Advertisment

INDvsZIM: ಜೋಡಿಯಾಟದಲ್ಲಿ ದಾಖಲೆ! ಯಶಸ್ವಿ ಮತ್ತು ಗಿಲ್ ಎಷ್ಟನೇ ಸ್ಥಾನದಲ್ಲಿದ್ದಾರೆ ಗೊತ್ತಾ?

author-image
AS Harshith
Updated On
INDvsZIM: ಜೋಡಿಯಾಟದಲ್ಲಿ ದಾಖಲೆ! ಯಶಸ್ವಿ ಮತ್ತು ಗಿಲ್ ಎಷ್ಟನೇ ಸ್ಥಾನದಲ್ಲಿದ್ದಾರೆ ಗೊತ್ತಾ?
Advertisment
  • ಶುಭ್ಮನ್​ ಗಿಲ್​ ಮತ್ತು ಯಶಸ್ವಿ ಜೈಸ್ವಾಲ್​ ಅದ್ಭುತ ಜೊತೆಯಾಟ
  • ಇಂದಿನ ಪಂದ್ಯದಲ್ಲಿ ದಾಖಲೆ ಬರೆದ ಶುಭ್ಮನ್​ ಮತ್ತು ಜೈಸ್ವಾಲ್
  • 2ನೇ ಸ್ಥಾನದಲ್ಲಿದ್ದಾರೆ ರೋಹಿತ್ ಶರ್ಮಾ ಮತ್ತು ಶಿಖರ್​ ಧವನ್​

INDvsZIM: ಜಿಂಬಾಬ್ವೆ ನಡುವಿನ ನಾಲ್ಕನೇ ಟಿ20 ಪಂದ್ಯ ಟೀಂ ಇಂಡಿಯಾ ಗೆದ್ದು ಬೀಗಿದೆ. ಒಂದೇ ಒಂದು ವಿಕೆಟ್​ ಕಿತ್ತುಕೊಳ್ಳಲು ಆಗದಂತೆ ಜಿಂಬಾಬ್ವೆಗೆ ಸೋಲಿನ ರುಚಿ ತೋರಿಸಿದೆ. ಅಚ್ಚರಿ ಸಂಗತಿ ಎಂದರೆ ಯಶಸ್ವಿ ಜೈಸ್ವಾಲ್​ ಮತ್ತು ನಾಯಕ ಶುಭ್ಮನ್​ ಗಿಲ್​​ ಜೊತೆಯಾದ ಹೊಸ ದಾಖಲೆಯನ್ನು ಬರೆದಿದೆ.

Advertisment

ಹೌದು. ಇಂದಿನ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್​​ 53 ಎಸೆತಕ್ಕೆ 13 ಬೌಂಡರಿ ಮತ್ತು 2 ಸಿಕ್ಸ್​ ಬಾರಿಸುವ ಮೂಲಕ 93 ರನ್​ ಬಾರಿಸಿದರೆ, ಅತ್ತ ನಾಯಕ ಶುಭ್ಮನ್​ ಗಿಲ್​ 39 ಎಸೆತಕ್ಕೆ 6 ಬೌಂಡರಿ ಜೊತೆಗೆ 2 ಸಿಕ್ಸ್​ ಬಾರಿಸುವ ಮೂಲಕ 58 ಬಾರಿಸಿದರು. ಪರಿಣಾಮ ಇಬ್ಬರ ಜೊತೆಯಾಟ ಟೀಂ ಇಂಡಿಯಾಗೆ ಭರ್ಜರಿ ಜಯ ತಂದುಕೊಟ್ಟಿದೆ. ಅದರಲ್ಲೂ ಟೀಂ ಇಂಡಿಯಾದ ಓಪನರ್ಸ್​ 15 ಓವರ್​ನಲ್ಲಿ ತಂಡವನ್ನು ಜಯದ ನೆರಳಿಗೆ ತಂದಿಟ್ಟಿದ್ದಾರೆ. ಆದರೀಗ ಇವರಿಬ್ಬರ ಜೊತೆಯಾಟ ದಾಖಲೆ ಪುಟ ಸೇರಿದೆ.

ಇದನ್ನೂ ಓದಿ: 4,4,4,4,4,4,6,6.. ಗಿಲ್​ ಅರ್ಧ ಶತಕದ ಅದ್ಭುತ ಆಟ.. ಜೈಸ್ವಾಲ್​ ಬೆನ್ನಿಗೆ ನಿಂತ ನಾಯಕ

150ಕ್ಕಿಂತ ಹೆಚ್ಚಿನ ರನ್ ಜೊತೆಯಾಟಗಳನ್ನು ಆಡಿದ 4ನೇ ಬ್ಯಾಟಿಂಗ್ ಜೋಡಿಯಾಗಿ ಶುಭ್ಮನ್​ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ಗುರುತಿಸಿಕೊಂಡಿದ್ದಾರೆ.​​

Advertisment

publive-image

ಇದನ್ನೂ ಓದಿ: ಟೀಂ ಇಂಡಿಯಾಗೆ ಯಶಸ್ಸು ತಂದುಕೊಟ್ಟ ಜೈಸ್ವಾಲ್​! ಜಿಂಬಾಬ್ವೆ ವಿರುದ್ಧ 10 ವಿಕೆಟ್​​ಗಳ ಭರ್ಜರಿ ಜಯ

ಇನ್ನು ಪಾಕಿಸ್ತಾನದ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಮೊದಲ ಸ್ಥಾನದಲ್ಲಿದ್ದರೆ, 2ನೇ ಸ್ಥಾನದಲ್ಲಿ ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಇದ್ದಾರೆ. 3ನೇ ಸ್ಥಾನದಲ್ಲಿ ಜಿಬ್ರಾಲ್ಟರ್ ತಂಡದ ಬೃಸ್ ಆ್ಯಂಡ್​  ಲೂಯಿಸ್ ಮತ್ತು  ಅವಿನಾಶ್ ಪೈ ಕಾಣಿಸಿಕೊಂಡಿದ್ದಾರೆ.

ಇದಲ್ಲದೆ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ 5 ಬಾರಿ 150ಕ್ಕೂ ಹೆಚ್ಚು ರನ್​ ಜೊತೆಯಾಗಿ ಆಡಿದ್ದಾರೆ. ಉಳಿದವರೆಲ್ಲರು 2 ಬಾರಿ ಆಡಿದ್ದಾರೆ.

Advertisment

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment