/newsfirstlive-kannada/media/post_attachments/wp-content/uploads/2024/03/usha-1.jpg)
ಬೆಂಗಳೂರು: ನನ್ನ ಬಳಿ ಹುಡುಕಿದರೇ ಸುಮಾರು 500 ಸೀರೆಗಳು ಇರಬಹುದು. ಜನರು ನನ್ನ ಪ್ರತಿ ದಿನ ನೋಡುವುದಿಲ್ಲ. ಹೀಗಾಗಿ ಜನರು ಭಿನ್ನ ವಿಭಿನ್ನ ಸೀರೆಯಲ್ಲಿ ನನ್ನನ್ನೂ ನೋಡುತ್ತಾರೆ ಎಂದು ಭಾರತದ ಖ್ಯಾತ ಗಾಯಕಿ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತೆ ಉಷಾ ಉತ್ತುಪ್ ಅವರು ಹೇಳಿದ್ದಾರೆ.
ಈ ಬಗ್ಗೆ ಹಿರಿಯ ಪತ್ರಕರ್ತೆ ಅರ್ಚನಾ ರವಿಕುಮಾರ್ ನಡೆಸಿದ ನ್ಯೂಸ್ಫಸ್ಟ್ ಪ್ರೈಮ್ ಸಂದರ್ಶನದಲ್ಲಿ ಗಾಯಕಿ ಉಷಾ ಉತ್ತುಪ್ ಮನಬಿಚ್ಚಿ ಮಾತಾಡಿದ್ರು. ಈ ವೇಳೆ ಪತ್ರಕರ್ತೆ ಅರ್ಚನಾ ರವಿಕುಮಾರ್ ಅವರು ಉಷಾ ಉತ್ತುಪ್ ಅವರ ಬಳಿ ಇರುವ ಸೀರೆಯ ಕಲೆಕ್ಷನ್ ಬಗ್ಗೆ ಕೇಳಿದ್ದಾರೆ.
ಇದನ್ನು ಓದಿ: Video: ಉಷಾ ಉತ್ತುಪ್ ಹಾಕುವ ಬಿಂದಿಗೂ ಕರ್ನಾಟಕಕ್ಕೂ ಸಂಬಂಧವಿದೆ! ಬೇಕಿದ್ರೆ ಅವರ ಬಾಯಲ್ಲೇ ಕೇಳಿ
ಇದಕ್ಕೆ ಉತ್ತರಿಸಿದ ಉಷಾ ಉತ್ತುಪ್ ಅವರು, ನನ್ನ ಬಳಿ ಜಾಸ್ತಿ ಸೀರೆಗಳು ಇವೆ ಎಂದು ತುಂಬಾ ಜನ ಅಂದುಕೊಳ್ಳುತ್ತಾರೆ. ಆದರೆ ನನ್ನ ಬಳಿ ಸಾವಿರ ಸೀರೆಗಳಿಗಿಂತ ಕಮ್ಮಿ ಇವೆ. ಬಹುಶಃ ಹುಡುಕಿದರೆ ನನ್ನ ಬಳಿ 500 ಸೀರೆಗಳು ಇರಬಹುದು. ಜನರು ನನ್ನ ಪ್ರತಿ ದಿನ ನೋಡುವುದಿಲ್ಲ. ಹೀಗಾಗಿ ಜನರು ಭಿನ್ನ ವಿಭಿನ್ನ ಸೀರೆಯಲ್ಲಿ ನನ್ನನ್ನೂ ನೋಡುತ್ತಾರೆ ಎಂದರು.
ಇನ್ನು, ಫುಡ್ ಬಗ್ಗೆ ಮಾತಾಡಿದ ಉಷಾ ಉತ್ತುಪ್ ಅವರು, ಆಹಾರವು ಅದ್ಭುತವಾಗಿದೆ. ಏಕೆಂದರೆ ನಾನು ಸಸ್ಯಾಹಾರಿ ಆಗಿರುವುದರಿಂದ ನನಗೆ ದಕ್ಷಿಣ ಭಾರತೀಯ ಎಲ್ಲಾ ಆಹಾರ ತುಂಬಾನೇ ಇಷ್ಟ ಆಗುತ್ತದೆ. ಅದರಲ್ಲೂ ನನಗೆ ಕಡಲೆಕಾಯಿ ತುಂಬಾನೇ ಇಷ್ಟ. ಇದರ ಜೊತೆಗೆ ನನಗೆ ದೋಸೆ ಕೂಡ ಇಷ್ಟ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ