Advertisment

ದ್ವಾರಕೀಶ್ ಅವರ​ ಅಂತಿಮ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ, ಅಗಲಿದ ನಟನಿಗೆ ಕಂಬನಿ

author-image
Ganesh
Updated On
ದ್ವಾರಕೀಶ್ ಅವರ​ ಅಂತಿಮ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ, ಅಗಲಿದ ನಟನಿಗೆ ಕಂಬನಿ
Advertisment
  • ದ್ವಾರಕೀಶ್ ಅವರ ಅಂತಿಮ ದರ್ಶನ ಪಡೆದ ಚಿತ್ರರಂಗದ ಗಣ್ಯರು
  • ಯಶ್, ಸುದೀಪ್ ಸೇರಿ ಸ್ಯಾಂಡಲ್​ವುಡ್ ದಿಗ್ಗಜರಿಂದ ಅಂತಿಮ ನಮನ
  • ಮಧ್ಯಾಹ್ನದ ವೇಳೆಗೆ ಅಂತಿಮ ವಿಧಿವಿಧಾನ ನೆರವೇರಲಿದೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರಕ್ಕೆ ಆಗಮಿಸಿ ದ್ವಾರಕೀಶ್ ಅವರ ಅಂತಿಮ ದರ್ಶನ ಪಡೆದರು.  ಕನ್ನಡದ ಹಿರಿಯ ನಟ, ನಿರ್ದೇಶಕ, ನಿರ್ಮಾಪಕರಾಗಿ ಹೆಸರು ಮಾಡಿದ್ದ ದ್ವಾರಕೀಶ್ ನಿನ್ನೆ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.

Advertisment

ಇದನ್ನೂ ಓದಿ: ಐಪಿಎಲ್ ಪಂದ್ಯದ ವೇಳೆ ಕಣ್ಣೀರಿಟ್ಟ ಶಾರುಖ್ ಖಾನ್, ನಟನ ನೋಡಿ ಅಭಿಮಾನಿಗಳೂ ಭಾವುಕ

ಅಂತಿಮ ದರ್ಶನ ಪಡೆದು ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ದ್ವಾರಕೀಶ್ ಅವರು ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆಗಳನ್ನು ಕೊಟ್ಟಿದ್ದರು. ಕನ್ನಡ ಚಿತ್ರರಂಗ ಅತ್ಯದ್ಭುತ ನಟರಾಗಿದ್ದರು. ನಟರಾಗಿ, ನಿರ್ಮಾಪಕನಾಗಿ, ಹಾಸ್ಯ ನಟನಾಗಿ, ನಿರ್ದೇಶಕರಾಗಿ ಜನರ ಮನ ಗೆದ್ದಿದ್ದರು.

ಒಮ್ಮೆ ನಾನು ಮತ್ತು ಅವರು ಹೆಲಿಕಾಪ್ಟರ್ ಮೂಲಕ ಮೈಸೂರಿಗೆ ಹೋಗಿದ್ವಿ. ಕನ್ನಡ ಸೇವೆಯನ್ನು ಮಾಡಿದ ಅಪ್ರತಿಮ ಸಾಧಕ. ದ್ವಾರಕೀಶ್ ಅವರು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. ಅವರ ಸಾವಿನಿಂದ ಚಿತ್ರರಂಗಕ್ಕೆ ದೊಡ್ಡ ನಷ್ಟವಾಗಿದೆ. ಅವರ ಪತ್ನಿ ಕಾಲವಾದ ದಿನವೇ ದ್ವಾರಕೀಶ್ ಅವರು ಕೂಡ ಕಾಲವಾಗಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

Advertisment

ಇದನ್ನೂ ಓದಿ:ಶೀಘ್ರದಲ್ಲೇ ಆರ್​ಸಿಬಿ ಮಾಲೀಕರ ಬದಲಾವಣೆ..? ಬಿಸಿಸಿಐ ಮೇಲೆ ಹೆಚ್ಚಿದ ಭಾರೀ ಒತ್ತಡ..!

ರವೀಂದ್ರ ಕಲಾ ಕ್ಷೇತ್ರದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರರಂಗದ ಅನೇಕ ಗಣ್ಯರು ಆಗಮಿಸಿ, ದ್ವಾರಕೀಶ್​ ಅವರಿಗೆ ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಸ್ಯಾಂಡಲ್​​ವುಡ್ ಗಣ್ಯರಾದ ಗಿರೀಜಾ ಲೋಕೇಶ್, ಕಿಚ್ಚ ಸುದೀಪ್, ರಮೇಶ್ ಅರವಿಂದ್, ರವಿಚಂದ್ರನ್, ಮಾಳವಿಕಾ ಅವಿನಾಶ್, ಹಂಸಲೇಖ ಸೇರಿದಂತೆ ಅನೇಕರು ಆಗಮಿಸಿ, ಅಗಲಿದ ನಟನಿಗೆ ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಮಧ್ಯಾಹ್ನದ ವೇಳೆಗೆ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ಅಂತಿಮ ಕಾರ್ಯಗಳು ನಡೆಯಲಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment