newsfirstkannada.com

ರಾಜ್ಯದಲ್ಲಿ ಕಾಂಗ್ರೆಸ್ ಕೊಟ್ಟಿದ್ದ ಗ್ಯಾರಂಟಿಗಳು ರದ್ದಾಗುತ್ತಾ? ಕಾಂಗ್ರೆಸ್​ ಶಾಸಕರಿಂದಲೇ ಒತ್ತಡ..?

Share :

Published June 7, 2024 at 8:03am

    ಲೋಕ ಫಲಿತಾಂಶದಲ್ಲಿ ಜನ ಗ್ಯಾರಂಟಿಗೆ ಮನ್ನಣೆ ನೀಡಿಲ್ಲ

    ದೇಶದಲ್ಲಿ ಯಾರೂ 59 ಸಾವಿರ ಕೋಟಿ ಯೋಜನೆ ಕೊಟ್ಟಿಲ್ಲ

    ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಜಾರಿಗೊಳಿಸಿದ್ದೇವೆ

ಗ್ಯಾರಂಟಿ ಸರ್ಕಾರ ಅಂದ್ರೆ ಅದು ಕಾಂಗ್ರೆಸ್‌. ಆದ್ರೀಗ ಒಂದೇ ಒಂದು ಚುನಾವಣೆ ಎದುರಿಸ್ತಿದ್ದಂತೆ ಗ್ಯಾರಂಟಿ ಮೇಲಿನ ಭರವಸೆಯೇ ಕೈ ನಾಯಕರು ಕಳೆದುಕೊಂಡಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ರಾಜ್ಯದಲ್ಲಿ ಎರಡಂಕಿ ಮೇಲೆ ಲೋಕಸಭಾ ಕ್ಷೇತ್ರಗಳನ್ನ ಗೆಲ್ಲುವ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್‌ಗೆ ಅಂದುಕೊಂಡಂತ ಫಲಿತಾಂಶ ಸಿಕ್ಕಿಲ್ಲ. ಗ್ಯಾರಂಟಿ ಗುಂಗಲ್ಲಿ 20 ಕ್ಷೇತ್ರದ ಟಾರ್ಗೆಟ್ ಇಟ್ಟಿದ್ದ ಕೈಗೆ ಮತದಾರ 9 ಕ್ಷೇತ್ರಗಳನ್ನು ಮಾತ್ರ ಗೆಲ್ಲಿಸಿಕೊಟ್ಟಿದ್ದಾನೆ. ಹೀಗಾಗಿ ಸಿಎಂ ಮೇಲೆ ಗ್ಯಾರಂಟಿಗಳನ್ನ ಕೈಬಿಡುವ ಬಗ್ಗೆ ಶಾಸಕರಿಂದ ಒತ್ತಾಯ ಕೇಳಿಬಂದಿದೆ ಎನ್ನಲಾಗಿದೆ.

ಗ್ಯಾರಂಟಿಗಳಿಗೆ ಹಣ ಸರಿದೂಗಿಸಲು ಸರ್ಕಾರ ಶಾಸಕರ ಅನುದಾನಕ್ಕೆ ಕೊಕ್ಕೆ ಹಾಕಿತ್ತು. ಅದೆಷ್ಟೋ ಇಲಾಖೆಗಳಿಗೆ ಹಣ ರಿಲೀಸ್ ಮಾಡದೇ ಎಂಎಲ್‌ಎಗಳ ಕೆಂಗಣ್ಣಿಗೂ ಸಿಎಂ ಗುರಿಯಾಗಿದ್ರು. ಇದೀಗ ಗ್ಯಾರಂಟಿಗಳನ್ನ ದೂಷಿಸಲು ಸರಿಯಾದ ಕಾಲ ಅಂತ ಕೆಲ ಶಾಸಕರಿಗೆ ಅನಿಸಿದಂತಿದೆ. ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿಸಿದಷ್ಟು ಸೀಟ್‌ನ ತಂದುಕೊಡುವಲ್ಲಿ ಕೈ ಗ್ಯಾರಂಟಿಗಳು ವಿಫಲವಾಗಿವೆ.. ಹೀಗಾಗಿ ಇದೇ ಸರಿಯಾದ ಟೈಮ್ ಅಂತ ಭಾವಿಸಿರೋ ಕಾಂಗ್ರೆಸ್ ಶಾಸಕರು ಗ್ಯಾರಂಟಿಗಳನ್ನ ಕೈಬಿಡುವಂತೆ ಸಿಎಂ ಸಿದ್ದರಾಮಯ್ಯಗೆ ಒತ್ತಡ ಹೇರುತ್ತಿದ್ದಾರಂತೆ.

ಇದನ್ನೂ ಓದಿ:ಸಚಿವ ಸ್ಥಾನಕ್ಕೆ ಟವೆಲ್ ಹಾಕಿದ ಕರ್ನಾಟಕದ 5ಕ್ಕೂ ಹೆಚ್ಚು ಬಿಜೆಪಿ ಸಂಸದರು.. ಯಾರೆಲ್ಲ ಆಕಾಂಕ್ಷಿಗಳು..?

3 ‘ಗ್ಯಾರಂಟಿ’ ಖತಂ?

  • 3 ಗ್ಯಾರಂಟಿ ಯೋಜನೆ ಕೈಬಿಡುವಂತೆ ಶಾಸಕರಿಂದ ಒತ್ತಡ
  • ಲೋಕ ಫಲಿತಾಂಶದಲ್ಲಿ ಜನ ಗ್ಯಾರಂಟಿಗೆ ಮನ್ನಣೆ ನೀಡಿಲ್ಲ
  • ದೇಶದಲ್ಲಿ ಯಾರೂ 59 ಸಾವಿರ ಕೋಟಿ ಯೋಜನೆ ಕೊಟ್ಟಿಲ್ಲ
  • ಬಿಜೆಪಿಯಿಂದ ಬಡವರ ಪರ ಯೋಜನೆ ನೀಡದೆ ಭ್ರಷ್ಟಾಚಾರ
  • ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಜಾರಿಗೊಳಿಸಿದ್ದೇವೆ
  • ಆದ್ರೂ ಜನ ನಿರೀಕ್ಷಿತ ಮಟ್ಟದಲ್ಲಿ ಒಪ್ಪಿಕೊಂಡಂತೆ ಕಾಣಿಸುತ್ತಿಲ್ಲ
  • ಗ್ಯಾರಂಟಿ ಬಗ್ಗೆ ಆಕ್ರೋಶ ಹೊರ ಹಾಕಿದ್ದ ಬಿಜೆಪಿ, ಜೆಡಿಎಸ್
  • ಗ್ಯಾರಂಟಿಗಳಿಂದ ಅಭಿವೃದ್ಧಿ ಆಗುತ್ತಿಲ್ಲ ಅಂತ ವಿಪಕ್ಷಗಳ ಕಿಡಿ
  • ಹೀಗಾಗಿ 3 ಗ್ಯಾರಂಟಿಗಳು ಕೈಬಿಡುವಂತೆ ಶಾಸಕರ ಒತ್ತಾಯ

‘ರಾಜ್ಯದ ಜನರಿಗೆ ನಮ್ಮ ಗ್ಯಾರಂಟಿಗಳು ಬೇಡ ಅನ್ನಿಸುತ್ತೆ’
ಗ್ಯಾರಂಟಿಗಳ ರದ್ದಿನ ಬಗ್ಗೆ ಸುಳಿವು ಕೊಡುವ ರೀತಿಯಲ್ಲಿ ಸಚಿವ ಚಲುವರಾಯಸ್ವಾಮಿ ಮಾತನಾಡಿದ್ದಾರೆ.. ರಾಜ್ಯದ ಜನರಿಗೆ ನಮ್ಮ ಗ್ಯಾರಂಟಿಗಳು ಬೇಡ ಅನ್ನಿಸುತ್ತೇನೋ ಎಂಬ ಮಾತನ್ನ ಆಡಿದ್ದಾರೆ. ಗ್ಯಾರಂಟಿ ರದ್ದು ಮಾಡೋ ಮಾತೇ ಇಲ್ಲ ಎನ್ನುತ್ತಿದ್ದ ಸಿಎಂ ಸಿದ್ದರಾಮಯ್ಯರ ತೀರ್ಮಾನ ಏನು ಅನ್ನೋದು ಇನ್ನೂ ನಿರ್ಧಾರವಾಗಿಲ್ಲ.

ಇದನ್ನೂ ಓದಿ:IND vs PAK ಪಂದ್ಯಕ್ಕೆ ಭಾರೀ ಡಿಮ್ಯಾಂಡ್​​.. ಜಸ್ಟ್​ 10 ಸೆಕೆಂಡ್ಸ್ ಜಾಹೀರಾತಿಗೆ 10, 20 ಲಕ್ಷ ಅಲ್ಲವೇ ಅಲ್ಲ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯದಲ್ಲಿ ಕಾಂಗ್ರೆಸ್ ಕೊಟ್ಟಿದ್ದ ಗ್ಯಾರಂಟಿಗಳು ರದ್ದಾಗುತ್ತಾ? ಕಾಂಗ್ರೆಸ್​ ಶಾಸಕರಿಂದಲೇ ಒತ್ತಡ..?

https://newsfirstlive.com/wp-content/uploads/2024/06/SIDDU-DKS.jpg

Load More