Advertisment

2ನೇ ಮದುವೆಯಾದ ತಮಿಳಿನ ಖ್ಯಾತ ನಟ; ಸಿದ್ಧಾರ್ಥ್- ಅದಿತಿ ರಾವ್ ಸೀಕ್ರೆಟ್ ಮ್ಯಾರೇಜ್‌ ಯಾಕೆ?

author-image
Bheemappa
Updated On
2ನೇ ಮದುವೆಯಾದ ತಮಿಳಿನ ಖ್ಯಾತ ನಟ; ಸಿದ್ಧಾರ್ಥ್- ಅದಿತಿ ರಾವ್ ಸೀಕ್ರೆಟ್ ಮ್ಯಾರೇಜ್‌ ಯಾಕೆ?
Advertisment
  • ನಟಿ ಅದಿತಿ ರಾವ್ ಹೈದರಿಗೆ ಈ ಮೊದಲೇ ಮದುವೆ ಆಗಿತ್ತಾ? ​
  • ದೇವಾಲಯದಲ್ಲಿ ಸರಳವಾಗಿ, ಗುಟ್ಟಾಗಿ ಮದುವೆಯಾದ ನಟ
  • ಕೆಲ ವರ್ಷಗಳಿಂದ ಒಟ್ಟಿಗೆ ಓಡಾಡುತ್ತಿದ್ರಾ ಸಿದ್ಧಾರ್ಥ್- ಅದಿತಿ?

ತಮಿಳಿನ ಖ್ಯಾತ ನಟ ಹಾಗೂ ತೆಲುಗಿನ ಬೊಮ್ಮರಿಲ್ಲು ಸಿನಿಮಾ ಖ್ಯಾತಿಯ ನಟ ಸಿದ್ಧಾರ್ಥ್ ಅವರು 44ನೇ ವರ್ಷದಲ್ಲಿ 2ನೇ ಮದುವೆಯಾಗಿದ್ದಾರೆ. 2021ರಿಂದ ಇಂಡಸ್ಟ್ರಿಯಲ್ಲಿ ಸಿದ್ಧಾರ್ಥ್ ಜೊತೆ ಅದಿತಿ ರಾವ್ ಹೈದರಿ ಹೆಸರು ಕೇಳಿ ಬರುತ್ತಿತ್ತು. ಅದರಂತೆ ತೆಲಂಗಾಣದ ದೇವಸ್ಥಾನವೊಂದರಲ್ಲಿ ಅದಿತಿ ರಾವ್​​ರನ್ನ ಸಿದ್ಧಾರ್ಥ್​ ವರಿಸಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಈ ಬಗ್ಗೆ ದಂಪತಿ ಅಧಿಕೃತವಾಗಿ ಘೋಷಣೆ ಮಾಡುವುದು ಬಾಕಿ ಉಳಿದಿದೆ.

Advertisment

ನಟ ಸಿದ್ಧಾರ್ಥ್ ಹಾಗೂ ಅದಿತಿ ರಾವ್ ಹೈದರಿ ಅವರು ತೆಲಂಗಾಣದ ವನಪರ್ತಿ ಜಿಲ್ಲೆಯ ಶ್ರೀರಂಗಪುರಂನ ಶ್ರೀರಂಗನಾಯಕಸ್ವಾಮಿ ದೇವಾಲಯದಲ್ಲಿ ಹಸೆಮಣೆ ಏರಿದ್ದಾರೆ. ಇದು ಸಿದ್ಧಾರ್ಥ್ ಅವರಿಗೆ 2ನೇ ಮದುವೆಯಾಗಿದೆ. ಈ ಮೊದಲು ಅವರು 2003ರಲ್ಲಿ ಮೇಘನಾ ಎನ್ನುವರನ್ನ ವಿವಾಹವಾಗಿದ್ದರು. ಆದರೆ ಕೆಲ ಕಾರಣಗಳಿಂದ 2007ರಲ್ಲಿ ಡಿವೋರ್ಸ್ ನೀಡಿ ಮೊದಲ ಪತ್ನಿಯಿಂದ ಬೇರೆ ಇದ್ದರು.

publive-image

ಮದುವೆ ಕುರಿತು ಶೀಘ್ರದಲ್ಲೇ ಘೋಷಣೆ ಮಾಡಲಿರೋ ನಟ, ನಟಿ  

ಅದಿತಿ ರಾವ್ ಹೈದರಿ ಅವರಿಗೂ ಇದು 2ನೇ ಮದುವೆಯಾಗಿದೆ. ಅದಿತಿ ಅವರು 2012ರಲ್ಲಿ ಬಾಲಿವುಡ್​ನ ಟೆಲಿವಿಷನ್ ಹಾಗೂ ವೆಬ್​ ಸೀರಿಸ್​ನಲ್ಲಿ ನಟಿಸುವ ಸತ್ಯದೀಪ್ ಮಿಶ್ರ ಅವರನ್ನ ಮದುವೆಯಾಗಿದ್ದರು. ಆದರೆ ಕೆಲ ವರ್ಷಗಳ ನಂತರ ಅವರಿಂದ ಡಿವೋರ್ಸ್​ ಪಡೆದು ಅದಿತಿ ಬೇರೆಯಾಗಿ ಒಂಟಿಯಾಗಿ ಜೀವನ ಮಾಡುತ್ತಿದ್ದರು. ಇದೇ ವೇಳೆ ಸಿದ್ಧಾರ್ಥ್ ಜೊತೆ ಉತ್ತಮ ಸಂಬಂಧ ಬೆಳೆದು ಅದು ಪ್ರೀತಿಯಾಗಿ ಮಾರ್ಪಟ್ಟಿತ್ತು. ಹೀಗಾಗಿಯೇ ಅವರಿಬ್ಬರು ವಿವಿಧ ಸ್ಥಳಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ಬಗ್ಗೆ ಪ್ರಶ್ನೆ ಮಾಡಿದ್ರೆ, ಶೂಟಿಂಗ್, ಕ್ಯಾಸ್ಯೂವಲ್ ಮೀಟಿಂಗ್ ಎಂದು ಹೇಳಿ ತಪ್ಪಿಸಿಕೊಳ್ಳುತ್ತಿದ್ದರು. ಆದರೆ ಈಗ ಇಬ್ಬರು ಮದುವೆಯಾಗಿದ್ದಾರೆ ಎಂದು ಹೇಳುತ್ತಿದ್ದು ಈ ಗುಟ್ಟಾಗಿ ಆಗಿರುವ ಮದುವೆಯನ್ನು ಶೀಘ್ರದಲ್ಲೇ ದಂಪತಿ ಘೋಷಣೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಅಧಿಕಾರಿಗಳ ಯಡವಟ್ಟು.. ರಾಜ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ಗ್ಲುಕೋಸ್ ಹಾಕಿಸಿಕೊಂಡವ್ರಿಗೆ ನಡುಕ, ಕಣ್ಣಿನ ಸಮಸ್ಯೆ!

Advertisment

ನಟ ಸಿದ್ಧಾರ್ಥ್ ಮತ್ತು ನಟಿ ಅದಿತಿ ರಾವ್ ಹೈದರಿ ಕೆಲವು ವರ್ಷಗಳಿಂದ ಒಟ್ಟಿಗೆ ಓಡಾಡುತ್ತಿದ್ದರು. ಇದು ಇಂಡಸ್ಟ್ರ್ಟಿಯಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಆದರು ನಮ್ಮಿಬ್ಬರ ಮಧ್ಯೆ ಏನು ಇಲ್ಲ ಎಂದು ಸೈಡ್​ಲೈನ್ ಆಗುತ್ತಿದ್ದರು. ಆದರೆ ಇದೀಗ ಇಬ್ಬರು ತೆಲಂಗಾಣದ ದೇವಾಲಯವೊಂದರಲ್ಲಿ ಸರಳ ಸಮಾರಂಭದಲ್ಲಿ ಗುಟ್ಟಾಗಿ ಮದುವೆಯಾಗಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಒಂದೆರಡು ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿವೆ. ಆದರೆ ಸಿದ್ಧಾರ್ಥ್​ ಮತ್ತು ಅದಿತಿ ಅವರ ಅಧಿಕೃತ ಸೋಷಿಯಲ್ ಮೀಡಿಯಾದಲ್ಲಿ ಯಾವುದೇ ಫೋಟೋಗಳು ಶೇರ್ ಮಾಡಲಾಗಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment