ಹಿಂದಿ ರಿಯಾಲಿಟಿ ಶೋನಲ್ಲೂ ದಿಯಾ ಹೆಗ್ಡೆಯದ್ದೇ ಹವಾ; ಕನ್ನಡದ ಪುಟಾಣಿ ಕ್ಯೂಟ್‌ ವಿಡಿಯೋ ಇಲ್ಲಿದೆ!

author-image
Veena Gangani
Updated On
ಹಿಂದಿ ರಿಯಾಲಿಟಿ ಶೋನಲ್ಲೂ ದಿಯಾ ಹೆಗ್ಡೆಯದ್ದೇ ಹವಾ; ಕನ್ನಡದ ಪುಟಾಣಿ ಕ್ಯೂಟ್‌ ವಿಡಿಯೋ ಇಲ್ಲಿದೆ!
Advertisment
  • ಸರಿಗಮಪ ಸೀಸನ್​ 19ರ ಪೋರಿ ದಿಯಾ ಪ್ರತಿಭೆಗೆ ಎಲ್ಲರೂ ಸಖತ್‌ ಫಿದಾ
  • ‘ಇಂಡಿಯನ್ ಐಡಲ್ 14 ಶೋನಲ್ಲಿ ದಿಢೀರ್​ ಪ್ರತ್ಯಕ್ಷವಾದ ದಿಯಾ ಹೆಗ್ಡೆ
  • ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಯ್ತು ದಿಯಾ ಈ ವಿಡಿಯೋ

ಸರಿಗಮಪ ಸೀಸನ್​ 19ರ ಪೋರಿ ದಿಯಾ ಹೆಗ್ಡೆ ಪ್ರತಿಭೆಗೆ ತಲೆದೂಗದವರೇ ಇಲ್ಲ. ಈ ಪುಟಾಣಿ ಹಾಡು, ಡ್ಯಾನ್ಸ್​​ ಪ್ರೆಸೆಂಟ್​ ಮಾಡೋ ರೀತಿ ನಿಜಕ್ಕೂ ಅದ್ಭುತ. ಮುಗ್ಧ ನಗುವಿನ ದಿಯಾ ಹೆಗ್ಡೆ ಮೋಡಿಗೆ ವೀಕ್ಷಕರು ಫಿದಾ ಆಗಿದ್ರು. ದಿಯಾಗೆ ಹಿರಿಯರು-ಕಿರಿಯರು ಇದ್ಯಾವ ಮಿತಿಯೇ ಇಲ್ಲದೇ ಅಪಾರ ಅಭಿಮಾನಿ ಬಳಗ ಇದೆ. ತನ್ನ ಪ್ರತಿಭೆ ಮೂಲಕ ಮನರಂಜನೆ ನೀಡ್ತಿದ್ದಾರೆ ದಿಯಾ.

ಇದನ್ನು ಓದಿ: ಸರಿಗಮಪ ಮುಗಿದ ನಂತ್ರ ದಿಯಾ ಹೆಗ್ಡೆ ಏನ್ ಮಾಡ್ತಿದ್ದಾಳೆ.. ಸೀಸನ್ 20ಕ್ಕೆ ಅಕ್ಕ ದಿಶಾ ಹೆಗ್ಡೆ ಬರ್ತಿದ್ದಾರಾ?

publive-image

ಸದ್ಯ ದಿಯಾ ಹೆಗ್ಡೆ ಜನಪ್ರಿಯ ಹಿಂದಿಯ ‘ಇಂಡಿಯನ್ ಐಡಲ್ 14 ಗ್ರ್ಯಾಂಡ್ ಫಿನಾಲೆ’ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಸೋನಿ ಟಿವಿಯ ‘ಸೂಪರ್ ಸ್ಟಾರ್ ಸಿಂಗರ್ 3’ ರಿಯಾಲಿಟಿ ಶೋನಲ್ಲಿಯೂ ದಿಯಾ ಹೆಗ್ಡೆ ಕಾಣಿಸಿಕೊಳ್ಳಲಿದ್ದಾರೆ. ಇದೇ ಮಾರ್ಚ್ 9ರಿಂದ ಈ ಶೋ ಪ್ರಸಾರ ಆಗಲಿದೆ. ‘ಇಂಡಿಯನ್ ಐಡಲ್’ ಶೋನಲ್ಲಿ ವಿಶಾಲ್ ದದ್ಲಾನಿ, ಕುಮಾರ್ ಸಾನು, ಶ್ರೇಯಾ ಘೋಷಾಲ್ ಅವರು ಜಡ್ಜ್ ಆಗಿದ್ದಾರೆ. ಇನ್ನು ನೇಹಾ ಕಕ್ಕರ್, ಸೋನು ನಿಗಮ್ ಅವರು ಈ ಶೋಗೆ ಅತಿಥಿಯಾಗಿ ಬಂದಿದ್ದು, ದಿಯಾ ಗಾಯನವನ್ನು ಮನಸಾರೆ ಮೆಚ್ಚಿಕೊಂಡಿದ್ದಾರೆ.

publive-image

publive-image

ಸೋನು ನಿಗಮ್ ಅವರು ಸಿಂಗಿಂಗ್ ರಿಯಾಲಿಟಿ ಶೋಗೆ ಅತಿಥಿಯಾಗಿ ಬರೋದು ಅಪರೂಪ. ಅದರಲ್ಲೂ ಈ ಶೋಗೆ ದಿಯಾ ಬಂದಿದ್ದು ಇನ್ನೂ ವಿಶೇಷ.  ಜೀ ಕನ್ನಡ ಸರಿಗಮಪ ಸೀಸನ್ 10ರ ಫೈನಲಿಸ್ಟ್ ಆಗಿದ್ದ ದಿಯಾ ಹೆಗ್ಡೆ ವಿಭಿನ್ನವಾದ ಹಾಡು, ಡ್ಯಾನ್ಸ್‌ನಿಂದಲೇ ಎಲ್ಲರ ಗಮನ ಸೆಳೆದಿದ್ದರು. ರಕ್ಷಿತಾ ಪ್ರೇಮ್, ವಿಜಯ್ ಪ್ರಕಾಶ್, ಅರ್ಜುನ್ ಜನ್ಯ, ಹಂಸಲೇಖ ಕೂಡ ಈ ಪೋರಿಯ ಹಾಡು ಕೇಳಿ ಚಪ್ಪಾಳೆ ತಟ್ಟಿ ಭೇಷ್ ಎಂದಿದ್ದರು. ಇದೀಗ ಹಿಂದಿಯ ‘ಇಂಡಿಯನ್ ಐಡಲ್ 14ರಲ್ಲಿ ದಿಯಾ ಭಾಗಿಯಾಗಿದ್ದು ಕನ್ನಡಿಗರಿಗೆ ಹೆಮ್ಮೆಯ ವಿಚಾರ. ಸದ್ಯ ದಿಯಾ ಹೆಗ್ಡೆ ‘ಮೇರೆ ಖ್ವಾಬೊನ್ ಮೇ ಜೋ ಆಯೆ’ ಎಂಬ ಹಿಂದಿ ಹಾಡನ್ನು ಹಾಡಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment