ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡ ತಂದೆ
ಮಗುವಿನ ಆಗಮನದಿಂದ ಸಂತಸದಲ್ಲಿರುವ ಸಿಧು ಪೋಷಕರು
2022ರಲ್ಲಿ ಸಿಧು ಮೂಸೆವಾಲಾರನ್ನ ಗುಂಡಿಕ್ಕಿ ಕೊಲೆ ಮಾಡಿದ್ದರು
ಪಂಜಾಬಿನ ಖ್ಯಾತ ರ್ಯಾಪ್ ಸಿಂಗರ್ ದಿವಂಗತ ಸಿಧು ಮೂಸೆವಾಲಾ ಅವರ ತಾಯಿ 58ನೇ ವರ್ಷದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಶುಭ ಸಂದರ್ಭದಲ್ಲಿ ಸಿಧು ಮತ್ತೊಮ್ಮೆ ಹುಟ್ಟಿ ಬಂದಿದ್ದಾರೆ ಎಂದು ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.
ಪಂಜಾಬಿ ಗಾಯಕ ಶುಭದೀಪ್ ಸಿಂಗ್ ಸಿಧು ಅವರು ಸಿಧು ಮೂಸೆವಾಲಾ ಎಂದೇ ಫೇಮಸ್ ಆಗಿದ್ದರು. ಸದ್ಯ ಇವರ ಪೋಷಕರು ಕುಟುಂಬಕ್ಕೆ ಹೊಸ ಅತಿಥಿಯನ್ನು ಬರಮಾಡಿಕೊಂಡಿದ್ದಾರೆ. ಮಗ ಸಿಧು ಹತ್ಯೆಯ ನೋವಿನಲ್ಲಿದ್ದ ತಂದೆ, ತಾಯಿ ಗಂಡು ಮಗುವಿನ ಆಗಮನದಿಂದ ಎಲ್ಲ ಕಷ್ಟಗಳಿಂದ ಇದೀಗ ಖುಷಿ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: ಗಾಯಕ ಸಿಧು ಮೂಸೆವಾಲಾ ತಾಯಿ ಗರ್ಭಿಣಿ! ಮಗುವಿನ ನಿರೀಕ್ಷೆಯಲ್ಲಿ 50ರ ಹರೆಯದ ಚರಣ್ ಕೌರ್
ಸಿಧು ಅವರ ತಾಯಿ ಚರಣ್ ಕೌರ್ ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಸ್ವತಃ ಪತಿ ಬಲ್ಕೌರ್ ಸಿಂಗ್ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಪುಟ್ಟ ಮಗುವನ್ನು ಎತ್ತುಕೊಂಡಿರುವ ಫೋಟೋವನ್ನು ಬಲ್ಕೌರ್ ಸಿಂಗ್ ಹಂಚಿಕೊಂಡಿದ್ದು ಶುಭದೀಪ್ ಅವರನ್ನು ಪ್ರೀತಿಸುವ ಲಕ್ಷಾಂತರ ಜನರ ಆಶೀರ್ವಾದದಿಂದ ಮುದ್ದಾದ ಮಗು ನಮ್ಮ ಮನೆಯಲ್ಲಿ ಜನಿಸಿದೆ. ದೇವರ ಆಶೀರ್ವಾದದಿಂದ ಕುಟುಂಬವು ಆರೋಗ್ಯವಾಗಿದೆ ಮತ್ತು ಎಲ್ಲಾ ಹಿತೈಷಿಗಳ ಅಪಾರ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ ಎಂದು ಹೇಳಿದ್ದಾರೆ.
58 ನೇ ವಯಸ್ಸಿನಲ್ಲಿ, ಚರಣ್ ಕೌರ್ ಮಗನಿಗೆ ಜನ್ಮ ನೀಡಲು ಐವಿಎಫ್ ತಂತ್ರಜ್ಞಾನವನ್ನು ಆಯ್ಕೆ ಮಾಡಿಕೊಂಡಿದ್ದರು. ಇದಕ್ಕಾಗಿ ವಿದೇಶಕ್ಕೆ ಹೋಗಿ ಬಂದಿದ್ದರು. ಆದರೆ ಇದು ಯಶಸ್ವಿ ಆಗುವವರೆಗೆ ಯಾರಿಗೂ ತಿಳಿಸಬಾರದು ಎಂದು ಅವರ ಕುಟುಂಬದವರು ಗುಪ್ತವಾಗಿ ಇಟ್ಟಿದ್ದರು. ಈಗ ಎಲ್ಲ ಯಶಸ್ವಿಯಾದ ಹಿನ್ನೆಲೆ ಮಾಹಿತಿ ಹಂಚಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ