/newsfirstlive-kannada/media/post_attachments/wp-content/uploads/2024/04/Hardik_Shubman-Gill.jpg)
ಬಹುನಿರೀಕ್ಷಿತ 2024ರ ಟಿ20 ವಿಶ್ವಕಪ್ ಬೆನ್ನಲ್ಲೇ ಟೀಮ್ ಇಂಡಿಯಾ ಮತ್ತು ಜಿಂಬಾಬ್ವೆ ಕ್ರಿಕೆಟ್ ತಂಡದ ಮಧ್ಯೆ 5 ಟಿ20 ಪಂದ್ಯಗಳ ಸರಣಿ ನಡೆಯುತ್ತಿದೆ. ಮೊದಲ ಪಂದ್ಯದಲ್ಲಿ ಸೋತಿದ್ದ ಟೀಮ್ ಇಂಡಿಯಾ 2ನೇ ಅಂತರಾಷ್ಟ್ರೀಯ ಟಿ20 ಮ್ಯಾಚ್ನಲ್ಲಿ ಗೆಲ್ಲೋ ಮೂಲಕ ಸೇಡಿಗೆ ಸೇಡು ತೀರಿಸಿಕೊಂಡಿದೆ.
3ನೇ ಪಂದ್ಯದಲ್ಲೂ ಜಿಂಬಾಬ್ವೆ ವಿರುದ್ಧ ಗೆಲುವು ಸಾಧಿಸಬೇಕು ಎಂದು ಟೀಮ್ ಇಂಡಿಯಾ ಸಜ್ಜಾಗಿದೆ. ಈ ಮುನ್ನವೇ ಟೀಮ್ ಇಂಡಿಯಾಗೆ ಬಿಗ್ ಶಾಕ್ ಕಾದಿದೆ. ಮೂರನೇ ಪಂದ್ಯಕ್ಕೆ ಕ್ಯಾಪ್ಟನ್ ಶುಭ್ಮನ್ ಗಿಲ್ ಲಭ್ಯರಾಗೋದು ಡೌಟ್ ಆಗಿದೆ. ಇವರ ಬದಲಿಗೆ ಟೀಮ್ ಇಂಡಿಯಾವನ್ನು ಹಿರಿಯ ಆಟಗಾರ ಸಂಜು ಸ್ಯಾಮ್ಸನ್ ಮುನ್ನಡೆಸಲಿದ್ದಾರೆ ಎಂದು ವರದಿಯಾಗಿದೆ.
Latest update
Sanju Samson to captain the Indian side in 3rd match. Shubman Gill had injured his finger so he will not be playing in the 3rd T20I against Zimbabwe.
— TheCricketRant (@TheCricketRant) July 8, 2024
ಇತ್ತೀಚೆಗೆ ಹರಾರೆ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ 2ನೇ ಅಂತರಾಷ್ಟ್ರೀಯ ಪಂದ್ಯದಲ್ಲಿ ಭಾರತ ತಂಡಕ್ಕೆ ಬರೋಬ್ಬರಿ 100 ರನ್ಗಳ ಜಯ ಸಿಕ್ಕಿತ್ತು. ಈ ಪಂದ್ಯದಲ್ಲೇ ಫೀಲ್ಡಿಂಗ್ ವೇಳೆ ಶುಭ್ಮನ್ ಗಿಲ್ ಅವರ ಫಿಂಗರ್ ಇಂಜುರಿ ಆಗಿದೆ. ಹಾಗಾಗಿ ಇವರು ಟೀಮ್ ಇಂಡಿಯಾ ಪರ ಆಡೋದು ಡೌಟ್ ಇದೆ.
ಇದನ್ನೂ ಓದಿ:‘IPL ಹೀರೋ ನಾಚಿಕೆ ಆಗಬೇಕು ನಿನಗೆ’- ಕ್ಯಾಪ್ಟನ್ ಗಿಲ್ ವಿರುದ್ಧ ಬಹಿರಂಗ ಆಕ್ರೋಶ!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ