ ಓದಿ: ಅಯೋಧ್ಯೆ ರಾಮಲಲ್ಲಾನಿಗೂ ತಟ್ಟಿದ ಬಿಸಿಲಿನ ಬವಣೆ.. ಶ್ರೀರಾಮಜನ್ಮಭೂಮಿ ಟ್ರಸ್ಟ್​ನಿಂದ ಮಹತ್ವದ ನಿರ್ಧಾರ; ಏನದು?

ದೇವಾಲಯದ ಮೂರನೇ ಮಹಡಿಯಲ್ಲಿ ಸ್ಥಾಪಿಸಲಾದ ಮೊದಲ ತರ್ಪಣದ ಮೇಲೆ ಸೂರ್ಯನ ಬೆಳಕು ಬೀಳುತ್ತದೆ ಎಂದು ಟ್ರಸ್ಟ್​ ತಿಳಿದಿದೆ. ಇದನ್ನು ನೋಡಲು ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಹೀಗಾಗಿ ಶ್ರೀರಾಮ ಜನ್ಮಭೂಮಿ ಟ್ರಸ್ಟ್​ ವತಿಯಿಂದ ಎಲ್ಲ ರೀತಿಯಲ್ಲೂ ಸಕಲ ತಯಾರಿ ಮಾಡಿಕೊಂಡಿದೆ. ಸದ್ಯ ಶ್ರೀ ರಾಮನವಮಿಯಂದು ಜನ್ಮಭೂಮಿಯಲ್ಲಿ ಸಂಭ್ರಮ ಮನೆ ಮಾಡಿದೆ. ಇದೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮದುವಣಗಿತ್ತಿಯಂತೆ ಸಿಂಗಾರಗೊಂಡ ರಾಮ ಜನ್ಮಭೂಮಿ ; ಇಲ್ಲಿವೆ ಅಯೋಧ್ಯೆಯ ಕಲರ್​ಫುಲ್ ಫೋಟೋಸ್

https://newsfirstlive.com/wp-content/uploads/2024/04/rama8.jpg

Load More