ಅಹ್ಮದಾಬಾದ್ನಲ್ಲಿ ಗಿಲ್ ಶತಕದ ಆರ್ಭಟ
ಬೆಂಗಳೂರು, ಮುಂಬೈ ಪಾಲಿಗೆ ಗಿಲ್ ವಿಲನ್
ಟೂರ್ನಿಯಲ್ಲಿ 3ನೇ ಶತಕ ಸಿಡಿಸಿದ ಗಿಲ್
ಶುಭಮನ್ ಗಿಲ್ ಸಿಡಿಲಬ್ಬರದ ಆಟಕ್ಕೆ ವಿಶ್ವವೇ ದಂಗಾಯ್ತು. ನಮೋ ಸ್ಟೇಡಿಯಂನಲ್ಲಿ ಸಿಕ್ಸರ್ಗಳ ಸುರಿಮಳೆ ಸಿಡಿಸಿದ ಗಿಲ್, ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಯುವಂತೆ ಮಾಡಿದ್ರು. ಗಿಲ್ ರಣಾರ್ಭಟಕ್ಕೆ ಎದುರಾಳಿ ಬೌಲರ್ಗಳು ಬೆಚ್ಚಿಬಿದ್ದರು..
ಗಿಲ್.. ನಿನ್ನೆ ನಮೋ ಮೈದಾನದಲ್ಲಿ ಕೇಳಿ ಬರ್ತಿದ್ದ ಒಂದೇ ಒಂದು ಶಬ್ಧ ಇದು. ಮಳೆಯಿಂದ ಪಂದ್ಯ ತಡವಾಗಿ ಶುರುವಾದ್ರೂ, ಗಿಲ್ ನಮೋ ಮೈದಾನದಲ್ಲಿ ಸಿಕ್ಸರ್ಗಳ ಮಳೆಯನ್ನೇ ಸುರಿಸಿದರು. ಗಿಲ್ ಹೊಡೆಯುತ್ತಿದ್ದ ಒಂದೊಂದು ಹೊಡೆತ, ಬೌಲರ್ಸ್ ಮುಟ್ಟಿ ನೋಡಿಕೊಳ್ಳುವಂತ್ತಿತ್ತು.
— Gujarat Titans (@gujarat_titans) May 26, 2023
ಅಹ್ಮದಾಬಾದ್ನಲ್ಲಿ ಗಿಲ್ ಶತಕದ ಆರ್ಭಟ
ಶುಕ್ರವಾರ ಗಿಲ್ ಪಾಲಿಗೆ ಲಕ್ಕಿ ಡೇ.. 30 ರನ್ಗಳಿದ್ದಾಗ ಗಿಲ್, ಜೀವದಾನ ಪಡೆದ್ರು. ಸಿಕ್ಕ ಚಾನ್ಸ್ನ ಸಖತ್ ಆಗಿ ಬಳಿಸಿಕೊಂಡ ಗಿಲ್, ನಂತರ ಬೌಲರ್ಗಳನ್ನ ರುಬ್ಬಿ ಬಿಸಾಕಿದ್ರು.. ಕೇವಲ 49 ಎಸೆತಗಳಲ್ಲಿ ಶತಕ ಸಿಡಿಸಿ ಸಂಭ್ರಮಿಸಿದರು..
ಟೂರ್ನಿಯಲ್ಲಿ 3ನೇ ಶತಕ ಸಿಡಿಸಿದ ಗಿಲ್
ಲೀಗ್ನಲ್ಲಿ ಸನ್ ರೈಸರ್ಸ್ ಹೈದ್ರಾಬಾದ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧ ಗಿಲ್, ಶತಕ ಸಿಡಿಸಿದರು. ಆ ಮೂಲಕ ಟೂರ್ನಿಯಲ್ಲಿ ಮೂರನೇ ಶತಕ ಸಿಡಿಸಿದ ಏಕೈಕ ಆಟಗಾರ ಎನಿಸಿಕೊಂಡರು.
𝐆𝐀𝐌𝐄 recognises 𝐆𝐀𝐌𝐄 🤝💙@ShubmanGill | @ImRo45 #GTvMI | #PhariAavaDe | #TATAIPL 2023 Playoffs | #Qualifier2 pic.twitter.com/fVuPVPN281

ಲೀಗ್ ಸ್ಟೇಜ್ನ ಕೊನೆ ಪಂದ್ಯದಲ್ಲಿ ಆರ್ಸಿಬಿ ಗೆಲ್ಲಲೇಬೇಕಾದ ಒತ್ತಡದಲ್ಲಿತ್ತು. ಈ ವೇಳೆ ಚಿನ್ನಸ್ವಾಮಿಯಲ್ಲಿ ಅಬ್ಬರಿಸಿ ಬೊಬ್ಬೆರೆದ ಗಿಲ್, ಶತಕ ಸಿಡಿಸಿ ಆರ್ಸಿಬಿಗೆ ಸೋಲಿನ ರುಚಿ ತೋರಿಸಿದ್ರು.
ನಿನ್ನೆ ನಡೆದ ಮುಂಬೈ ವಿರುದ್ಧದ ಪಂದ್ಯದಲ್ಲೂ ಗಿಲ್, ದಿ ಶೋ ಮ್ಯಾನ್ ಆದ್ರು. ಮುಂಬೈ ಪಲ್ಟನ್ಸ್ ಬೌಲರ್ಗಳನ್ನ ನಮೋ ಮೈದಾನದಲ್ಲಿ ಪಲ್ಟಿ ಹೊಡೆಸಿದ್ರು. ಶತಕ ಸಿಡಿಸಿ ಮಿಂಚಿದ್ರು.
ಡುಪ್ಲೆಸಿ ರನ್ ದಾಖಲೆ ಧೂಳಿಪಟ
ಗಿಲ್, ಈ ಐಪಿಎಲ್ ಸೀಸನ್ನ ಟಾಪ್ ರನ್ ಗೆಟರ್ ಆದ್ರು. ಆರ್ಸಿಬಿ ನಾಯಕ ಫಾಫ್ ಡುಪ್ಲೆಸಿ ರನ್ ದಾಖಲೆಯನ್ನ ಬ್ರೇಕ್ ಮಾಡಿದ ಗಿಲ್, ಆರೆಂಜ್ ಕ್ಯಾಪ್ ತನ್ನದಾಗಿಸಿಕೊಂಡರು. ಅಷ್ಟೇ ಅಲ್ಲ.! ಐಪಿಎಲ್ ಇತಿಹಾಸದಲ್ಲಿ ದಾಖಲೆಯ 800 ರನ್ ಗಡಿ ದಾಟಿದ 3ನೇ ಬ್ಯಾಟ್ಸ್ಮನ್ ಎನಿಸಿಕೊಂಡರು.
𝐀 𝐂𝐔𝐓 𝐀𝐁𝐎𝐕𝐄 𝐓𝐇𝐄 𝐑𝐄𝐒𝐓 💙💥#GTvMI | #PhariAavaDe | #TATAIPL 2023 Playoffs | #Qualifier2 pic.twitter.com/K94lpOrKhI

ಗಿಲ್ ಆಟಕ್ಕೆ ಬೌಲರ್ಸ್ ಪರದಾಟ
ಈ ಟೂರ್ನಿಯುದ್ದಕ್ಕೂ ಗಿಲ್ ಆರ್ಭಟ ಜೋರಾಗಿತ್ತು. ಆರಂಭದಿಂದಲೂ ಗುಡುಗಿದ ಗಿಲ್, ಮೂರು ಶತಕ ಮತ್ತು 5 ಅರ್ಧಶತಕಗಳನ್ನ ಸಿಡಿಸಿ, ಬೌಲರ್ಗಳ ಪಾಲಿಗೆ ವಿಲನ್ ಆಗಿದ್ದಾರೆ. ಗಿಲ್ರ ಔಟ್ ಸ್ಟಾಂಡಿಂಗ್ ಬ್ಯಾಟಿಂಗ್, ಗುಜರಾತ್ ಟೈಟನ್ಸ್ ಪಾಲಿಗೆ ವರದಾನವಾಯ್ತು.
ಒಟ್ನಲ್ಲಿ..! ಈ ಯಂಗ್ ಆ್ಯಂಡ್ ಡೈನಾಮಿಕ್ ಬ್ಯಾಟ್ಸ್ಮನ್, ರನ್ ಗಳಿಕೆಯಲ್ಲಿ ಸೂಪರ್ ಹೀರೋ… ಗಿಲ್ ಆರ್ಭಟ ಟೀಮ್ ಇಂಡಿಯಾದಲ್ಲೂ ಮುಂದುವರಿಯಲಿ ಅನ್ನೋದೇ, ಕೋಟ್ಯಾಂತರ ಕ್ರಿಕೆಟ್ ಅಭಿಮಾನಿಗಳ ಆಶಯ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ