ಮೈದಾನದಲ್ಲಿ ಮುದ್ದು ಮಗಳ ಜತೆ ಆಟವಾಡಿದ ಮೇಗನ್ ಶುಟ್
150 ವಿಕೆಟ್ ಕಬಳಿಸಿದ ಏಷ್ಯಾದ ಎಷ್ಟನೇ ಬೌಲರ್ ಬೂಮ್ರಾ?
ಬೌಂಡ್ರಿ ಬಾರಿಸಲು ಯತ್ನಿಸಿ ಹಿಟ್ ವಿಕೆಟ್ ಆದ ಲಂಕಾ ಪ್ಲೇಯರ್
ವೈಜಾಗ್ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯದಲ್ಲಿ ಗಿಲ್ ಫೀಲ್ಡಿಂಗ್ನಿಂದ ಸುದ್ದಿಯಾಗಿದ್ದಾರೆ. ಒಂದೇ ಇನ್ನಿಂಗ್ಸ್ನಲ್ಲಿ ಬರೋಬ್ಬರಿ 4 ಕ್ಯಾಚ್ಗಳನ್ನ ಹಿಡಿದು ಗಮನ ಸೆಳೆದಿದ್ದಾರೆ. ಓಲಿ ಪೋಪ್, ಜಾನಿ ಬೇಸ್ಟೋವ್, ರೇಹಾನ್ ಅಹ್ಮದ್ ಹಾಗೂ ಟಾಮ್ ಹಾರ್ಟ್ಲಿ ಗಿಲ್ಗೆ ಕ್ಯಾಚ್ ನೀಡಿ ಹೊರನಡೆದ್ರು. ಇದೇ ಇನ್ನಿಂಗ್ಸ್ನಲ್ಲಿ ಗಿಲ್ ಮೊದಲ ಕ್ಯಾಚ್ ಕೈಚೆಲ್ಲಿದ್ರು. ಬಳಿಕ ತಪ್ಪನ್ನ ತಿದ್ದಿಕೊಂಡು 4 ಕ್ಯಾಚ್ ಹಿಡಿದು ಸೈ ಅನ್ನಿಸಿಕೊಂಡರು.
ಏಷ್ಯಾದ 2ನೇ ಶರವೇಗದ ಬೌಲರ್
ಟೀಮ್ ಇಂಡಿಯಾ ಸ್ಟಾರ್ ವೇಗಿ ಜಸ್ಪ್ರೀತ್ ಬೂಮ್ರಾ ವೈಜಾಗ್ ಟೆಸ್ಟ್ನಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ 150 ವಿಕೆಟ್ ಪಡೆದ ಹಿರಿಮೆಗೆ ಭಾಜನರಾದ್ರು. ಆ ಮೂಲಕ 150 ವಿಕೆಟ್ ಕಬಳಿಸಿದ ಏಷ್ಯಾದ 2ನೇ ಶರವೇಗದ ಬೌಲರ್ ಅನ್ನಿಸಿಕೊಂಡ್ರು. ವಕಾರ್ ಯೂನಿಸ್ 27 ಪಂದ್ಯಗಳಿಂದ ಈ ಸಾಧನೆ ಮಾಡಿದ್ರೆ, ಜಸ್ಪ್ರೀತ್ ಬೂಮ್ರ 34 ಹಾಗೂ ಇಮ್ರಾನ್ ಖಾನ್ 37 ಇನ್ನಿಂಗ್ಸ್ಗಳಲ್ಲಿ 150 ವಿಕೆಟ್ ಕಬಳಿಸಿದ್ದಾರೆ.
ಮೈದಾನದಲ್ಲಿ ಮಗಳ ಜೊತೆ ಆಟವಾಡಿದ ಮೇಗನ್
ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ಬೌಲರ್ ಮೇಗನ್ ಶುಟ್ ಮೈದಾನದಲ್ಲಿ ಮಗಳ ಜೊತೆ ಕಾಣಿಸಿಕೊಂಡರು. ಅಡಿಲೇಡ್ನಲ್ಲಿ ಆಸಿಸ್ ಹಾಗೂ ಆಫ್ರಿಕಾ ನಡುವೆ ಮೊದಲ ಏಕದಿನ ಪಂದ್ಯ ನಡೆದಿತ್ತು. ಗೆಲುವಿನ ಬಳಿಕ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಮಗಳು ರೈಲಿಯನ್ನ ಅಂಗಳಕ್ಕೆ ಕರೆದಿದ್ದಾರೆ. ಮುದ್ದಿನ ಮಗಳು ಮೈದಾನಕ್ಕೆ ಬರುತ್ತಿದ್ದಂತೆ ಎತ್ತಿಕೊಂಡು ಆಟವಾಡಿದ್ದಾರೆ.
ಮೈದಾನದಲ್ಲಿ ಕಾಣಿಸಿಕೊಂಡ ಉಡ..!
ಶ್ರೀಲಂಕಾ- ಅಪ್ಘಾನಿಸ್ತಾನ ನಡುವಿನ ಟೆಸ್ಟ್ ಪಂದ್ಯಕ್ಕೆ ಸ್ಪೆಷಲ್ ಅತಿಥಿ ಎಂಟ್ರಿಕೊಟ್ಟಿದ್ದಾನೆ. ಪಂದ್ಯದ 47ನೇ ಓವರ್ನಲ್ಲಿ ಮೈದಾನದಲ್ಲಿ ಉಡ ಪ್ರತ್ಯಕ್ಷವಾಗಿದೆ. ಬೌಂಡರಿ ಲೈನ್ ದಾಟಿ ಹೊರ ಬರುತ್ತಿದ್ದಂತೆ ಅಂಪೈರ್ಸ್ ಪಂದ್ಯವನ್ನ ಕೆಲ ನಿಮಿಷ ಸ್ಥಗಿತಗೊಳಿಸಿದ್ರು. ಸ್ವತಃ ಅಂಪೈರ್ ಉಡವನ್ನ ಮೈದಾನದಾಚೆಗೆ ಓಡಿಸಿದ್ರು. ಬಳಿಕ ಪಂದ್ಯ ಆರಂಭಗೊಂಡಿತು.
ಹಿಟ್ ವಿಕೆಟ್ ಆದ ಮ್ಯಾಥ್ಯೂವ್ಸ್
ಶ್ರೀಲಂಕಾದ ತಂಡದ ಸ್ಟಾರ್ ಆಲ್ರೌಂಡರ್ ಆ್ಯಂಜಲೋ ಮ್ಯಾಥ್ಯೂವ್ಸ್ ಹಿಟ್ ವಿಕೆಟ್ ಆಗಿ ಅಚ್ಚರಿ ಮೂಡಿಸಿದ್ದಾರೆ. ಕೊಲಂಬೋದಲ್ಲಿ ಅಪ್ಘಾನಿಸ್ತಾನ ವಿರುದ್ಧ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಮ್ಯಾಥ್ಯೂವ್ಸ್ ಖೈಸ್ ಅಹ್ಮದ್ ಬೌಲಿಂಗ್ನಲ್ಲಿ ಬೌಂಡ್ರಿ ಬಾರಿಸಲು ಪ್ರಯತ್ನಿಸಿ ಹಿಟ್ ವಿಕೆಟ್ ಆಗಿದ್ದಾರೆ. ಕಳೆದ ವರ್ಷ ಬಾಂಗ್ಲಾದೇಶ ವಿರುದ್ಧ ಮ್ಯಾಥ್ಯೂವ್ಸ್ ಟೈಮ್ ಔಟ್ಗೆ ವಿಕೆಟ್ ಒಪ್ಪಿಸಿ ಭಾರಿ ಸುದ್ದಿಯಾಗಿದ್ರು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ