newsfirstkannada.com

×

ನಾ ಡ್ರೈವರಾಽ.. ಇದೇನ್ ಮ್ಯಾಟರಾಽ.. ಗ್ಯಾಂಗ್​ ಕಟ್ಟಿಕೊಂಡು ಮಹಿಳೆಯರ ಮೇಲೆ ಹಲ್ಲೆ ಮಾಡಿದ್ರಾ ಮಾಳು ನಿಪನಾಳ್?

Share :

Published November 4, 2024 at 6:48pm

Update November 4, 2024 at 6:49pm

    ಒಂದು ಟೈಮ್​ನಲ್ಲಿ ಟ್ರೆಂಡ್​ ಸೆಟ್ ಮಾಡಿದ್ದ ಈ ಮಾಳು ನಿಪನಾಳ

    ನಾ ಡ್ರೈವರ್ ನನ್ನ ಲವರ್ ಹಾಡಿನ ಗಾಯಕನಿಂದ ಮಾರಣಾಂತಿಕ ಹಲ್ಲೆ!

    ರಾಯಬಾಗ ಪೊಲೀಸ್ ಠಾಣೆಯಲ್ಲಿ ಗಾಯಕ ಮೇಲೆ ಬಿತ್ತು ಕೇಸ್​

‘ನಾ ಡ್ರೈವರಾ.. ನೀ ನನ್ನ ಲವ್ವರಾ’ ಅಂತ ಫೇಮಸ್​ ಆದವನು, ಈ ದಿನ ಇದು ನಮ್ಮೂರ, ನಮ್ಮುಡು ಇಷ್ಟ ಬಂದಂಗ ಹೊಡಿತಾರಾ ಅಂತಿದ್ದಾನಂತೆ. ಹಾವಿನ ಗಂಡ ಖ್ಯಾತ ಗಾಯಕ ಮಾಳು ಅಣ್ಣನ ಗ್ಯಾಂಗ್​​, ಕಂಠ ಪೂರ್ತಿ ಕುಡಿದು, ಅಮಾಯಕರ ಮೇಲೆ ತಾಕತ್​ ಹಚ್ಯಾರ ಅನ್ನೋ ಆರೋಪ ಕೇಳಿ ಬರ್ತಿದೆ. ನಡೋ ರಸ್ತೆಯಲ್ಲಿ ಹೆಣ್ಣು ಅಂತಲೂ ನೋಡದೇ ಗಂಭೀರ ಗಾಯಗೊಳಿಸಿ, ಮನಬಂದಂತೆ ಥಳಿಸಿ ಆಸ್ಪತ್ರೆ ಪಾಲು ಮಾಡಿದ್ದಾರೆ.

ಇದನ್ನೂ ಓದಿ: ಮರು ಮದುವೆಯಾದ ಸನ್ನಿ ಲಿಯೋನ್​! ಪ್ರೀತಿಯ ಪತಿಗೆ ಮಕ್ಕಳ ಮುಂದೆಯೇ ಮುತ್ತಿಟ್ಟ ಸೇಸಮ್ಮ

ಉತ್ತರ ಕರ್ನಾಟಕದ ಈ ಆಲ್ಬಮ್​​ ಸಾಂಗ್​ ಒಂದು ಟೈಮ್​ನಲ್ಲಿ ಟ್ರೆಂಡ್​ ಸೆಟ್​ ಮಾಡಿಬಿಟ್ಟಿತ್ತು. ಇದು ಬರಿ ಉತ್ತರ ಕರ್ನಾಟಕದ ಜನತೆಗಷ್ಟೇ ಇಷ್ಟ ಆಗಿರ್ಲಿಲ್ಲ. ಇಡೀ ಕರ್ನಾಟಕಕ್ಕೆ ಮಸ್ತ್​ ಹಿಡಿಸಿತ್ತು. ಸೋಷಿಯಲ್​ ಮೀಡಿಯಾದಲ್ಲಿ ಇಂದೊಂದು ಮತ್ತೊಂದು ಅಲೆ ಸೃಷ್ಟಿಸಿದ್ದ ಸಾಂಗ್​​. ಅದೆಲ್ಲಾ ಹಳೆ ಕಥೆ.. ಈಗ ಈ ಸಾಂಗ್​ ಬಗ್ಗೆ ಹೇಳೋಕೆ ಕಾರಣ ಆ ಹುಡುಗ ಮತ್ತೆ ಟ್ರೆಂಡ್​​​ ಆಗ್ತಿದ್ದಾನೆ. ಅದು ಸಾಂಗ್​​ನಿಂದ ಅಲ್ಲ, ಅವನು ಮಾಡಿದ ಹಲ್ಲೆಯಿಂದ.

ಮಾಳು ನಿಪನಾಳ ನಾ ಡ್ರೈವರಾಽ.. ನನ್ನ ಲವ್ವರಾಽ.. ಅಂತ ಇಡೀ ಕರ್ನಾಟಕದ ಕಣ್ಣಿಗೆ ಬಿದ್ದ ಹುಡುಗ.​ ಒಂದು ಸಾಂಗ್​ನಿಂದಲೇ ನೇಮು ಫೇಮು ಪಡೆದಿದ್ದ ಈ ಹುಡುಗ. ಈಗ ದರ್ಪ ತೋರಿ ಜನರ ಮೇಲೆ ಹಲ್ಲೆ ಮಾಡುವ ಮಟ್ಟಕ್ಕೆ ಫೇಮ್​ ಆಗಿದ್ದಾನೆ ಅನ್ನೋ ಆರೋಪ ಇದೆ. ಉತ್ತರ ಕರ್ನಾಟಕದ ಆಲ್ಬಮ್​​ ಸಾಂಗ್​ಗಳಲ್ಲಿ ನಟನೆ ಮಾಡ್ತಾ, ಹಾಡುಗಳನ್ನ ಹಾಡ್ತಿದ್ದ ಹುಡುಗ, ಅಲ್ಲಿನ ಹುಡುಗರಿಗೆ ಹಾವಿನ ಗಂಡ ಅಂತ ಫೇಮಸ್​​​ ಆಗಿದ್ದಾನೆ.

ಉತ್ತರ ಕರ್ನಾಟಕದಲ್ಲಿ ಈ ರೀತಿಯ ಜಾನಪದದಂಥಾ ಹಾಡುಗಳಿಗೆ ಇವತ್ತಿಗೂ ಬೇಡಿಕೆ ಇದೆ. ಅಕ್ಕ ನಿನ್​ ಮಗಳ್​ ನಂಗೆ ಚಿಕ್ಕೋಳಾಗಲ್ವಾ.. ಅನ್ನೋ ಸಾಂಗ್​ನಿಂದ, ಚುಟು ಚುಟು ಅತೈತೆ ಅನ್ನೋ ಸಾಂಗ್​ ವರೆಗೂ ಎಲ್ಲಾವೂ ರಾಜ್ಯಾದ್ಯಾಂತ ಹೆಸರು ಪಡೆದಂತ ಸಾಂಗ್​ಗಳೆ. ಹಾಗೆ ಮಾಳು ನಿಪನಾಳ ಕೂಡ ನಾ ಡ್ರೈವರಾಽ ಅಂತ ಒಂದು ಸಾಂಗ್​ನಿಂದ ಫೇಮಸ್​ ಆಗ್ಬಿಟ್ಟಿದ್ದ. ಅಷ್ಟೇ ಯಾಕೆ ಇತ್ತೀಚೆಗೆ ಉಪೇಂದ್ರ ಅವರ ಯುಐ ಮೂವಿಯ ಟ್ರೋಲ್​ ಸಾಂಗ್​ನಲ್ಲೂ ಈ ಸಾಲು ಟ್ರೆಂಡ್​ ಆಗಿತ್ತು. ಅಷ್ಟೇ ಯಾಕೇ, ಕರಟಕ ದಮನಕ ಹಿತ್ತಲಕ ಕರಿಬೇಡ ಮಾವ ಹಾಡನ್ನ ಯೋಗರಾಜ್ ಭಟ್ ಈತನಿಂದಲೇ ಹಾಡಿಸಿದ್ದರು. ಜಾನಪದ ಗಾಯನದ ಹಿನ್ನೆಲೆ ಇರುವ ಮಾಳು ನಿಪನಾಳ, ಕೆಲ ಹುಡುಗರನ್ನ ಕೂಡಿಸಿಕೊಂಡು ಹಾಡುಗಳನ್ನ ಮಾಡ್ತಾ ಇದ್ದ. ಅದೇ ಹುಡುಗರನ್ನ ತನ್ನ ಗ್ಯಾಂಗ್​ ಆಗಿ ಮಾಡಿಕೊಂಡಿದ್ದ ಅನ್ನೋ ಮಾತುಗಳು ಉತ್ತರ ಕರ್ನಾಟಕದವರಲ್ಲಿದೆ. ಭಾನುವಾರ ರಾತ್ರಿ ಅದೇ ಗ್ಯಾಂಗ್​​ ಒಂದು ಫ್ಯಾಮಿಲಿ ಮೇಲೆ ಕುಡಿದು ಮಾರಣಾಂತಿಕ ಹಲ್ಲೆ ನಡೆಸಿದೆ ಅನ್ನೋ ಆರೋಪ ಕೇಳಿ ಬರ್ತಿದೆ.

ಇದನ್ನೂ ಓದಿ: ಡಯಾಬಿಟೀಸ್​ ತಡೆಯಲು ಇದೆ ಸರಳ ದಾರಿ; ನಿಮ್ಮ ಮಗುವಿಗೆ ಆರಂಭಿಕ 1000 ದಿನ ಈ ಆಹಾರ ನೀಡಬೇಡಿ

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಪನಾಳ ಗ್ರಾಮದ ಮಾಳು ನಿಪನಾಳ ಮೇಲೆ ಹಲ್ಲೆ ಆರೋಪ ಮಾಡ್ತಿರೋ ಈ ಶೇಖರ್ ಹಕ್ಯಾಗೋಳ ಗಂಭೀರ ಗಾಯಗಳಿಂದ ಆಸ್ಪತ್ರೆ ಸೇರಿದ್ದಾರೆ. ಮಾಳು ನಿಪನಾಳ ಹಾಗೂ ಗ್ಯಾಂಗ್​​​, ಕುಡಿದ ಮತ್ತಲ್ಲಿದ್ರು ಎನ್ನಲಾಗ್ತಿದೆ. ಇದು ನಮ್ಮ ಊರು, ನೀವು ನಮಗೆ ಪ್ರಶ್ನೆ ಮಾಡುವ ಹಾಗಿಲ್ಲ. ನಮಗೆ ಹೇಗೆ ಇಷ್ಟಬರತ್ತೋ ಹಾಗೇ ಗಾಡಿ ಓಡಿಸುತ್ತೇವೆ. ಯಾರನ್ನಾದ್ರೂ ಕರೆಸೋದಿದ್ರೆ ಕರೆಸಿ ಅಂತ ಹೇಳಿದ್ದಾರಂತೆ. ಶೇಖರ್ ಹಕ್ಯಾಗೋಳ ಸೇರಿ ಅಲ್ಲಿದ್ದ ಇಬ್ಬರು ಮಹಿಳೆಯರ ಮೇಲೂ ಹಲ್ಲೆ ಮಾಡಿದ್ದಾರಂತೆ. ಅವರನ್ನು ಗಾಯಗೊಳಿಸಿ, ಮೈಮೇಲೆ‌ ಇದ್ದ ಒಡವೆಗಳನ್ನ ಹರಿದು ಹಾಕ್ಕಿದ್ದಾರಂತೆ. ಗಂಭೀರವಾಗಿ ಗಾಯಗೊಂಡವರು ಚಿಕ್ಕೋಡಿ ತಾಲೂಕಿನ ಕೇರೂರು ಗ್ರಾಮದವರಾಗಿದ್ದಾರೆ. ಗಾಯಾಳುಗಳಿಗೆ ಚಿಕ್ಕೋಡಿ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಕ ಮಾಳು, ಇವರಿಗೆ ಪರಿಚಯವೇ ಇಲ್ಲ. ಕೇವಲ ಱಷ್​​ ಡ್ರೈವಿಂಗ್​ ಪ್ರಶ್ನಿಸಿದ್ದಕ್ಕೆ ಈ ರೀತಿಯ ಹಲ್ಲೆ ಮಾಡಿರೋದಾಗಿ, ಕುಟುಂಬಸ್ಥರು ಆರೋಪಿಸಿದ್ದಾರೆ.

ಮಾಳುವಿನ ಮೇಲೆ ಹಲ್ಲೆ ಆರೋಪಗಳು ಇದೆ ಮೊದಲಲ್ಲ ಅನ್ನೋದು ಇಲ್ಲಿ ಸ್ಪಷ್ಟವಾಗಿದೆ. ಈ ಹಿಂದೆ ಕೂಡ ಮಾಮಾನ ಬುಲೆಟ್ ಗಾಡಿ ಹಾಡಿನ ಗಾಯಕನ ಮೇಲೆ ಇದೇ ನಾ ಡ್ರೈವರ್ ನನ್ನ ಲವರ್ ಹಾಡಿನ ಗಾಯಕನಿಂದ ಮಾರಣಾಂತಿಕ ಹಲ್ಲೆಯಾಗಿತ್ತು ಎನ್ನಲಾಗ್ತಿದೆ. ರಾಯಬಾಗ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಗಾಯಕ ಮಾಳು ನಿಪನಾಳ್​ ಮತ್ತವನ ಸ್ನೇಹಿತರ ವಿರುದ್ಧ ದೂರು ದಾಖಲಾಗಿದೆ. ಗಾಯಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ ನ್ಯಾಯಕ್ಕಾಗಿ ಕಾಯುತ್ತಿದ್ದಾರೆ. ಒಟ್ಟಿನಲ್ಲಿ ಮಧ್ಯರಾತ್ರಿ ಬಂದ ಫೇಮಸ್​ ಜೋಪಾನವಾಗಿ ಇಟ್ಕೊಂಡು ಕಾಪಾಡಿಕೊಳ್ಬೇಕಿತ್ತು. ಹುಡುಗರು ಕೊಟ್ಟ ಹಾವಿನ ಗಂಡ, ಹಚ್ರ ತಾಕತ್​ ಅನ್ನೋ ಟೈಟಲ್​ಗೆ ತಕ್ಕ ಗಂಡ ಅಂತ ಪ್ರೂವ್​ ಮಾಡೋಕೆ ಹೋಗಿ ಇಂಥಾ ಸ್ಥಿತಿಗೆ ಮಾಳು ಬಿದ್ದುಬಿಟ್ನಾ ಅನ್ನೋ ಸಂಶಯಗಳು ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡ್ತಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾ ಡ್ರೈವರಾಽ.. ಇದೇನ್ ಮ್ಯಾಟರಾಽ.. ಗ್ಯಾಂಗ್​ ಕಟ್ಟಿಕೊಂಡು ಮಹಿಳೆಯರ ಮೇಲೆ ಹಲ್ಲೆ ಮಾಡಿದ್ರಾ ಮಾಳು ನಿಪನಾಳ್?

https://newsfirstlive.com/wp-content/uploads/2024/11/mallu.jpg

Load More