newsfirstkannada.com

ಕನಕಪುರದಲ್ಲಿ 1, ಬೆಂಗಳೂರಲ್ಲಿ 5 ಕ್ರಿಮಿನಲ್ ಕೇಸ್‌; ಸೌಮ್ಯಾ ರೆಡ್ಡಿ ಬಳಿ ಇರೋ ಆಸ್ತಿ ಎಷ್ಟು ಕೋಟಿ?

Share :

Published April 1, 2024 at 8:38pm

    ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯ ರೆಡ್ಡಿ ನಾಮಪತ್ರ ಸಲ್ಲಿಕೆ

    ತಮ್ಮ ಬಳಿ ಇರೋ ಒಟ್ಟು ಆಸ್ತಿ ವಿವರಣೆ ಕೊಟ್ಟ ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ

    ಜಯನಗರದ ಮಾಜಿ ಶಾಸಕಿ, ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯ ರೆಡ್ಡಿಗೆ ಹೊಸ ಸವಾಲು

ಬೆಂಗಳೂರು: ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಕರ್ನಾಟಕದ ಎಲ್ಲಾ ಕ್ಷೇತ್ರದ ಅಭ್ಯರ್ಥಿಗಳು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಇದರ ಮಧ್ಯೆ ಮೊದಲ ಹಂತದ ಮತದಾನ ನಡೆಯುವ 14 ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಲು ಕೇವಲ ಮೂರು ದಿನ ಮಾತ್ರ ಬಾಕಿ ಉಳಿದಿದೆ. ಇದೇ ಹೊತ್ತಲ್ಲೇ ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯ ರೆಡ್ಡಿ ನಾಮಪತ್ರ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಸಂಸದ ಪಿ.ಸಿ ಮೋಹನ್ ಪತ್ನಿ ಹೆಸರಲ್ಲೇ ಕೋಟಿ, ಕೋಟಿ ಸಂಪತ್ತು; ಬಿಜೆಪಿ ಅಭ್ಯರ್ಥಿ ಆಸ್ತಿ ವಿವರ ಇಲ್ಲಿದೆ!

ನಾಮಪತ್ರ ಸಲ್ಲಿಕೆ ವೇಳೆ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಅವರು ತಮ್ಮ ಬಳಿ ಒಟ್ಟು 2.3 ಕೋಟಿ ರೂಪಾಯಿ ಆಸ್ತಿ ಇರುವುದಾಗಿ ಘೋಷಿಸಿದ್ದಾರೆ. 1.51 ಕೋಟಿ ರೂಪಾಯಿ ಸಾಲ ಹೊಂದಿದ್ದಾರೆ. 2022-23ರಲ್ಲಿ 17.39 ಲಕ್ಷ ರೂಪಾಯಿ ವಾರ್ಷಿಕ ಆದಾಯ ಘೋಷಣೆ ಮಾಡಿದ್ದರು. ಕನಕಪುರದ ಸಾತನೂರು ಪೊಲೀಸ್‌ ಠಾಣೆಯಲ್ಲಿ 1 ಹಾಗೂ ಬೆಂಗಳೂರಿನ ವಿವಿಧ ಪೊಲೀಸ್‌ ಠಾಣೆಗಳಲ್ಲಿ 5 ಎಫ್‌ಐಆರ್‌ಗಳು ದಾಖಲಾಗಿವೆ. ಒಟ್ಟಾರೆ 6 ಕ್ರಿಮಿನಲ್‌ ಕೇಸ್‌ಗಳು ಇರುವುದಾಗಿಯೂ ಅಫಿಡವಿಟ್‌ನಲ್ಲಿ ನಮೂದಿಸಲಾಗಿದೆ. ಸೌಮ್ಯ ರೆಡ್ಡಿ ಕೈಯಲ್ಲಿ 44,135 ರೂಪಾಯಿ ಹಣವಿದ್ದು, ವಿವಿಧ ಬ್ಯಾಂಕ್‌ ಖಾತೆಗಳಲ್ಲಿ 40.96 ಲಕ್ಷ ರೂಪಾಯಿ ಇದೆ. 12.48 ಲಕ್ಷ ರೂಪಾಯಿ ಅವರು ಸಾಲ ನೀಡಿದ್ದು, 19.85 ಲಕ್ಷ ರೂ ಮೌಲ್ಯದ ಇನ್ನೋವಾ ಕಾರನ್ನು ಹೊಂದಿದ್ದಾರೆ.

ಸೌಮ್ಯ ರೆಡ್ಡಿ ಬಳಿ ಇರುವ ಚಿನ್ನಾಭರಣ ಎಷ್ಟು?

ಬೆಂಗಳೂರು ದಕ್ಷಿಣ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಅವರ ಬಳಿ 5 ಕೆಜಿ ಬೆಳ್ಳಿ, 950 ಗ್ರಾಂ ಚಿನ್ನ ಇದೆ. ಒಟ್ಟು 1.01 ಕೋಟಿ ರೂಪಾಯಿ ಚರಾಸ್ತಿಯನ್ನು ಹೊಂದಿದ್ದಾರೆ. ಸೌಮ್ಯ ರೆಡ್ಡಿ ಬಳಿಯಲ್ಲಿ ಯಾವುದೇ ಕೃಷಿ ಭೂಮಿ, ಕೃಷಿಯೇತರ ಭೂಮಿ, ವಾಣಿಜ್ಯ ಸಂಕೀರ್ಣಗಳು ಇಲ್ಲ. ಪ್ರಸ್ಟೀಜ್‌ ಪೈನ್‌ವುಡ್‌ನಲ್ಲಿ ಜಂಟಿ ಹೆಸರಿನಲ್ಲಿ ಫ್ಲ್ಯಾಟ್‌ ಹೊಂದಿದ್ದಾರೆ. ಸೌಮ್ಯ ರೆಡ್ಡಿ ಅವರ ಪಾಲಿನ ಸೇರಿದ ಫ್ಲ್ಯಾಟ್‌ ಮೌಲ್ಯ 1.28 ಕೋಟಿ ರೂ. ಒಟ್ಟು 2.3 ಕೋಟಿ ರೂ. ಆಸ್ತಿ ತಮ್ಮ ಬಳಿ ಇರುವುದಾಗಿ ಸೌಮ್ಯ ರೆಡ್ಡಿ ಘೋಷಣೆ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕನಕಪುರದಲ್ಲಿ 1, ಬೆಂಗಳೂರಲ್ಲಿ 5 ಕ್ರಿಮಿನಲ್ ಕೇಸ್‌; ಸೌಮ್ಯಾ ರೆಡ್ಡಿ ಬಳಿ ಇರೋ ಆಸ್ತಿ ಎಷ್ಟು ಕೋಟಿ?

https://newsfirstlive.com/wp-content/uploads/2024/04/sowmya-reddy-1.jpg

Load More