1980ರ ದಶಕದಲ್ಲಿ ಸಿನಿರಸಿಕರ ಹಾಟ್ ಫೇವರಿಟ್ ಆಗಿದ್ದ ಸಿಲ್ಕ್ ಸ್ಮಿತಾ
ಶೂಟಿಂಗ್ ವೇಳೆ ಆ್ಯಪಲ್ ಅರ್ಧ ಕಚ್ಚಿ ಪಕ್ಕಕ್ಕೆ ಇಟ್ಟಿ ಹೋಗಿದ್ದ ಸಿಲ್ಕ್
ಆ್ಯಪಲ್ ದೊಡ್ಡ ಮೊತ್ತದ ಹಣಕ್ಕೆ ಹರಾಜಾದ ಘಟನೆಯೇ ರೋಚಕ
1980ರ ದಶಕದಲ್ಲಿ ಹಾಟ್ ಫೇವರಿಟ್ ಆಗಿದ್ದ ಬಹುಭಾಷಾ ನಟಿ ಸಿಲ್ಕ್ ಸ್ಮಿತಾ ಈಗಲೂ ಸಿನಿರಸಿಕರಿಗೆ ಚಿರಪರಿತ. ಕನ್ನಡ, ತೆಲುಗು, ತಮಿಳು ಅಷ್ಟೇ ಯಾಕೆ ಹಿಂದಿ ಚಿತ್ರರಂಗದಲ್ಲೂ ಸಿಲ್ಕ್ ಸ್ಮಿತಾ ಸೃಷ್ಟಿಸಿದ್ದ ಹವಾ ಅಷ್ಟಿಷ್ಟಲ್ಲ. ಬಹಳಷ್ಟು ವರ್ಷಗಳ ಕಾಲ ಸಿಲ್ಕ್ ಸ್ಮಿತಾ ಬೆಳ್ಳಿ ತೆರೆಯ ಮೇಲೆ ಪ್ರೇಕ್ಷಕರ ಮನಸೂರೆಗೊಳಿಸಿದ್ದರು. ಈಗಲೂ ಸಿಲ್ಕ್ ಸ್ಮಿತಾ ಮಾದಕ ನಟನೆಗೆ ಸರಿ ಸಾಟಿ ಯಾರೂ ಇಲ್ಲ ಅಂತಾ ಅವರ ಅಭಿಮಾನಿಗಳು ಹೇಳುತ್ತಾರೆ. ಇವತ್ತು ಸಿಲ್ಕ್ ಸ್ಮಿತಾ ಅವರು ಆತ್ಮಹತ್ಯೆ ಮಾಡಿಕೊಂಡ ದಿನ. ಇಂದೇ ಅವರ ಬದುಕಿನಲ್ಲಿ ನಡೆದ ಮತ್ತೊಂದು ರೋಚಕ ಸಂಗತಿ ರಿವೀಲ್ ಆಗಿದೆ.
ಒಮ್ಮೆ ಮಾದಕ ನಟಿ ಸಿಲ್ಕ್ ಸ್ಮಿತಾ ಅವರು ಶೂಟಿಂಗ್ನಲ್ಲಿದ್ದಾಗ ಒಂದು ಸಣ್ಣ ಬ್ರೇಕ್ ತೆಗೆದುಕೊಂಡಿದ್ದರಂತೆ. ಆ ಬ್ರೇಕ್ನಲ್ಲಿ ಸಿಲ್ಕ್ ಸ್ಮಿತಾ ಆ್ಯಪಲ್ ತಿನ್ನುತ್ತಾ ಇದ್ದರು. ತಕ್ಷಣವೇ ಶೂಟಿಂಗ್ ಶುರುವಾದಾಗ ತಿನ್ನುತ್ತಿದ್ದ ಆ್ಯಪಲ್ ಅನ್ನು ಪಕ್ಕಕ್ಕೆ ಇಟ್ಟಿ ಹೋಗಿದ್ದಾರೆ. ಇದನ್ನು ಚಿತ್ರೀಕರಣದಲ್ಲಿದ್ದ ವ್ಯಕ್ತಿಯೊಬ್ಬ ಗಮನಿಸಿ ಆ ಸೇಬನ್ನು ಎತ್ತಿಕೊಂಡು ಓಡಿ ಹೋಗಿದ್ದಾನೆ. ನಂತರ ಸಿಲ್ಕ್ ಸ್ಮಿತಾ ಅರ್ಧ ಕಚ್ಚಿದ ಆ್ಯಪಲ್ ಅನ್ನು ಹರಾಜು ಮಾಡಲಾಗಿದ್ಯಂತೆ.
ನಟಿ ಸಿಲ್ಕ್ ಸ್ಮಿತಾ ಅರ್ಧ ಕಚ್ಚಿದ ಸೇಬನ್ನು ದೊಡ್ಡ ಮೊತ್ತದ ಹಣಕ್ಕೆ ಹರಾಜು ಮಾಡಲಾಗಿದೆ ಅನ್ನೋ ಮಾತುಗಿವೆ. ಕೆಲವರು ಹೇಳೋ ಪ್ರಕಾರ ಸಿಲ್ಕ್ ಸ್ಮಿತಾ ಕಚ್ಚಿದ ಸೇಬನ್ನು ಅಂದು 26 ಸಾವಿರ ಅಥವಾ 1 ಲಕ್ಷ ರೂಪಾಯಿಗೆ ಮಾರಾಟ ಮಾಡಲಾಯ್ತು ಎನ್ನಲಾಗಿದೆ. ಕಾಲಿವುಡ್ ನಟ, ಪತ್ರಕರ್ತ ಬೈಲ್ವಾನ್ ರಂಗನಾಥನ್ ಅವರು ನಟಿ ಸಿಲ್ಕ್ ಸ್ಮಿತಾ ಗಾಸಿಪ್ಗಳ ಬಗ್ಗೆ ಸದಾ ಮಾತನಾಡುತ್ತಾರೆ. ಇದೀಗ ಮತ್ತಷ್ಟು ರೋಚಕ ಸಂಗತಿಗಳನ್ನು ರಿವೀಲ್ ಮಾಡಿ ಮತ್ತೆ ಸುದ್ದಿಯಲ್ಲಿದ್ದಾರೆ.
ಇದನ್ನೂ ಓದಿ: ಬಿಗ್ಬಾಸ್ಗೆ ಹೋಗೋಕೆ ಡ್ರಾಮಾ ಮಾಡಿದ್ರಾ ವರ್ಷ ಕಾವೇರಿ- ವರುಣ್?; ಮಾಯಾವಾಗಿದ್ದೇಕೆ ಬ್ರೇಕಪ್ ಪೋಸ್ಟ್?
ಹರಾಜಿನ ಮೊತ್ತ ಊಹಾಪೋಹವಿದ್ರೂ ಸಿಲ್ಕ್ ಸ್ಮಿತಾ ಕಚ್ಚಿದ ಆ್ಯಪಲ್ಗೆ ಅವರ ಅಭಿಮಾನಿಗಳು ಜಗಳ ಮಾಡಿದ್ದರಂತೆ. ಸಿನಿಮಾ ಸೆಟ್ನಲ್ಲಿದ್ದ ಕೆಲವರು ಫೈಟಿಂಗ್ ಮಾಡಿರೋದಂತೂ ಸುಳ್ಳಲ್ಲ ಎನ್ನುತ್ತಾರೆ ಪತ್ರಕರ್ತ ಬೈಲ್ವಾನ್ ರಂಗನಾಥನ್. ಈ ಘಟನೆಯ ಮಾಹಿತಿ ಕೇಳಿದ್ರೆ 1980ರ ದಶಕದಲ್ಲೇ ಸಿಲ್ಕ್ ಸ್ಮಿತಾಗೆ ಅದೆಷ್ಟು ಅಭಿಮಾನಿಗಳು ಇದ್ದರು ಅನ್ನೋದನ್ನ ಊಹಿಸಿಕೊಳ್ಳಬಹುದು.
ಬೆಳ್ಳಿ ತೆರೆ ಮೇಲೆ ಮಹಾರಾಣಿಯಂತೆ ಮೆರೆದ ಸಿಲ್ಕ್ ಸ್ಮಿತಾ ಅವರು 1996ರಲ್ಲಿ ನಿಧನರಾದರು. ಬಹಳಷ್ಟು ಸಾಲ, ಆರ್ಥಿಕ ಹೊರೆ ಮತ್ತು ಅನೇಕ ನೋವು, ಮಾನಸಿಕ ಖಿನ್ನತೆಯಿಂದ ಅವರು ಬಳಲುತ್ತಿದ್ದರು. ತಮ್ಮ ಹೋಟೆಲ್ ಕೋಣೆಯಲ್ಲಿ ಸಿಲ್ಕ್ ಸ್ಮಿತಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರು ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ