Advertisment

ಅಧಿಕಾರ ಹಂಚಿಕೆ ರಹಸ್ಯವಾಗಿಯೇ ಇಟ್ಟ ಕಾಂಗ್ರೆಸ್​; ಮತ್ತೆ ಗೊಂದಲ ಸೃಷ್ಟಿಸಿದ ಸಿದ್ದರಾಮಯ್ಯರ ಕಗ್ಗಂಟಿನ ಹೇಳಿಕೆ..!

author-image
Ganesh Nachikethu
Updated On
ಅಧಿಕಾರ ಹಂಚಿಕೆ ರಹಸ್ಯವಾಗಿಯೇ ಇಟ್ಟ ಕಾಂಗ್ರೆಸ್​; ಮತ್ತೆ ಗೊಂದಲ ಸೃಷ್ಟಿಸಿದ ಸಿದ್ದರಾಮಯ್ಯರ ಕಗ್ಗಂಟಿನ ಹೇಳಿಕೆ..!
Advertisment
  • ಕಾಂಗ್ರೆಸ್ ಪವರ್‌ ಶೇರಿಂಗ್‌ ಫಾರ್ಮುಲಾ ಏನು?
  • ಫಸ್ಟ್ CM ಆದವರು ಸೀಟ್ ಬಿಟ್ಟುಕೊಡ್ತಾರಾ?
  • ಕರ್ನಾಟಕ ಚಾಪ್ಟರ್‌- 2 ಬಗ್ಗೆಯೇ ಅನುಮಾನ

ಸಿದ್ದರಾಮಯ್ಯ ಅವರು 2ನೇ ಬಾರಿಗೆ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರೋದೇನೋ ಸರಿ. ಆದರೆ ಅವರ ಮುಖ್ಯಮಂತ್ರಿ ಅವಧಿ ಎಷ್ಟು ಅನ್ನೋ ಬಗ್ಗೆ ಸಸ್ಪೆನ್ಸ್‌ ಉಳಿದುಕೊಂಡಿದೆ. ಅವರು 5 ವರ್ಷಗಳ ಪೂರ್ಣಾವಧಿ ಮುಖ್ಯಮಂತ್ರಿಯಾ ಇಲ್ಲಾ, ಮೊದಲ ಅವಧಿಗೆ ಮುಖ್ಯಮಂತ್ರಿಯಾ ಅನ್ನೋದೇ ಅಸ್ಪಷ್ಟ. ಹೈಕಮಾಂಡ್‌ ಕೂಡಾ ಈ ವಿಚಾರದಲ್ಲಿ ಗುಟ್ಟು ಬಿಟ್ಟುಕೊಡದೆ ಇರೋದು ಅಚ್ಚರಿ ಮೂಡಿಸಿದೆ.

Advertisment

ಹೌದು, ಕಳೆದ ನಾಲ್ಕು ದಿನಗಳಿಂದ ರಾಷ್ಟ್ರರಾಜಧಾನಿಯಲ್ಲಿ ನಡೀತಿದ್ದ ಸಿಎಂ ಹುದ್ದೆ ಪ್ರಹಸನ ಸುಖಾಂತ್ಯವೇನೋ ಆಗಿದೆ. ಕ್ಲೈಮ್ಯಾಕ್ಸ್‌ನಲ್ಲಿ ಕುತೂಹಲವಂತೂ ಇನ್ನೂ ಉಳ್ಕೊಂಡಿದೆ. ಇದುವೇ ಫೈನಲ್‌ ಕ್ಲೈಮ್ಯಾಕ್ಸ್, ಇಲ್ಲ ಚಾಪ್ಟರ್‌ -2 ಇದೆಯಾ ಇಲ್ವಾ ಅನ್ನೋದೇ ಪ್ರಶ್ನೆಯಾಗಿ ಕಾಡತೊಡಗಿದೆ. ಯಾಕಂದ್ರೆ ಸಿದ್ದರಾಮಯ್ಯ ಸಿಎಂ ಅವಧಿ ಎಷ್ಟು ಅನ್ನೋದು ಬಹಿರಂಗವಾಗಿಲ್ಲ. ಅವರು ಪೂರ್ಣಾವಧಿ ಮುಖ್ಯಮಂತ್ರಿಯಾಗಿರ್ತಾರಾ ಇಲ್ಲಾ ಎರಡೂವರೆ ವರ್ಷದ ಬಳಿಕ ಡಿಕೆ ಶಿವಕುಮಾರ್​ಗೆ ಅಧಿಕಾರ ಹಸ್ತಾಂತರ ಮಾಡ್ತಾರಾ ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಈ ಬಗ್ಗೆ ಸಿದ್ದರಾಮಯ್ಯ ಕೊಟ್ಟಿರೋ ಹೇಳಿಕೆ ಈ ಪ್ರಶ್ನೆಯ ಗೊಂದಲವನ್ನು ಮತ್ತಷ್ಟು ಕಗ್ಗಂಟಾಗಿಸಿದೆ.

‘ಎರಡೂವರೆ ವರ್ಷ ಅಂತಾ ಯಾರೀ ಹೇಳಿದ್ದು’ ಎಂದಿರುವ ಸಿದ್ದರಾಮಯ್ಯ ಪ್ರಶ್ನೆ ಅಚ್ಚರಿ ಮೂಡಿಸಿದೆ. ತನ್ನ ಪರಿಶ್ರಮಕ್ಕೆ ಕೂಲಿ ಕೇಳ್ತಿರೋ ಡಿ.ಕೆ.ಶಿವಕುಮಾರ್‌ಗೆ ಹಾಗಾದ್ರೆ ಡಿಸಿಎಂ ಹುದ್ದೆಯೇ ಖಾಯಂ ಕೂಲಿಯಾ ಅನ್ನೋ ಕೌತುಕ ಮನೆ ಮಾಡಿದೆ. ಹಾಗಂತ ಡಿಕೆ ಶಿವಕುಮಾರ್‌ ಕೂಡಾ ಈ ವಿಚಾರದಲ್ಲಿ ತುಟ್ಟಿಬಿಚ್ಚದಿರೋದು ಚಾಪ್ಟರ್‌-2 ಬಗ್ಗೆ ಅನುಮಾನಗಳನ್ನ ಹೆಚ್ಚು ಮಾಡಿದೆ.

ಎಲ್ಲದಕ್ಕೂ ಕಾಲವೇ ಉತ್ತರಿಸಲಿದೆ ಕಾದು ನೋಡಿ ಅನ್ನೋದು ಡಿಕೆ ಶಿವಕುಮಾರ್ ಅವರ ಒನ್‌ಲೈನ್‌ ನುಡಿ. ಕಾಂಗ್ರೆಸ್‌ನಲ್ಲಿ ಯಾರನ್ನೇ ಕೇಳಿದ್ರೂ ಅಧಿಕಾರ ಹಂಚಿಕೆ ಸೂತ್ರದ ಬಗ್ಗೆ ಗುಟ್ಟು ಬಿಟ್ಟುಕೊಡ್ತಿಲ್ಲ. ಮೂಲಗಳ ಪ್ರಕಾರ ಇಷ್ಟೂ ದಿನ ಕಗ್ಗಂಟಾಗಿ ಉಳಿದಿದ್ದೇ ಈ ಅಧಿಕಾರ ಹಂಚಿಕೆಯ ಫಾರ್ಮುಲಾ ಎನ್ನಲಾಗ್ತಿದೆ.

Advertisment

30 ತಿಂಗಳು ಸಿದ್ದರಾಮಯ್ಯ ಸಿಎಂ ಆಗಿದ್ರೆ ಮತ್ತುಳಿದ 30 ತಿಂಗಳು ಡಿ.ಕೆ ಶಿವಕುಮಾರ್‌ ಅವರನ್ನು ಸಿಎಂ ಮಾಡುವ ಭರವಸೆ ಮೇರೆಗೆ ಬಿಕ್ಕಟ್ಟು ಬಗೆಹರಿದಿರೋದಾಗಿ ಹೇಳಲಾಗ್ತಿದೆ. ಈ ವಿಚಾರವನ್ನು ಅಧಿಕೃತವಾಗಿ ಹೇಳಿಕೊಳ್ಳಲು ಕಾಂಗ್ರೆಸ್‌ ಹೈಕಮಾಂಡ್‌ ಹಿಂಜರಿಯುತ್ತಿದೆ.

ಜನರ ಜೊತೆ ಅಧಿಕಾರ ಹಂಚುವುದೇ ಪವರ್‌ ಶೇರಿಂಗ್‌ ಫಾರ್ಮುಲಾ ಅನ್ನೋ ಮೂಲಕ ಕಾಂಗ್ರೆಸ್‌ ಹೈಕಮಾಂಡ್‌ ಈ ವಿಚಾರದಲ್ಲಿ ಅಡ್ಡಗೋಡೆ ಮೇಲೆ ದೀಪ ಇಟ್ಟಿದೆ. ಈ ಒಗಟಿನ ಮಾತುಗಳ ಹಿಂದಿನ ಮರ್ಮವೇನು ಅನ್ನೋದನ್ನ ಕಾಲವೇ ಬಿಡಿಸಿಡಬೇಕಿದೆ. ಆದ್ರೆ ಡಿಕೆಶಿವಕುಮಾರ್‌ ಸಿಎಂ ಆಗ್ತಾರೆ ಎಂದು ಕಾದಿದ್ದ ಅವರ ಬಳಗವನ್ನಂತೂ ಗೊಂದಲದಲ್ಲಿರಿಸಿದೆ. ಇತ್ತ ಸಿದ್ದರಾಮಯ್ಯ ಬಳಗ ಮಾತ್ರ ಸದ್ಯಕ್ಕೆ ನಿರಾಳ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment