ಸಿದ್ದರಾಮಯ್ಯ-ಡಿಕೆಶಿ ಹೆಗಲ ಮೇಲೆ ಹೆಚ್ಚು ಸ್ಥಾನ ಗೆಲ್ಲಿಸುವ ಹೊಣೆ
ಸಿದ್ದರಾಮಯ್ಯರಲ್ಲಿ ಆತಂಕ ಮೂಡಿಸ್ತಾ ಮೈತ್ರಿ ನಾಯಕರ ಹೇಳಿಕೆ?
ರಾಜ್ಯದಲ್ಲಿ ಹೆಚ್ಚು ಸ್ಥಾನ ಗೆದ್ದರಷ್ಟೇ ಸಿದ್ದರಾಮಯ್ಯ ಖುರ್ಚಿ ಸೇಫ್?
ಮೈಸೂರು: ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸೀಟು ಬರಲಿಲ್ಲ ಅಂದ್ರೆ ಸಿದ್ದರಾಮಯ್ಯ ಅವರ ಸಿಎಂ ಸ್ಥಾನಕ್ಕೆ ಕುತ್ತು ಬರುತ್ತಾ? ಗೊತ್ತಿಲ್ಲ. ಆದ್ರೆ ವರುಣಾದಲ್ಲಿ ಅವರು ಆಡಿದ ಮಾತಿನ ಧಾಟಿ ಪ್ರಶ್ನೆಗಳನ್ನಂತೂ ಹುಟ್ಟು ಹಾಕುವಂತಿದೆ. ನಾನು ಸಿಎಂ ಆಗಿ ಇರಬೇಕಾ ಬೇಡ್ವಾ ಅಂತಾ ಸಿದ್ದರಾಮಯ್ಯ ಅವರೇ ಜನರನ್ನ ಕೇಳಿದ್ದಾರೆ. 60 ಸಾವಿರ ಲೀಡ್ ಕೊಟ್ಟರೆ ಮಾತ್ರವೇ ತಾವು ಸೇಫ್ ಅನ್ನೋ ಮಾತಾಡಿರೋದು ಮಹತ್ವ ಪಡೆದುಕೊಂಡಿದೆ.
ಇದನ್ನೂ ಓದಿ: ಕನಕಪುರದಲ್ಲಿ 1, ಬೆಂಗಳೂರಲ್ಲಿ 5 ಕ್ರಿಮಿನಲ್ ಕೇಸ್; ಸೌಮ್ಯಾ ರೆಡ್ಡಿ ಬಳಿ ಇರೋ ಆಸ್ತಿ ಎಷ್ಟು ಕೋಟಿ?
ಲೋಕಸಭಾ ಚುನಾವಣೆ ಬಳಿಕ ಸರ್ಕಾರ ಇರಲ್ಲ ಅಂತಾ ಬಿಜೆಪಿ -ಜೆಡಿಎಸ್ ದೋಸ್ತಿ ನಾಯಕರು ಹೇಳ್ತಿದ್ದಾರೆ. ಬಿಎಸ್ ಯಡಿಯೂರಪ್ಪ, ವಿಜಯೇಂದ್ರರಾದಿಯಾಗಿ ಪದೇ ಪದೇ ಸರ್ಕಾರ ಪಥನದ ಮಾತಾಡ್ತಿರೋದು ಒಂದ್ಕಡೆಯಾದ್ರೆ, ಕುಮಾರಸ್ವಾಮಿ ಕೂಡಾ ಲೋಕಸಭೆ ಚುನಾವಣೆ ಬಳಿಕ ಬದಲಾವಣೆಯ ಮಾತಾಡ್ತಿದ್ದಾರೆ. ಕಾಂಗ್ರೆಸ್ ನಾಯಕರು ದೋಸ್ತಿಗಳ ಈ ಯಾವ ಮಾತಿಗೂ ಯಾವುದೇ ಚಕಾರ ತೆಗೆದಿಲ್ಲ. ಈ ನಡುವೆ ಸಿಎಂ ಸಿದ್ದರಾಮಯ್ಯ ಅವರು ಸಾರ್ವಜನಿಕವಾಗಿ ಆಡಿರೋ ಮಾತು ಹಲವು ಪ್ರಶ್ನೆಗಳನ್ನ ಹುಟ್ಟು ಹಾಕಿದೆ.
ನಾನು ಸಿಎಂ ಆಗಿ ಇರಬೇಕಾ, 60 ಸಾವಿರ ಲೀಡ್ ಕೊಡಿ
ತಮ್ಮ ಸ್ವಕ್ಷೇತ್ರ ವರುಣಾದಲ್ಲಿ ಸಿಎಂ ಆಡಿರೋ ಮಾತುಗಳಿವು. ಮೈಸೂರು ಮತ್ತು ಚಾಮರಾಜನಗರ ಲೋಕಸಭಾ ಕ್ಷೇತ್ರಗಳನ್ನ ಗೆಲ್ಲಲೇಬೇಕು ಅಂತಾ ಸಿದ್ದರಾಮಯ್ಯ ಪಣತೊಟ್ಟಿದ್ದಾರೆ. ಇದಕ್ಕಾಗಿ ನಾನಾ ಕಾರ್ಯತಂತ್ರಗಳನ್ನ ಅನುಸರಿಸಿದ್ದಾರೆ. ಇಷ್ಟೆಲ್ಲದರ ನಡುವೆಯೂ ಲೀಡ್ ಕೊಟ್ಟರಷ್ಟೇ ನನ್ನನ್ನ ಯಾರೂ ಮುಟ್ಟಕ್ಕಾಗಲ್ಲ ಅಂತಾ ಅವರಾಡಿರೋ ಮಾತಿನ ಅರ್ಥವೇನು ಅನ್ನೋದೇ ಮೂಲ ಪ್ರಶ್ನೆ. ನಾನು ಇರಬೇಕಾ ಬೇಡ್ವಾ ಅಂತಾ ಕೇಳಿರೋದ್ರ ಹಿಂದಿನ ಮರ್ಮವೇನು ಅನ್ನೋದೇ ಮತ್ತೊಂದು ಪ್ರಶ್ನೆ.
ನಾನು ಸಿಎಂ ಸ್ಥಾನದಲ್ಲಿ ಇರಬೇಕೋ ಬೇಡವೋ? ನಾನು ಸಿಎಂ ಸ್ಥಾನದಲ್ಲಿರಬೇಕು ಅಂದರೇ ವರುಣಾ ಕ್ಷೇತ್ರದಲ್ಲಿ 60 ಸಾವಿರ ಲೀಡ್ ಕೊಟ್ಟು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ. ವರುಣಾ ನನ್ನ ಪಾಲಿಗೆ ಅದೃಷ್ಟದ ಕ್ಷೇತ್ರ. ನಿಮ್ಮಿಂದ ಎರಡು ಬಾರಿ ಮುಖ್ಯಮಂತ್ರಿಯಾದೆ. ವರುಣಾ ಕ್ಷೇತ್ರದಲ್ಲಿ 60 ಸಾವಿರ ಲೀಡ್ ಕೊಡಿ. ನನಗಿಂತ ಹೆಚ್ಚು ಲೀಡ್ ಕೊಟ್ಟು ಸುನಿಲ್ ಬೋಸ್ ಗೆಲ್ಲಿಸಿ. ಆಗ ನನ್ನನ್ನು ಯಾರೂ ಮುಟ್ಟಲ್ಲ.
ಸಿದ್ದರಾಮಯ್ಯ, ಮುಖ್ಯಮಂತ್ರಿ
ಲೋಕಸಭೆ ಫಲಿತಾಂಶದ ಮೇಲೆ ನಿಂತಿದೆಯಾ ಸಿಎಂ ಗಾದಿ?
ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಕಾಂಗ್ರೆಸ್ ಗೆದ್ದಿರೋದು ಏಕೈಕ ಸ್ಥಾನ. ಆದ್ರೆ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಗ್ಯಾರಂಟಿಗಳನ್ನ ಜಾರಿ ಮಾಡುವ ಮೂಲಕ ನುಡಿದಂತೆ ನಡೆದಿದ್ದೇವೆ ಎಂದು ಬೀಗುತ್ತಿದೆ. ಲೋಕಸಭೆಗೆ ಹೆಚ್ಚು ಸ್ಥಾನ ಗೆಲ್ಲಿಸುವ ಹೊಣೆಗಾರಿಕೆಯೂ ಡಿಕೆಶಿ ಜೊತೆ ಜೊತೆಗೆ ಸಿದ್ದು ಅವರ ಹೆಗಲ ಮೇಲೂ ಇದೆ. ಯಾಕಂದ್ರೆ ಅವರೇ ಮುಖ್ಯಮಂತ್ರಿ. ಸರ್ಕಾರ ನಡೀತಿರೋದೇ ಸಿದ್ದರಾಮಯ್ಯ ನೇತೃತ್ವದಲ್ಲಿ. ಚುನಾವಣೆ ಫಲಿತಾಂಶದಲ್ಲಿ ಹೀನಾಯ ಪ್ರದರ್ಶನ ಕಂಡರೆ ಅದರ ಹೊಣೆಗಾರಿಕೆಯೂ ಸಿದ್ದರಾಮಯ್ಯ ಮೇಲೆ ಬೀಳೋದೇ ಹೆಚ್ಚು. ಕಾಂಗ್ರೆಸ್ ಹೈಕಮಾಂಡ್‌ಗೂ ಕರ್ನಾಟಕದಿಂದಲೇ ಅತಿಯಾದ ನಿರೀಕ್ಷೆಯಿದೆ. ಈ ಎಲ್ಲಾ ಕಾರಣಗಳಿಂದಲೇ ಸಿದ್ದರಾಮಯ್ಯ ಹಾಗೊಂದು ಮಾತು ಆಡಿದ್ರಾ ಅನ್ನೋ ಅನುಮಾನ ಕಾಡುತ್ತೆ. ಏನೇ ಆದ್ರೂ ನಾನು ಸಿಎಂ ಆಗಿ ಇರಬೇಕಾ ಬೇಡ್ವಾ ಅಂತಾ ಪ್ರಶ್ನಿಸಿರೋದಂತೂ ಮಾರ್ಮಿಕವಾಗಿ ಕೇಳಿಸ್ತಾ ಇರೋದ್ರಲ್ಲಿ ಎರಡು ಮಾತಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ